ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಕಾಶ್ ದೀಪ್ ಐದು ವಿಕೆಟ್ ಸಾಧನೆ; 356ಕ್ಕೆ ನ್ಯೂಜಿಲೆಂಡ್‌ ಆಲೌಟ್‌

NZ vs IND 2nd Test: ಆಕಾಶ್ ಅವರ ಈ ಸಾಧನೆಯು ಅವರಿಗೆ ಒಂದು ವಿಶೇಷ ಗುಂಪಿನಲ್ಲಿ ಸ್ಥಾನವನ್ನೂ ತಂದುಕೊಟ್ಟಿತು. ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಐದು ವಿಕೆಟ್‌ಗಳನ್ನು ಪಡೆದ, 'ಸ್ಟಾಟ್ಸ್‌ಗುರು' (Statsguru) ದಾಖಲೆಗಳ ಪ್ರಕಾರ ಐದನೇ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಆಕಾಶ್ ದೀಪ್ ಐದು ವಿಕೆಟ್ ಸಾಧನೆ; 356ಕ್ಕೆ ನ್ಯೂಜಿಲೆಂಡ್‌ ಆಲೌಟ್‌

Akash Deep -

Abhilash BC
Abhilash BC Nov 28, 2026 8:38 AM

ಕ್ರೈಸ್ಟ್‌ಚರ್ಚ್‌, ನ.28: ಶನಿವಾರ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಆಕಾಶ್ ದೀಪ್ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು. ಇವರ ಪ್ರದರ್ಶನದ ನೆರವಿನಿಂದ ಭಾರತ ತಂಡವು ನ್ಯೂಜಿಲೆಂಡ್‌ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ಗಳಿಗೆ ಆಲೌಟ್‌ ಮಾಡಿತು.

ಬಂಗಾಳದ ಈ ವೇಗದ ಬೌಲರ್ 99 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಕಿವೀಸ್‌ ಬ್ಯಾಟರ್‌ಗಳನ್ನು ಕಾಡಿದರು. ಮತ್ತೊಂದೆಡೆ, ಅನುಭವಿ ಜಸ್ಪ್ರೀತ್ ಬುಮ್ರಾ ಕನಿಷ್ಠ ಒಂದು ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ವಿದೇಶಿ ಟೆಸ್ಟ್ ಪಂದ್ಯವೊಂದರ ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯಲು ವಿಫಲರಾದರು. ಕ್ರೈಸ್ಟ್‌ಚರ್ಚ್‌ನಲ್ಲಿ ಶಿಸ್ತುಬದ್ಧ ಪ್ರದರ್ಶನ ನೀಡಿದ್ದ ಬುಮ್ರಾ ಈ ಪಂದ್ಯದಲ್ಲಿ 45.4 ಓವರ್‌ಗಳನ್ನು ಎಸೆದರೂ ವಿಕೆಟ್ ಪಡೆಯಲಿಲ್ಲ.

5 ವಿಕೆಟ್‌ಗೆ 246 ರನ್‌ ಗಳಿಸಿದಲ್ಲಿಂದ ಆಟ ಮುಂದುವರಿಸಿದ ನ್ಯೂಜಿಲೆಂಡ್, ಟಾಮ್ ಬ್ಲಂಡೆಲ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದರಿಂದ ದೊಡ್ಡ ಮೊತ್ತವನ್ನು ಕಲೆಹಾಕುವ ಭರವಸೆ ಮೂಡಿಸಿತ್ತು. ಆದರೆ, ಆಕಾಶ್ ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಸತತವಾಗಿ ಔಟ್ ಮಾಡುವ ಮೂಲಕ ಅಂತಿಮವಾಗಿ ಐದು ವಿಕೆಟ್‌ಗಳನ್ನು ಪೂರೈಸಿದರು. ಪರಿಣಾಮವಾಗಿ ಆತಿಥೇಯ ತಂಡವು 116.3 ಓವರ್‌ಗಳಲ್ಲಿ 356 ರನ್‌ಗಳಿಗೆ ಆಲೌಟ್ ಆಯಿತು. ಬ್ಲಂಡೆಲ್ ವಿಕೆಟ್‌ ಬಿಳುದರೊಂದಿಗೆ ನ್ಯೂಜಿಲೆಂಡ್‌ ಆಲೌಟ್‌ ಆಯಿತು.

ಅವರು 211 ಎಸೆತಗಳನ್ನು ಎದುರಿಸಿ, ದಿಟ್ಟ ಹೋರಾಟದೊಂದಿಗೆ 89 ರನ್ ಗಳಿಸಿ ನಿರ್ಗಮಿಸಿದರು. ತಮ್ಮ ತಾಳ್ಮೆಯಿಂದ ಹಾಗೂ ಆಗಾಗ್ಗೆ ಆಡಿದ ಆಕ್ರಮಣಕಾರಿ ಹೊಡೆತಗಳಿಂದ ಅವರು ಭಾರತೀಯ ಬೌಲರ್‌ಗಳಿಗೆ ತೀವ್ರ ನಿರಾಶೆ ಉಂಟುಮಾಡಿದರು.

ಸಯ್ಯದ್ ಮುಷ್ತಾಕ್ ಅಲಿ ಟಿ20; ಮುಂಬೈ ತಂಡ ಸೇರಿದ ಶ್ರೇಯಸ್ ಅಯ್ಯರ್

ಆಕಾಶ್ ಅವರ ಈ ಸಾಧನೆಯು ಅವರಿಗೆ ಒಂದು ವಿಶೇಷ ಗುಂಪಿನಲ್ಲಿ ಸ್ಥಾನವನ್ನೂ ತಂದುಕೊಟ್ಟಿತು. ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಐದು ವಿಕೆಟ್‌ಗಳನ್ನು ಪಡೆದ, 'ಸ್ಟಾಟ್ಸ್‌ಗುರು' (Statsguru) ದಾಖಲೆಗಳ ಪ್ರಕಾರ ಐದನೇ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಗ್ಲೆನ್ ಫಿಲಿಪ್ಸ್ 36 ರನ್‌ ಗಳಿಸಿದರು. ಆಕಾಶ್ ದೀಪ್ ರಿಟರ್ನ್ ಕ್ಯಾಚ್ ತೆಗೆದುಕೊಂಡು ನಾಥನ್ ಸ್ಮಿತ್ ಅವರನ್ನು 26 ರನ್‌ಗಳಿಗೆ ಔಟ್ ಮಾಡಿದರು. ನಂತರ ಆಕಾಶ್ 19 ರನ್‌ಗಳಿಗೆ ಕೈಲ್ ಜೇಮಿಸನ್ ಅವರನ್ನು ಔಟ್ ಮಾಡಿದರು, ಯಶಸ್ವಿ ಜೈಸ್ವಾಲ್ ಡೀಪ್ ಮಿಡ್-ವಿಕೆಟ್‌ನಲ್ಲಿ ಉತ್ತಮ ಡೈವಿಂಗ್ ಕ್ಯಾಚ್ ಪಡೆದರು.