On This Day In 1992: ಕಪಿಲ್ ದೇವ್ ಮಂಕಡಿಂಗ್ ರನೌಟ್‌ಗೆ 33 ವರ್ಷ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹೊಂದು ರನೌಟ್ ಅನ್ನು ಭಾರತದ ವಿನೂ ಮಂಕಡ್ ಮಾಡಿದ್ದರು. ಆದ್ದರಿಂದ ಅದನ್ನು 'ಮಂಕಡಿಂಗ್' ಎಂದೂ ಕರೆಯಲಾಗುತ್ತಿತ್ತು. ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್(Kapil Dev) 1992–93(On This Day In 1992)ರಲ್ಲಿ ಮಂಕಡಿಂಗ್ ಮಾಡಿದ ಘಟನೆಗೆ ಇಂದಿಗೆ 33 ವರ್ಷ.
Kapil Dev -
ಬೆಂಗಳೂರು, ಡಿ.8: ಒಂದು ಕಾಲದಲ್ಲಿ ಮಂಕಡಿಂಗ್ ರನೌಟ್ ಮಾಡಿದರೆ ‘ನಿಯಮಬಾಹಿರ’, ‘ಕ್ರೀಡಾಸ್ಪೂರ್ತಿಗೆ ವಿರುದ್ಧ’ ಎನ್ನಲಾಗುತ್ತಿತ್ತು. ಆದರೆ ಎಂಸಿಸಿಯು ಈಚೆಗೆ ನಿಯಮ ತಿದ್ದುಪಡಿ ಮಾಡಿದೆ. ಈಗ ನಾನ್‌ಸ್ಟ್ರೈಕರ್ ಬ್ಯಾಟರ್‌ಗಳು ಈಗ ಕ್ರೀಸ್ ಬಿಟ್ಟು ಮುಂದೆ ಹೆಜ್ಜೆ ಹಾಕಲು ಹಲವು ಬಾರಿ ಯೋಚಿಸಬೇಕಿದೆ. ಹೌದು ಇತ್ತೀಚೆಗೆ ಪರಿಷ್ಕರಣೆಗೊಂಡ ‘ಮಂಕಡಿಂಗ್’ ನಿಯಮದಲ್ಲಿ ನಾನ್‌ಸ್ಟ್ರೈಕರ್ ಬ್ಯಾಟರ್ ಎಸೆತಕ್ಕೂ ಮುನ್ನವೇ ಕ್ರೀಸ್ ಬಿಟ್ಟಾಗ ಬೌಲರ್ ಔಟ್ ಮಾಡಿದರೆ ರನೌಟ್ ಎಂದು ಘೋಷಣೆಯಾಗುತ್ತದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹೊಂದು ರನೌಟ್ ಅನ್ನು ಭಾರತದ ವಿನೂ ಮಂಕಡ್ ಮಾಡಿದ್ದರು. ಆದ್ದರಿಂದ ಅದನ್ನು 'ಮಂಕಡಿಂಗ್' ಎಂದೂ ಕರೆಯಲಾಗುತ್ತಿತ್ತು. ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್(Kapil Dev) 1992–93(On This Day In 1992)ರಲ್ಲಿ ಮಂಕಡಿಂಗ್ ಮಾಡಿದ ಘಟನೆಗೆ ಇಂದಿಗೆ 33 ವರ್ಷ.
ಹೌದು, 1992–93ರ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಪೀಟರ್ ಕರ್ಸ್ಟನ್ ಅವರಿಗೆ ಕಪಿಲ್ ದೇವ್ ಮೊದಲ ಬಾರಿಗೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಪೀಟರ್ ಕರ್ಸ್ಟನ್ ಮುಂದಿನ ಎಸೆತದಲ್ಲಿ ಮತ್ತೆ ಕ್ರೀಸ್ ಬಿಟ್ಟು ಮುಂದೆ ಸಾಗಿದರು. ಈ ವೇಳೆಯೂ ಕಪಿಲ್ ಎಚ್ಚರಿಕೆ ನೀಡಿರು. ಆದರೆ ಪೀಟರ್ ನಿರ್ಲಕ್ಷ್ಯ ಮಾಡಿದ್ದರು. ಮೂರನೇ ಬಾರಿ ಕಪಿಲ್ ಪಿತ್ತ ನೆತ್ತಿಗೇರಿತ್ತು. ಅವರು ಔಟ್ ಮಾಡಿದರು. ಅಂಪೈರ್‌ಗೆ ವಿಕೆಟ್‌ಗಾಗಿ ಮನವಿಯನ್ನೂ ಮಾಡಿದ್ದರು. ಪೀಟರ್ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಲೇ ಪೆವಿಲಿಯನ್‌ನತ್ತ ಹೆಜ್ಜೆಹಾಕಿದ್ದರು. ಆಗ ಪಿಲ್ ಬಗ್ಗೆ ಕೆಲವು ವಿದೇಶಿ ಆಟಗಾರರು ಟೀಕೆಗಳ ಮಳೆ ಸುರಿಸಿದ್ದರು.
ಇವತ್ತು ಕ್ರಿಕೆಟ್ ಪ್ರಮುಖ ವಾಣಿಜ್ಯ ಚಟುವಟಿಕೆಯಾಗಿ ಬೆಳೆದಿದೆ. ಸಾವಿರಾರು ಕೋಟಿ ರೂಪಾಯಿಯ ವ್ಯವಹಾರ ಇದಾಗಿದೆ. ‘ಫೇರ್ ಪ್ಲೇ’ ಎಂಬುದು ಹಿಂದೆಂದಿಗಿಂತಲೂ ಇಂದು ಮುಖ್ಯವಾಗಿದೆ. ಆದ್ದರಿಂದ ಕಾಲಕಾಲಕ್ಕೆ ನಿಯಮಗಳಲ್ಲಿ ಬದಲಾವಣೆಗಳು ಅಗತ್ಯವಾಗಿ ಆಗುತ್ತಿವೆ. ಒಂದು ಸಮಯದಲ್ಲಿ ಅಂಪೈರ್ ನಿರ್ಣಯವೇ ಅಂತಿಮ ಎನ್ನುವ ಮಾತಿತ್ತು. ಆದರೆ ಈಗ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಜಾರಿಯಾಗಿದೆ.
ಇದನ್ನೂ ಓದಿ IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್ ಹೆಸರಿಸಿದ ಏಡೆನ್ ಮಾರ್ಕ್ರಮ್!
ಟಿ20 ಕ್ರಿಕೆಟ್ ಕಾಲಘಟ್ಟದಲ್ಲಿ ಪ್ರತಿಯೊಂದು ರನ್ ಅಥವಾ ಎಸೆತ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲವು. ಇಂತಹ ಪರಿಸ್ಥಿತಿಯಲ್ಲಿ ಬೌಲರ್ ಎಸೆತ ಹಾಕುವ ಮುನ್ನವೇ ನಾನ್‌ಸ್ಟ್ರೈಕರ್ ಬ್ಯಾಟರ್ ಕಾಲು ಭಾಗ ಪಿಚ್ ದಾಟಿ ಓಡಿದ್ದರೆ, ಅತ್ತಣಿಂದ ಬ್ಯಾಟರ್ ಚೆಂಡನ್ನು ಹೊಡೆದು ಓಡಿದಾಗ ಒಂದು ರನ್ ಪಡೆಯುವುದು ಸುಲಭ. ನಾನ್‌ಸ್ಟ್ರೈಕರ್ ಓಡುವ ದಿಕ್ಕು ಯಾವಾಗಲೂ ಸುರಕ್ಷಿತ ವಲಯವೇ ಆಗಿರುವುದು ಹೆಚ್ಚು. ಆದ್ದರಿಂದ ಮಂಕಡಿಂಗ್ ನಿಯಮದಲ್ಲಿ ಬದಲಾವಣೆ ಅಪೇಕ್ಷಣಿಯವೇ ಆಗಿತ್ತು.