ಜೆ.ಕೆ ಟೈರ್ ರೇಸಿಂಗ್ ಚಾಂಪಿಯನ್‌ಶಿಪ್: ಬೆಂಗಳೂರಿನ ಅನಿಶ್ ಶೆಟ್ಟಿ, ಧ್ರುವ್ ಗೋಸ್ವಾಮಿ ಜಯಭೇರಿ!
ಕೊಯಮತ್ತೂರಿನಲ್ಲಿ ನಡೆದ ಜೆಕೆ ಟೈಯರ್ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಅನಿಶ್ ಶೆಟ್ಟಿ ಹಾಗೂ ಧ್ರುವ್ ಗೋಸ್ವಾಮಿ ವಿವಿಧ ವಿಭಾಗಗಳಲ್ಲಿ ಜಯ ದಾಖಲಿಸಿದ್ದಾರೆ. ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ಪ್ರೊಫೆಷನಲ್ಸ್ ವಿಭಾಗದಲ್ಲಿ ಅನಿಶ್ ಶೆಟ್ಟಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
ಜೆ.ಕೆ ಟೈರ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅನಿಶ್ ಶೆಟ್ಟಿಗೆ ಪ್ರಶಸ್ತಿ. -
ಕೊಯಮತ್ತೂರು: ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ (JK Tyre National Racing Championship 2025) ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ಎಂ-ಸ್ಪೋರ್ಟ್‌ನ ಧ್ರುವ್ ಗೋಸ್ವಾಮಿ (Dhruvh Goswami) ಗಮನಾರ್ಹ ಜಯವನ್ನು ದಾಖಲಿಸಿದ್ದಾರೆ. ಭಾರತದ ಅತಿ ದೀರ್ಘಕಾಲದ ಸಿಂಗಲ್-ಸೀಟರ್ ಚಾಂಪಿಯನ್‌ಶಿಪ್‌ನ ಭಾನುವಾರದ ಅಂತಿಮ ಎರಡು ರೇಸ್‌ಗಳನ್ನು ಎದುರು ನೋಡುತ್ತಿರುವ ಬೆಂಗಳೂರು ಮೂಲದ 18ನೇ ವಯಸ್ಸಿನ ಸೇಂಟ್ ಜೊಸೆಫ್‌ನ 12ನೇ ತರಗತಿಯ ವಿದ್ಯಾರ್ಥಿ ಗೋಸ್ವಾಮಿ ಮಾತನಾಡಿ 'ದಿಲ್ಜಿತ್ ವಿರುದ್ಧ ಕೊನೆವರೆಗೂ ಹೋರಾಡುವ ಗುರಿಯಿದೆ. ಈ ಚಾಂಪಿಯನ್‌ಶಿಪ್ ಯಾವಾಗಲೂ ಕೊನೆಯ ರೇಸ್‌ಗೆ ಬಂದು ತೀರ್ಮಾನಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಭಾಗವಾಗಿರುವ ಎಫ್‌ಐಎ–ಪ್ರಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್‌ನ ನಾಲ್ಕನೇ ಸುತ್ತಿನ ಮೊದಲ ರೇಸ್‌ನಲ್ಲಿ ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು ತಂಡದ ಫ್ರೆಂಚ್ ಚಾಲಕ ಸಾಚೆಲ್ ರೋಟ್ಜೇ ಅದ್ಭುತ ಜಯ ದಾಖಲಿಸಿದರು. ಕೊಲ್ಕತ್ತಾ ರಾಯಲ್ ಟೈಗರ್ಸ್‌ನ ಘಾಜಿ ಮೋಟ್ಲೇಕರ್ ನಾಲ್ಕನೇ ಸ್ಥಾನದಿಂದ ಪ್ರಾರಂಭಿಸಿ ಎರಡನೇ ಸ್ಥಾನಕ್ಕೆ ಏರಿ ಗಮನ ಸೆಳೆದರು.
ಜೆಕೆ ಟೈರ್ ಪ್ರಸ್ತುತ ಪಡಿಸಿರುವ ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ನಲ್ಲಿ, ಪ್ರೊಫೆಷನಲ್ ವರ್ಗದಲ್ಲಿ ಬೆಂಗಳೂರಿನ ಅನಿಶ್ ಶೆಟ್ಟಿ ಗೆಲುವು ಸಾಧಿಸಿದರು. ಈ ಬಗ್ಗೆ ಮಾತನಾಡಿದ ಅನಿಶ್ 'ನನಗೆ ಉತ್ತಮ ಆರಂಭ ಸಿಕ್ಕಿತು, ಯಾವುದೇ ಅವಕಾಶ ಬಿಟ್ಟುಕೊಡಲಿಲ್ಲ' ಎಂದರು. ಕೊಯಮತ್ತೂರಿನ ಜೈ ಪ್ರಕಾಶ್ ವೆಂಕಟ್ ಹೊಸದಾಗಿ ಆರಂಭವಾದ ಜೆಕೆ ಟೈರ್ ಲೆವಿಟಾಸ್ ಕಪ್‌ನ ಎರಡನೇ ರೇಸ್‌ನಲ್ಲಿ ಮೊದಲ ಸ್ಥಾನ ಪಡೆದರು.ಭುವನ್ ಬೋನು (MSport) ಶನಿವಾರ ನಡೆದ ಭಾರತದ ಆರಂಭಿಕ ಹಂತದ ಸಿಂಗಲ್-ಸೀಟರ್ ಸರಣಿಯಾದ ಜೆಕೆ ಟೈರ್ ನೊವೀಸ್ ಕಪ್‌ನಲ್ಲಿ ಎರಡೂ ರೇಸ್‌ಗಳನ್ನು ಗೆದ್ದರು.
IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!
ಪ್ರಾಥಮಿಕ ಫಲಿತಾಂಶಗಳು
ಲೆವಿಟಾಸ್ ಕಪ್ ರೇಸ್ 1 - ಜೆಂಟ್ಲ್‌ಮೆನ್
1.ಸಿಧಾರ್ಥ ಬಾಲಸುಂದರ್ - 14:32.727
2.ಜೈ ಪ್ರಕಾಶ್ ವೆಂಕಟ್ - 14:53.680
3.ವಿನೋದ್ ಎಸ್ - 14:59.745
ಲೆವಿಟಾಸ್ ಕಪ್ ರೇಸ್ 1 - ರೂಕಿಸ್
1.ಬಾಲಾಜಿ ರಾಜು - 14:47.508
2.ತೇಜಸ್ ಜಿ ಎಸ್ - 14:52.727
3.ಅಶ್ವಿನ್ ಪುಳಗಿರಿ - 14:53.510
ಲೆವಿಟಾಸ್ ಕಪ್ ರೇಸ್ 2 - ಜೆಂಟ್ಲ್‌ಮೆನ್
1.ಜೈ ಪ್ರಕಾಶ್ ವೆಂಕಟ್ - 14:30.848
2.ಸಿಧಾರ್ಥ ಬಾಲಸುಂದರ್ - 14:31.491
3.ನಿತಿನ್ ಎ ಆರ್ - 14:46.828
ಲೆವಿಟಾಸ್ ಕಪ್ ರೇಸ್ 2 - ರೂಕಿಸ್
1.ಅಕ್ಷಯ ಮೂರಳೀಧರನ್ - 14:32.046
2.ಬಾಲಾಜಿ ರಾಜು - 14:34.511
3.ತೇಜಸ್ ಜಿ ಎಸ್ - 14:46.225
ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ - ಅಮೆಚರ್ಸ್
1.ಜೋಹರಿಂಗ್ ವಾರಿಸಾ - 14:23.996
2.ಬ್ರಯಾನ್ ನಿಕೋಲಸ್ - 14:28.317
3.ಸರಣ್ ಕುಮಾರ್ - 14:38.833
The F4 Indian Championship, India’s only FIA-certified single-seater series, lit up Kari Motor Speedway, Coimbatore on the first day of the race weekend. Stay tuned for all the adrenaline-powered performance from the finale of 28th JK Tyre FMSCI National Racing Championship. pic.twitter.com/csPjBPLrxi
— JK Tyre Motorsport (@JKTyreRacing) November 15, 2025
ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ - ಪ್ರೊಫೆಷನಲ್ಸ್
1.ಅನಿಶ್ ಶೆಟ್ಟಿ - 14:02.338
2.ನವನೀತ್ ಕುಮಾರ್ - 14:02.667
3.ಕಯಾನ್ ಪಟೇಲ್ - 14:05.996
ನವೀಸ್ ಕಪ್ ರೇಸ್ 1
1.ಭುವನ್ ಬೋನು (ಎಂ-ಸ್ಪೋರ್ಟ್) - 13:57.813
2.ಲೋಕಿತ್ಲಿಂಗೇಶ್ ರವಿ (ಡಿಟಿಎಸ್ ರೇಸಿಂಗ್) - 13:59.863
3.ಅಭಿಜಿತ್ ವಡವಳ್ಳಿ (ಮೊಮೆಂಟಮ್ ಮೋಟೋರ್ಸ್‌ಪೋರ್ಟ್ಸ್) - 14:00.429
ನವೀಸ್ ಕಪ್ ರೇಸ್ 2
1.ಭುವನ್ ಬೋನು (ಎಂ-ಸ್ಪೋರ್ಟ್) - 14:07.700
2.ಅವಿ ಮಲವಳ್ಳಿ (ಎಂ-ಸ್ಪೋರ್ಟ್) - 14:09.755
3.ಒಜಾಸ್ ಸರ್ವೆ (ಮೊಮೆಂಟಮ್ ಮೋಟೋರ್ಸ್‌ಪೋರ್ಟ್ಸ್) - 14:12.130
Day 1 of the 28th JK Tyre FMSCI National Racing Championship finale has kicked off with high-voltage, full-throttle energy. The heat is on, the races are fierce and every lap is throwing its own curveball.
— JK Tyre Motorsport (@JKTyreRacing) November 15, 2025
Are you keeping up with the unfiltered, adrenaline-soaked action? pic.twitter.com/shTJd0FLjk
ಎಲ್‌ಜಿಬಿ ಎಫ್4 ರೇಸ್ 1
1.ಧೃವ್ ಗೋಸ್ವಾಮಿ (ಎಂ-ಸ್ಪೋರ್ಟ್) - 19:58.578
2.ರೂಹಾನ್ ಅಲ್ವಾ (ಎಂ-ಸ್ಪೋರ್ಟ್) - 19:59.261
3.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) - 20:00.012
ಎಲ್‌ಜಿಬಿ ಎಫ್4 ರೇಸ್ 2
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) - 24:20.393
2.ಧೃವ್ ಗೋಸ್ವಾಮಿ (ಎಂ-ಸ್ಪೋರ್ಟ್) - 24:20.551
3.ರೂಹಾನ್ ಅಲ್ವಾ (ಎಂ-ಸ್ಪೋರ್ಟ್) - 24:20.812
ಫಾರ್ಮುಲಾ 4 ಇಂಡಿಯನ್ ರೇಸಿಂಗ್ ಚಾಂಪಿಯನ್‌ಶಿಪ್ ರೇಸ್ 1
1.ಸಾಚೆಲ್ ರೋಟ್ಜೇ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು) - 26:50.931
2.ಘಾಜಿ ಮೋಟ್ಲೇಕರ್ (ಕೊಲ್ಕತ್ತಾ ರಾಯಲ್ ಟೈಗರ್ಸ್) - 26:56.598
3.ಶಾನ್ ಚಂಡಾರಿಯಾ (ಚೆನ್ನೈ ಟರ್ಬೋ ರೈಡರ್ಸ್) - 26:57.794