ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವ ಪ್ಯಾರಾ -ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ಸ್‌ನಲ್ಲಿ ಪದಕ ಗೆದ್ದ ಭಾರತೀಯರಿಗೆ ಪಿಎಂ ಮೋದಿ ಅಭಿನಂದನೆ!

2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ಸ್‌ನಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯಿತು. ಭಾರತದ ಪ್ರದರ್ಶನ ಅದ್ಭುತವಾಗಿತ್ತು. ಆರು ಚಿನ್ನದ ಪದಕಗಳೊಂದಿಗೆ ಭಾರತ ಒಟ್ಟು 22 ಪದಕಗಳನ್ನು ಗೆದ್ದುಕೊಂಡಿತು. ಈ ಹಿನ್ನೆಲೆಯಲ್ಲಿ ಭಾರತೀಯ ಅಥ್ಲಿಟ್ಸ್‌ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಭಾರತದ ಪ್ಯಾರಾ ಕ್ರೀಡಾಪಟುಗಳಿಗೆ ಪಿಎಂ ಮೋದಿ ಅಭಿನಂದನೆ!

ಭಾರತೀಯ ಪ್ಯಾರಾ ಕ್ರೀಡಾಪಟುಗಳಿಗೆ ಪಿಎಂ ಮೋದಿ ಅಭಿನಂದನೆ. -

Profile Ramesh Kote Oct 6, 2025 7:11 PM

ನವದೆಹಲಿ: 2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ಸ್‌ನಲ್ಲಿ (World Para-Athletics Championships 2025) ಭಾರತ ತನ್ನ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ಭಾನುವಾರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರತ 22 ಪದಕಗಳನ್ನು (6 ಚಿನ್ನ, 9 ಬೆಳ್ಳಿ, 7 ಕಂಚು) ಗೆದ್ದು 10ನೇ ಸ್ಥಾನ ಗಳಿಸಿತು. 22 ಪದಕಗಳ ಜೊತೆಗೆ, ಭಾರತೀಯ ಕ್ರೀಡಾಪಟುಗಳು ಮೂರು ಚಾಂಪಿಯನ್‌ಶಷಿಪ್ ದಾಖಲೆಗಳು, ಏಳು ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದರು ಮತ್ತು ಒಂಬತ್ತು ಬಾರಿ ನಾಲ್ಕನೇ ಸ್ಥಾನ ಪಡೆದರು. ದೇಶದ ಮೊದಲ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 30 ಕ್ಕೂ ಹೆಚ್ಚು ವೈಯಕ್ತಿಕ ಅತ್ಯುತ್ತಮ ಸಾಧನೆಗಳು ಮೂಡಿ ಬಂದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಅಥ್ಲಿಟ್‌ಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ.

"ಈ ವರ್ಷದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಬಹಳ ವಿಶೇಷವಾದದ್ದು. ಭಾರತೀಯ ತಂಡ 6 ಚಿನ್ನ ಸೇರಿದಂತೆ 22 ಪದಕಗಳನ್ನು ಗೆದ್ದು ತನ್ನ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಅವರ ಯಶಸ್ಸು ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಅವರ ಭವಿಷ್ಯದ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇನೆ," ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

"ಈ ಕ್ರೀಡಾಕೂಟವನ್ನು ದೆಹಲಿಯಲ್ಲಿ ಆಯೋಜಿಸುವುದು ಭಾರತಕ್ಕೆ ಗೌರವವಾಗಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 100 ದೇಶಗಳ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ರೆಜಿಲ್‌ಗೆ ಮೊದಲ ಸ್ಥಾನ

15 ಚಿನ್ನ, 20 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 44 ಪದಕಗಳೊಂದಿಗೆ ಬ್ರೆಜಿಲ್ ಈ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಗಳಿಸಿತು. ಚೀನಾ 13 ಚಿನ್ನ, 22 ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಇರಾನ್ 9 ಚಿನ್ನ, 2 ಬೆಳ್ಳಿ ಮತ್ತು 5 ಕಂಚಿನೊಂದಿಗೆ ಮೂರನೇ ಸ್ಥಾನ ಪಡೆಯಿತು.



ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಹೊಸದಾಗಿ ನಿರ್ಮಿಸಲಾದ ಮಾಂಡೋ ಟ್ರ್ಯಾಕ್‌ನಲ್ಲಿ ನಡೆದಿದ್ದ ಕಠಿಣ ಸ್ಪರ್ಧೆಯಲ್ಲಿ ಮೂವತ್ತೈದು ವಿಶ್ವ ದಾಖಲೆಗಳು ಮತ್ತು 104 ಚಾಂಪಿಯನ್‌ಶಿಪ್ ದಾಖಲೆಗಳು ಮೂಡಿ ಬಂದವು. 35 ವಿಶ್ವ ದಾಖಲೆಗಳು ಮೂಡಿ ಬಂದಿವೆ. ಇದರಲ್ಲಿ 35 ವಿಶ್ವ ದಾಖಲೆಗಳು 2023ರ ಪ್ಯಾರಿಸ್‌ ಕ್ರೀಡಾಕೂಟವನ್ನು ಸರಿದೂಗಿಸಿವೆ. ಕಳೆದ ವರ್ಷ ಜಪಾನ್‌ನ ಕೋಬೆಯಲ್ಲಿ ನಡೆದಿದ್ದ ಕ್ರೀಡಾಕೂಟ 14 ದಾಖಲೆಗಳು ಸರಿಗಟ್ಟಲಾಗಿದೆ. 44 ದೇಶಗಳು ಕನಿಷ್ಠ ಒಂದು ಚಿನ್ನದ ಪದಕವನ್ನು ಗೆದ್ದವು ಮತ್ತು 63 ದೇಶಗಳು ಕನಿಷ್ಠ ಒಂದು ಪದಕದೊಂದಿಗೆ ತವರಿಗೆ ಮರಳಿವೆ.