ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohammed Shami: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

34 ವರ್ಷದ ವೇಗಿ ಶಮಿ ಹೆಚ್ಚು ಸಮಯ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡವು ಭಾರತೀಯ ಮಂಡಳಿಗೆ ತಿಳಿಸಿದ ನಂತರ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಗಾಗಿ 18 ಆಟಗಾರರ ಭಾರತೀಯ ತಂಡದಿಂದ ಶಮಿ ಅವರನ್ನು ಹೊರಗಿಡಲಾಯಿತು.

ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

Profile Abhilash BC Jul 19, 2025 4:12 PM

ಕೋಲ್ಕತಾ: ಇಂಗ್ಲೆಂಡ್ ಪ್ರವಾಸದ ಭಾರತೀಯ ಟೆಸ್ಟ್ ತಂಡದಿಂದ ಕೈಬಿಡಲ್ಪಟ್ಟ ನಂತರ, ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ(Mohammed Shami) ದೇಶೀಯ ಕ್ರಿಕೆಟ್‌ಗೆ(Domestic Cricket) ಪ್ರವೇಶಿಸುವ ಸಾಧ್ಯತೆಯಿದೆ. ಮುಂಬರುವ ದೇಶೀಯ ಋತುವಿಗೆ ಬಂಗಾಳದ 50 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶಮಿ ಹೆಸರು ಕೂಡ ಕಾಣಿಸಿಕೊಂಡಿದೆ. ಶಮಿ ದೇಶಿ ಋತುವಿನ ಆರಂಭಿಕ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯದ ಭಾಗವಾಗುವ ಸಾಧ್ಯತೆಯಿದೆ. ದುಲೀಪ್ ಟ್ರೋಫಿ ಆಗಸ್ಟ್ 28 ರಂದು ಆರಂಭವಾಗಲಿದೆ.

34 ವರ್ಷದ ವೇಗಿ ಶಮಿ ಹೆಚ್ಚು ಸಮಯ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡವು ಭಾರತೀಯ ಮಂಡಳಿಗೆ ತಿಳಿಸಿದ ನಂತರ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಗಾಗಿ 18 ಆಟಗಾರರ ಭಾರತೀಯ ತಂಡದಿಂದ ಶಮಿ ಅವರನ್ನು ಹೊರಗಿಡಲಾಯಿತು.

2024 ರಲ್ಲಿ ಶಮಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದು ಅವರ ಕ್ರಿಕೆಟ್ ಅನ್ನು ಸುಮಾರು ಒಂದು ವರ್ಷದ ಕಾಲ ಸ್ಥಗಿತಗೊಳಿಸಿತ್ತು. ಅವರು ಈ ವರ್ಷದ ಆರಂಭದಲ್ಲಿ ಟಿ 20 ಸ್ವರೂಪದ ಮೂಲಕ ಪುನರಾಗಮನ ಮಾಡಿದರು ಮತ್ತು ನಂತರ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿದ್ದರು. ಇದಾದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್ 2025 ಆಡಿದದ್ದರು. ಫಿಟ್‌ನೆಸ್‌ ಇಲ್ಲದ ಕಾರಣ ಅವರ ಪ್ರದರ್ಶನವು ಅತ್ಯಂತ ಕಳಪೆ ಮಟ್ಟದಿಂದ ಕೂಡಿತ್ತು.

ಇದನ್ನೂ ಓದಿ IND vs ENG 4th Test: ರೋಹಿತ್‌ ದಾಖಲೆ ಮುರಿಯುವ ಸನಿಹ ರಿಷಭ್‌ ಪಂತ್‌

ಇದೀಗ ಅವರು ಕಳೆದುಕೊಂಡಿರುವ ಫಾರ್ಮ್‌ ಮತ್ತೆ ಕಂಡುಕೊಳ್ಳಲು ಹಾಗೂ ಭಾರತ ತಂಡದ ಪರ ಆಡಲು ದೇಶೀಯ ಕ್ರಿಕೆಟ್‌ ಟೂರ್ನಿಯತ್ತ ಮುಖ ಮಾಡಿದಾರೆ. ಒಂದೆಡರು ದೇಶಿಯ ಪಂದ್ಯದಲ್ಲಿ ಆಡಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿದ್ದಾರೆ.