PBKS vs KKR: ಇಂದು ಪಂಜಾಬ್ ಕಿಂಗ್ಸ್-ಕೋಲ್ಕತ ನೈಟ್ರೈಡರ್ಸ್ ಫೈಟ್
IPL 2025: ಬ್ಯಾಟಿಂಗ್ ವಿಭಾಗದಲ್ಲಿ ಪಂಜಾಬ್ ಬಲಿಷ್ಠವಾಗಿದೆ. ಆರಂಭಿಕರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭುಸಿಮ್ರಾನ್ ಸಿಂಗ್ ಜೋಡಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪವರ್ ಪ್ಲೇಯಲ್ಲಿ ದೊಡ್ಡ ಮೊತ್ತವನ್ನು ಪೇರಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿನಿಸ್, ಶಶಾಂಕ್ ಸಿಂಗ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ.


ಮುಲ್ಲನ್ಪುರ: ಅಂಕಪಟ್ಟಿಯಲ್ಲಿ 5 ಮತ್ತು 6ನೇ ಸ್ಥಾನಿಯಾಗಿರುವ ಕೋಲ್ಕತಾ ನೈಟ್ ರೇಡರ್ಸ್(PBKS vs KKR) ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಇಂದು(ಮಂಗಳವಾರ) ನಡೆಯುವ ಐಪಿಎಲ್(IPL 2025)ನ 31ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕಳೆದ ವರ್ಷ ಕೆಕೆಆರ್(KKR) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್(Shreyas Iyer) ಈ ಬಾರಿ ಅದೇ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ನಾಯಕರಾಗಿ ಆಡುತ್ತಿರುವುದು ಪಂದ್ಯದ ಪ್ರಮುಖ ಹೈಲೆಟ್ಸ್ ಆಗಿದೆ.
ಬೌಲಿಂಗ್ ಚಿಂತೆ
ಕಳೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬೃಹತ್ ಮೊತ್ತ ಪೇರಿಸಿಯೂ ಸೋಲು ಕಂಡ ಪಂಜಾಬ್ ಕಿಂಗ್ಸ್ ತಂಡದ ಬೌಲರ್‌ಗಳು ತಮ್ಮ ಎಸೆತಗಳಿಗೆ ಸಾಣೆ ಹಿಡಿಯುವುದು ಅನಿವಾರ್ಯ. ಮುಖ್ಯವಾಗಿ ಅನುಭವಿಗಳಾದ, ಯಜುವೇಂದ್ರ ಚಹಲ್, ಮಾರ್ಕೊ ಜಾನ್ಸೆನ್, ಮತ್ತು ಮ್ಯಾಕ್ಸ್‌ವೆಲ್ ಕಳೆದ ಪಂದ್ಯದಲ್ಲಿ ದುಬಾರಿ ಎನಿಸಿದ್ದರು. ಚಹಲ್ ಈ ಬಾರಿ ಕೇವಲ 2 ವಿಕೆಟ್ ಮಾತ್ರ ಕಿತ್ತಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಒಬ್ಬರೇ ಪ್ರತಿಹೋರಾಟ ನಡೆಸುತ್ತಿದ್ದಾರೆ. ಬೌಲಿಂಗ್ ಸುಧಾರಣೆ ಕಾಣದ ಹೊರತು 250 ರನ್ ಬಾರಿಸಿದರೂ ಪಂದ್ಯ ಗೆಲ್ಲುವುದು ಕಷ್ಟ ಸಾಧ್ಯ.
ಬ್ಯಾಟಿಂಗ್ ವಿಭಾಗದಲ್ಲಿ ಪಂಜಾಬ್ ಬಲಿಷ್ಠವಾಗಿದೆ. ಆರಂಭಿಕರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭುಸಿಮ್ರಾನ್ ಸಿಂಗ್ ಜೋಡಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪವರ್ ಪ್ಲೇಯಲ್ಲಿ ದೊಡ್ಡ ಮೊತ್ತವನ್ನು ಪೇರಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿನಿಸ್, ಶಶಾಂಕ್ ಸಿಂಗ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಕೆಕೆಆರ್ ಬಲಿಷ್ಠ
ಕೆಕೆಆರ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆಲುವು ಸಾಧಿಸಿತ್ತು. ವಿಂಡೀಸ್‌ನ ಆಲ್‌ರೌಂಡರ್ ಸುನೀಲ್ ನರೈನ್ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದು ತಂಡ ಇನ್ನಷ್ಟು ಬಲಿಷ್ಠವಾಗುವಂತೆ ಮಾಡಿದೆ. ನಾಯಕ ರಹಾನೆ ಕೂಡ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಸದ್ಯ ತಂಡದಲ್ಲಿ ಔಟ್-ಆಫ್ ಫಾರ್ಮ್‌ನಲ್ಲಿರುವುದು ರಸೆಲ್ ಮಾತ್ರ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಇದುವರೆಗೆ ನಿರೀಕ್ಷಿತ ಪ್ರದರ್ಶನ ತೋರಿಲ್ಲ.
ಮುಖಾಮುಖಿ
ಐಪಿಎಲ್‌ನಲ್ಲಿ ಉಭಯ ತಂಡಗಳು ಇದುವರೆಗೆ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಪಂಜಾಬ್ 12, ಕೆಕೆಆರ್ ಗರಿಷ್ಠ 21 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರ ನೋಡುವಾಗ ಕೆಕೆಆರ್ ಇಂದಿನ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ.
ಇದನ್ನೂ ಓದಿ IPL 2025: ಪಂದ್ಯದ ವೇಳೆ ಫೀಲ್ಡ್ ಅಂಪೈರ್ ದಿಢೀರ್ ಬ್ಯಾಟ್ ಪರಿಶೀಲನೆ; ಏನಿದು ಹೊಸ ನಿಯಮ?
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಕೆಕೆಆರ್: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಸ್ಪೆನ್ಸರ್ ಜಾನ್ಸನ್/ಮೊಯೀನ್ ಅಲಿ, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಅಂಗ್ಕ್ರಿಶ್ ರಘುವಂಶಿ,
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್