ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನಿಮ್ಮ ಗೆಲುವು ಹಲವರಿಗೆ ಸ್ಫೂರ್ತಿ"; ಪಾಕ್‌ ಮಣಿಸಿದ U19 ಕ್ರಿಕೆಟ್‌ ತಂಡಕ್ಕೆ ಮೋದಿ ಅಭಿನಂದನೆ

U19 IND VS PAK: 19 ವರ್ಷದೊಳಗಿನವರ (U19) ಪುರುಷರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ರೋಚಕವಾಗಿ ಮಣಿಸಿದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಯುವ ಆಟಗಾರರ ಅದ್ಭುತ ಪ್ರದರ್ಶನವನ್ನು ಹೊಗಳಿದ್ದಾರೆ.

ಪಾಕ್‌ ಮಣಿಸಿದ ಯುವ ಕ್ರಿಕೆಟಿಗರಿಗೆ ಮೋದಿ ಅಭಿನಂದನೆ

ಅಂಡರ್‌ 19 ತಂಡಕ್ಕೆ ಅಭಿನಂದಿಸಿದ ಮೋದಿ -

Vishakha Bhat Heggar
Vishakha Bhat Heggar Nov 14, 2026 9:36 PM

ನವದೆಹಲಿ: 19 ವರ್ಷದೊಳಗಿನವರ ಪುರುಷರ ಏಷ್ಯಾಕಪ್ ಕ್ರಿಕೆಟ್ ( Under-19 Men's Asia Cup) ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ರೋಚಕವಾಗಿ ಮಣಿಸಿದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಯುವ ಆಟಗಾರರ ಅದ್ಭುತ ಪ್ರದರ್ಶನವನ್ನು ಹೊಗಳಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ತಪುರುಷರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ರೋಚಕವಾಗಿ ಮಣಿಸಿದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಯುವ ಆಟಗಾರರ ಅದ್ಭುತ ಪ್ರದರ್ಶನವನ್ನು ಹೊಗಳಿ(ದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಅಭಿನಂದನೆ ತಿಳಿಸಿದ್ದಾರೆ.



ತಂಡದ ಹೋರಾಟದ ಮನೋಭಾವವನ್ನು ಕೊಂಡಾಡಿರುವ ಅಮಿತ್ ಶಾ, "ಇದೊಂದು ರೋಚಕ ಗೆಲುವು. ಮೈದಾನದಲ್ಲಿ ಯುವ ಆಟಗಾರರು ತೋರಿದ ಛಲ, ದೃಢನಿಶ್ಚಯ ಮತ್ತು ಅಪ್ರತಿಮ ಕ್ರೀಡಾಸ್ಫೂರ್ತಿ ಭಾರತದ ಕ್ರಿಕೆಟ್ ಶ್ರೇಷ್ಠತೆಗೆ ಸಾಕ್ಷಿಯಾಗಿದೆ" ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ, ಆರಂಭಿಕ ಆಟಗಾರ ಉಸ್ಮಾನ್ ಖಾನ್ ಅವರ ಭರ್ಜರಿ ಶತಕದ (107 ರನ್) ನೆರವಿನಿಂದ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.

338 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಲಕ್ಷ್ಯ ರಾಯ್ಚಂದಾನಿ (80 ರನ್) ಮತ್ತು ಆರ್ಯವೀರ್ ಸೆಹ್ವಾಗ್ (58 ರನ್) ಮೊದಲ ವಿಕೆಟ್‌ಗೆ 95 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. ಆದರೆ, ಇವರಿಬ್ಬರ ನಿರ್ಗಮನದ ನಂತರ ಅನ್ವಯ್ ದ್ರಾವಿಡ್ ಕೂಡ ಔಟಾದರು. ಬಳಿಕ ಸಂಕಷ್ಟಕ್ಕೆ ಸಿಲುಕಿತ್ತು. 42ನೇ ಓವರ್‌ನಲ್ಲಿ 252 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ತಂಡ ಸೋಲಿನ ಸುಳಿಗೆ ಸಿಲುಕಿತ್ತು.

ತಂಡಕ್ಕೆ ನೆರವಾದ ಮನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ 9ನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಡಿದರು. ಬಳಿಕ 11ನೇ ಕ್ರಮಾಂಕದ ಆಟಗಾರ ಸಿ. ವೆಂಕಟ ಅವರಿಂದ ಉತ್ತಮ ಸಾಥ್ ಪಡೆದ ಮೋಹಿತ್ ಉಲ್ವಾ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.