ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಚಿನ್‌ ತೆಂಡೂಲ್ಕರ್‌ ಜತೆ ಮುಂಬೈ ಸ್ಟ್ರೀಟ್ ಫುಡ್ ಸವಿದ ಬ್ರಿಟನ್‌ ರಾಜಕುಮಾರ ವಿಲಿಯಂ, ಪತ್ನಿ ಕೇಟ್‌

Prince William and Princess: ವಿಲಿಯಂ ಮತ್ತು ಕೇಟ್ ಸೋಮವಾರ ಮುಂಬೈಗೆ ಆಗಮಿಸಿದ್ದು, ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ನಗರದಲ್ಲಿ ನಡೆಯಲಿರುವ ಅವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪ್ರಮುಖ ವ್ಯಕ್ತಿಗಳಲ್ಲಿ ತೆಂಡೂಲ್ಕರ್ ಕೂಡ ಒಬ್ಬರಾಗಿದ್ದಾರೆ.

ಸಚಿನ್‌ ಜತೆ ಮುಂಬೈ ಸ್ಟ್ರೀಟ್ ಫುಡ್ ಸವಿದ ಬ್ರಿಟನ್‌ ರಾಜಕುಮಾರ ವಿಲಿಯಂ

Prince William and Princess Kate -

Abhilash BC
Abhilash BC Nov 16, 2026 12:38 PM

ಮುಂಬಯಿ, ನ.16: 2026ರ ‘ಅರ್ತ್‌ಶಾಟ್’ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಬ್ರಿಟನ್‌ ರಾಜಕುಮಾರ ವಿಲಿಯಂ ಹಾಗೂ ಅವರ ಪತ್ನಿ, ರಾಜಕುಮಾರಿ ಕೇಟ್‌ ಮಿಡ್ಲಟನ್‌ ಅವರು ಭಾರತೀಯ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರನ್ನು ಭೇಟಿಯಾದರು. ಈ ಭೇಟಿ ವೇಳೆ ಅವರು ಸಚಿನ್‌ ಜತೆ ಮುಂಬೈನ ಬೀದಿ ಬದಿಯ ತಿನಿಸುಗಳನ್ನು ಸವಿದು, ಅಲ್ಲಿನ ಸ್ಥಳೀಯ ಸಂಸ್ಕೃತಿಯ ರುಚಿಯನ್ನು ಅನುಭವಿಸಿದರು.

‘ಅರ್ತ್‌ಶಾಟ್’ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಕಾರ್ಯಕ್ರಮ ಮುಂಬೈನಲ್ಲಿ ಸೋಮವಾರದಿಂದ ಬುಧವಾರದವರೆಗೆ ನಡೆಯಲಿದೆ. ಬ್ರಿಟನ್‌ ರಾಜಮನೆತನವು ನೀಡುವ ಈ ವಾರ್ಷಿಕ ಪ್ರಶಸ್ತಿಯನ್ನು ಐದು ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. ಇದು ತಲಾ 12.25 ಕೋಟಿ ಬಹುಮಾನದ ಮೊತ್ತವನ್ನು ಹೊಂದಿರುತ್ತದೆ. ಪರಿಸರದ ರಕ್ಷಣೆಗಾಗಿ ಕೈಗೊಳ್ಳಲಾಗುವ ಹೊಸ ಆವಿಷ್ಕಾರಗಳನ್ನು ಗುರುತಿಸಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ಆರು ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ.

ಭಾರತದ ಅತ್ಯಂತ ಹಳೆಯ ಛಾಯಾಗ್ರಹಣ ಸ್ಟುಡಿಯೋಗಳಲ್ಲಿ ಒಂದಾದ 'ಹ್ಯಾಮಿಲ್ಟನ್ ಸ್ಟುಡಿಯೋಸ್'ನ ಹೊರಗೆ ವಿಲಿಯಂ ಮತ್ತು ಕೇಟ್‌ ಮಿಡ್ಲಟನ್‌ ಸ್ಟ್ರೀಟ್‌ನಲ್ಲಿ ಸ್ಥಳೀಯ ಮಕ್ಕಳ ಜತೆ ಕ್ರಿಕೆಟ್‌ ಆಡಿಯೂ ಗಮನ ಸೆಳೆದರು. ಕೇಟ್‌ ಮಿಡ್ಲಟನ್‌ ಬ್ಯಾಟಿಂಗ್‌ ನಡೆಸಿದರೆ ವಿಲಿಯಂ ಬೌಲಿಂಗ್‌ ಮಾಡಿದರು. ಈ ವೇಳೆ ಸಚಿನ್‌ ಕೂಡ ಜತೆಗಿದ್ದರು.

ವಿಲಿಯಂ ಮತ್ತು ಕೇಟ್ ಸೋಮವಾರ ಮುಂಬೈಗೆ ಆಗಮಿಸಿದ್ದು, ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ನಗರದಲ್ಲಿ ನಡೆಯಲಿರುವ ಅವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪ್ರಮುಖ ವ್ಯಕ್ತಿಗಳಲ್ಲಿ ತೆಂಡೂಲ್ಕರ್ ಕೂಡ ಒಬ್ಬರಾಗಿದ್ದಾರೆ.



ವಿಲಿಯಂ ಮತ್ತು ಕೇಟ್ ಅವರ ಮುಂಬೈ ಭೇಟಿಯ ಕಾರ್ಯಕ್ರಮಗಳು ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ. ಈ ದಂಪತಿ ನಗರದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಹಾಗೂ ಬಾಲಿವುಡ್‌ನ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ. ಅವರು ಮಂಗಳವಾರ 'ಅರ್ಥ್‌ಶಾಟ್ ಪ್ರೈಜ್' (Earthshot Prize) ಸಮಾರಂಭದಲ್ಲಿ ಭಾಗವಹಿಸಲಿದ್ದು, ನಂತರ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಬುಧವಾರದಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಈ ಭೇಟಿಯು ಕೇಟ್ ಅವರಿಗೆ ವಿಶೇಷ ಮಹತ್ವದ್ದಾಗಿದೆ. ಏಕೆಂದರೆ 2024ರಲ್ಲಿ ಕೀಮೋಥೆರಪಿಗೆ ಒಳಗಾದ ನಂತರ, ವಿದೇಶದಲ್ಲಿ ಅವರು ಕೈಗೊಂಡ ಅತ್ಯಂತ ಪ್ರಮುಖ ಕಾರ್ಯಕ್ರಮ ಇದಾಗಿದೆ. ಈ ದಂಪತಿಗಳು ಈ ಹಿಂದೆ 2016ರ ಏಪ್ರಿಲ್‌ನಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಭೂತಾನ್‌ಗೂ ಪ್ರಯಾಣಿಸಿದ್ದರು.