ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್
Punjab Kings vs Gujarat Titans: 2025ರಲ್ಲಿ ಫೈನಲ್‌ಗೆ ತಲುಪಿದ್ದ ತಮ್ಮ ತಂಡದ ಮೂಲ ರಚನೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡದೇ ಉಳಿಸಿಕೊಂಡಿರುವ ಪಂಜಾಬ್ ಫ್ರಾಂಚೈಸಿ, ಮಿನಿ ಹರಾಜಿನಲ್ಲಿ ಕೇವಲ ನಾಲ್ಕು ಆಟಗಾರರನ್ನು ಮಾತ್ರ ಸೇರಿಸಿಕೊಂಡಿದೆ. ಇದರಲ್ಲಿ ಕೂಪರ್ ಕೊನ್ನೋಲಿ ಮತ್ತು ಬೆನ್ ಡ್ವಾರ್ಶುಯಿಸ್ ಪ್ರಮುಖರಾಗಿದ್ದಾರೆ.
Punjab Kings vs Gujarat Titans -
ಮುಲ್ಲನ್‌ಪುರ, ಮಾ.31: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಇಂಡಿಯನ್‌ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ದುಕೊಂಡರು. ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಹ್ವಾನ ಪಡೆಯಿತು.
ಉಭಯ ತಂಡಗಳು ಇದುವರೆಗೂ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ ಮೂರು ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇಂದು ಗೆಲ್ಲುವ ತಂಡವು ಮೇಲುಗೈ ಸಾಧಿಸಲಿದೆ.
ಉಭಯ ಆಡುವ ಬಳಗ
ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ.), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್(ಸಿ), ಜೋಸ್ ಬಟ್ಲರ್(ಡಬ್ಲ್ಯೂ), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಎಂ ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.
ಪಂದ್ಯದ ವಿವರ
ಐಪಿಎಲ್ 2026
ನಾಲ್ಕನೇ ಪಂದ್ಯ
ಪಂಜಾಬ್ ಕಿಂಗ್ಸ್ vs ಗುಜರಾತ್ ಜಯಂಟ್ಸ್
ದಿನಾಂಕ: ಮಾರ್ಚ್ 31, 2026
ಸಮಯ: ಸಂಜೆ 07: 30ಕ್ಕೆ
ಸ್ಥಳ: ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ, ನವ ಚಂಡೀಗಡ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್