ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರ್‌ಸಿಬಿ ಅಭಿಮಾನಿಗಳಿಗೆ ವೈಭವ್ ಸೂರ್ಯವಂಶಿ ಭಯ!; ಕ್ವಾಲಿಫೈಯರ್‌ ಪಂದ್ಯದಲ್ಲಿ ಟೈಟಾನ್ಸ್‌ಗೆ ಬೆಂಬಲ

RCB fans fear Vaibhav Sooryavanshi: ಲೀಗ್‌ ಹಂತದಲ್ಲಿ ಆರ್‌ಸಿಬಿಗೆ ಮೊದಲ ಸೋಲು ಎದುರಾಗಿದ್ದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧವೇ. ಮಾರ್ಚ್‌ 16 ರಂದು ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ ಅಂತರದ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಆರ್‌ಸಿಬಿ 8 ವಿಕೆಟ್‌ಗೆ 201 ರನ್‌ಗಳ ಬೃಹತ್‌ ಮೊತ್ತವನ್ನೇ ಪೇರಿಸಿತು. ಆದರೆ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್‌ ಮುಂದೆ ಈ ಮೊತ್ತವೂ ಕಡಿಮೆ ಎನಿಸಿತ್ತು.

ಸೂರ್ಯವಂಶಿಗೆ ಹೆದರಿ ರಾಜಸ್ಥಾನ್‌ ಸೋಲು ಬಯಸಿದ ಆರ್‌ಸಿಬಿ ಫ್ಯಾನ್ಸ್‌!

Vaibhav Sooryavanshi -

Abhilash BC
Abhilash BC May 29, 2026 10:07 AM

ಬೆಂಗಳೂರು, ಮೇ 29: ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ವಿಶ್ವದ ಅಗ್ರ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ 15ರ ಪೋರ ವೈಭವ್‌ ಸೂರ್ಯವಂಶಿಯ ವೀರಾವೇಶದ ಆಟ ಕಂಡು ಫೈನಲ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಲ್ಲಿ ನಿಜಕ್ಕೂ ನಡುಕ ಹುಟ್ಟಿಸಿದೆ. ಇಂದು (ಮೇ 29) ನಡೆಯಲಿರುವ ಗುಜರಾತ್ ಟೈಟಾನ್ಸ್ (GT) ನಡುವಿನ ಕ್ವಾಲಿಫೈಯರ್-2(IPL 2026 Qualifier 2) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಸೋಲಲಿ ಎಂದು ಆರ್‌ಸಿಬಿ ಅಭಿಮಾನಿಗಳು ಬಯಸುತ್ತಿದ್ದಾರೆ. ಫೈನಲ್‌ನಲ್ಲಿ ಸೂರ್ಯವಂಶಿಯ(Vaibhav Sooryavanshi)ನ್ನು ಎದುರಿಸುವ ಭಯವೇ ಇದಕ್ಕೆ ಮುಖ್ಯ ಕಾರಣ.

ದಿಗ್ಗಜ ಬೌಲರ್‌ಗಳಾದ ಜಸ್‌ಪ್ರೀತ್‌ ಬುಮ್ರಾ, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಜಲ್‌ವುಡ್‌ ಮುಂದೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಜಾಸ್‌ ಬಟ್ಲರ್‌, ಟ್ರಾವಿಸ್‌ ಹೆಡ್‌ ಸೇರಿ ವಿಶ್ವದ ಅನೇಕ ಅಗ್ರ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಾರೆ. ಆದರೆ 15ರ ಪೋರ ಸೂರ್ಯವಂಶಿ ಈ ಬೌಲರ್‌ಗಳಿಗೆ ಮೊದಲ ಎಸೆತದಲ್ಲೇ ಸಿಕ್ಸರ್‌ಗಳ ರುಚಿ ತೋರಿಸಿದ್ದಾರೆ. ಮಾತ್ರವಲ್ಲದೆ ಹಾಲಿ ಆವೃತ್ತಿಯಲ್ಲಿ ಈ ದಿಗ್ಗಜ ಬೌಲರ್‌ಗಳು ಹೆಚ್ಚಾಗಿ ದಂಡಿಸಿಕೊಂಡದ್ದು ಕೂಡ ಸೂರ್ಯವಂಶಿಯ ಕೈಯಲ್ಲೇ. ಈ ಭಯ ಆರ್‌ಸಿಬಿ ಅಭಿಮಾನಿಗಳಿಗೂ ಎದುರಾಗಿದೆ.

ಆರ್‌ಸಿಬಿ ವಿರುದ್ಧವೂ ಮಿಂಚಿದ್ದ ಸೂರ್ಯವಂಶಿ

ಲೀಗ್‌ ಹಂತದಲ್ಲಿ ಆರ್‌ಸಿಬಿಗೆ ಮೊದಲ ಸೋಲು ಎದುರಾಗಿದ್ದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧವೇ. ಮಾರ್ಚ್‌ 16 ರಂದು ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ ಅಂತರದ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಆರ್‌ಸಿಬಿ 8 ವಿಕೆಟ್‌ಗೆ 201 ರನ್‌ಗಳ ಬೃಹತ್‌ ಮೊತ್ತವನ್ನೇ ಪೇರಿಸಿತು. ಆದರೆ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್‌ ಮುಂದೆ ಈ ಮೊತ್ತವೂ ಕಡಿಮೆ ಎನಿಸಿತು.

IPL 2026 Qualifier 2: ಕ್ವಾಲಿಫೈಯರ್‌ ಪಂದ್ಯದಲ್ಲೂ ಹಲವು ದಾಖಲೆ ಮೇಲೆ ಕಣ್ಣಿಟ್ಟ ಸೂರ್ಯವಂಶಿ

ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ವೇಗದ ಅರ್ಧಶತಕ ಬಾರಿಸಿದ ಮೂರನೇ ಭಾರತೀಯ ಎಂಬ ದಾಖಲೆ ಬರೆದಿದ್ದರು. ಒಟ್ಟಾರೆ 26 ಎಸೆತಗಳಲ್ಲಿ 78 ರನ್ ಚಚ್ಚಿದರು. ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 7 ಗಗನಚುಂಬಿ ಸಿಕ್ಸರ್‌ಗಳು ಸೇರಿದ್ದವು. ಇದೇ ಭಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಇಂದಿನ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ಸೋಲಲಿ ಎಂದು ಬಯಸುತ್ತಿದ್ದಾರೆ.



ಆರೆಂಜ್‌ ಕ್ಯಾಪ್‌ ಹೋಲ್ಡರ್‌

ಹಾಲಿ ಆವೃತ್ತಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೂರ್ಯವಂಶಿ 15 ಪಂದ್ಯಗಳಿಂದ 680*ರನ್‌ ಕಲೆಹಾಕಿ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಬರೋಬ್ಬರಿ 65 ಸಿಕ್ಸರ್‌ ಮತ್ತು 55 ಬೌಂಡರಿ ಸಿಡಿಸಿದ್ದಾರೆ. ಐಪಿಎಲ್ 2026 ರಲ್ಲಿ ಸೂರ್ಯವಂಶಿ ಪವರ್‌ಪ್ಲೇನಲ್ಲಿ (ಓವರ್‌ಗಳು 1-6) 490 ರನ್‌ ಗಳಿಸಿದ್ದಾರೆ. ಇದು ಒಂದೇ ಐಪಿಎಲ್ ಋತುವಿನಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್ ಆಗಿದೆ. ಮಾತ್ರವಲ್ಲದೆ ಐಪಿಎಲ್‌ನಲ್ಲಿ ಅವರು 5 ಬಾರಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ.