ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs DC: ‌ಶತಕ ಸಿಡಿಸಿ ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ಸಂಜು ಸ್ಯಾಮ್ಸನ್

Sanju Samson: ಸಂಜು ಒಟ್ಟಾರೆಯಾಗಿ 56 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 115 ರನ್ ಗಳಿಸಿದರು. ಅವರ ಈ ಶತಕ ಮತ್ತು ಶಿವಂ ದುಬೆ ಅವರ 10 ಎಸೆತಗಳಲ್ಲಿ 20 ರನ್ ಸೂಪರ್ ಕಿಂಗ್ಸ್ 212/2 ಸ್ಕೋರ್ ಗಳಿಸಲು ಸಹಾಯ ಮಾಡಿತು. ಆಯುಷ್ ಮ್ಹಾತ್ರೆ ಕೂಡ 36 ಎಸೆತಗಳಲ್ಲಿ 59 ರನ್ ಗಳಿಸಿದರು.

ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ಸಂಜು ಸ್ಯಾಮ್ಸನ್

Sanju Samson brought up a century -

Abhilash BC
Abhilash BC Apr 12, 2026 6:51 AM

ಚೆನ್ನೈ, ಎ.12: ಚೆನ್ನೈ ಸೂಪರ್ ಕಿಂಗ್ಸ್(CSK vs DC) ತಂಡದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್(Sanju Samson) ಅವರು ಶನಿವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶತಕ ಬಾರಿಸುವ ಮೂಲಕ ಎಂಎಸ್ ಧೋನಿಯ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ. ಸಿಎಸ್‌ಕೆ ಪರ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯದ ಮೂಲಕ ಟೀಕೆಗೆ ಗುರಿಯಾಗಿದ್ದ ಸಂಜು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿ 52 ಎಸೆತಗಳಲ್ಲಿ ಶತಕ ಗಳಿಸಿದರು. ಸಂಜು ಶತಕಕ್ಕೂ ಮುನ್ನ, ಸಿಎಸ್‌ಕೆ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಒಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ಧೋನಿ ಅವರದ್ದಾಗಿತ್ತು. 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾಜಿ ನಾಯಕ ಅಜೇಯ 84 ರನ್‌ ಬಾರಿಸಿದ್ದರು.

ಸಿಎಸ್‌ಕೆ ಪರ ವಿಕೆಟ್‌ಕೀಪರ್ ಗಳಿಸಿದ ಅತ್ಯಧಿಕ ಸ್ಕೋರ್

ಸಂಜು ಸ್ಯಾಮ್ಸನ್: ಐಪಿಎಲ್ 2026 ರಲ್ಲಿ ಡಿಸಿ ವಿರುದ್ಧ 115*

ಎಂ. ಎಸ್ ಧೋನಿ: ಐಪಿಎಲ್ 2019 ರಲ್ಲಿ ಆರ್‌ಸಿಬಿ ವಿರುದ್ಧ 84*

ಎಂ. ಎಸ್ ಧೋನಿ: ಐಪಿಎಲ್ 2018 ರಲ್ಲಿ ಕೆಎಕ್ಸ್‌ಐಪಿ ವಿರುದ್ಧ 79*

ಎಂ. ಎಸ್ ಧೋನಿ: ಐಪಿಎಲ್ 2019 ರಲ್ಲಿ ಆರ್‌ಆರ್ ವಿರುದ್ಧ 75*

ಎಂ. ಎಸ್ ಧೋನಿ: ಐಪಿಎಲ್ 2011 ರಲ್ಲಿ ಆರ್‌ಸಿಬಿ ವಿರುದ್ಧ 70*

ಸಂಜು ಒಟ್ಟಾರೆಯಾಗಿ 56 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 115 ರನ್ ಗಳಿಸಿದರು. ಅವರ ಈ ಶತಕ ಮತ್ತು ಶಿವಂ ದುಬೆ ಅವರ 10 ಎಸೆತಗಳಲ್ಲಿ 20 ರನ್ ಸೂಪರ್ ಕಿಂಗ್ಸ್ 212/2 ಸ್ಕೋರ್ ಗಳಿಸಲು ಸಹಾಯ ಮಾಡಿತು. ಆಯುಷ್ ಮ್ಹಾತ್ರೆ ಕೂಡ 36 ಎಸೆತಗಳಲ್ಲಿ 59 ರನ್ ಗಳಿಸಿದರು.

CSK vs DC: ಸಂಜು ಸ್ಯಾಮ್ಸನ್‌ ಭರ್ಜರಿ ಶತಕ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಜಯ!

ಸ್ಯಾಮ್ಸನ್ ಅವರ ಅಜೇಯ 115 ರನ್‌ಗಳು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಿಎಸ್‌ಕೆ ಬ್ಯಾಟ್ಸ್‌ಮನ್ ಗಳಿಸಿದ ನಾಲ್ಕನೇ ಅತ್ಯಧಿಕ ಸ್ಕೋರ್ ಆಗಿದೆ. ಮುರಳಿ ವಿಜಯ್(127), ಶೇನ್ ವ್ಯಾಟ್ಸನ್(117*) ಮತ್ತು ಮೈಕೆಲ್ ಹಸ್ಸಿ(116*) ಮೊದಲಿಗರು.

ಟಿ20ಗಳಲ್ಲಿ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳ ಅತ್ಯಧಿಕ ಸ್ಕೋರ್‌ಗಳು

ಮುರಳಿ ವಿಜಯ್: 2010 ರಲ್ಲಿ ರಾಜಸ್ಥಾನ ವಿರುದ್ಧ 127

ಶೇನ್ ವ್ಯಾಟ್ಸನ್: 2018 ರಲ್ಲಿ SRH ವಿರುದ್ಧ 117*

ಮೈಕೆಲ್ ಹಸ್ಸಿ: 2008 ರಲ್ಲಿ KXIP ವಿರುದ್ಧ 116*

ಸಂಜು ಸ್ಯಾಮ್ಸನ್: 2026 ರಲ್ಲಿ DC ವಿರುದ್ಧ 115*

ಮುರಳಿ ವಿಜಯ್: 2012 ರಲ್ಲಿ DD ವಿರುದ್ಧ 113