ರೋಹಿತ್ ಶರ್ಮ ದಾಖಲೆ ಮುರಿದ ಸಿಕಂದರ್ ರಜಾ
Sikander Raza: ಒಂದು ಹಂತದಲ್ಲಿ ಜಿಂಬಾಬ್ವೆ 36 ಎಸೆತಗಳಲ್ಲಿ 65 ರನ್ ಗಳಿಸಬೇಕಾದ ಕಠಿಣ ಸನ್ನಿವೇಶ ಎದುರಿಸಿತ್ತು. ಈ ಹಂತದಲ್ಲಿ ಸಿಕಂದರ್ ಆಕ್ರಮಣಕಾರಿ ಆಟವಾಡಿದರು. ದುಶಾನ್ ಹೇಮಂತ ಅವರ ಒಂದೇ ಓವರಿನಲ್ಲಿ ಅವರು ಎರಡು ಸಿಕ್ಸರ್ ಸೇರಿದಂತೆ 20 ರನ್ ಬಾರಿಸಿ ಪಂದ್ಯಕ್ಕೆ ತಿರುವು ನೀಡಿದರು.
Sikander Raza breaks Rohit Sharma's legendary record -
ಕೊಲಂಬೊ, ಫೆ. 20: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಟಿ20 ವಿಶ್ವಕಪ್ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಶ್ರೀಲಂಕಾವನ್ನು ಆರು ವಿಕೆಟ್‌ಗಳ ಅಂತರದಿಂದ ಮಣಿಸಿ ಭರ್ಜರಿ ಜಯ ಸಾಧಿಸಿತು. ನಾಯಕ ಸಿಕಂದರ್ ರಜಾ ಕೇವಲ 26 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದರು. ಇದೇ ವೇಳೆ ಅವರು ರೋಹಿತ್ ಶರ್ಮ ಅವರ ದಾಖಲೆಯೊಂದನ್ನು ಮುರಿದರು.
39 ವರ್ಷದ ರಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಐಸಿಸಿ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿತ್ತು. 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 76 ರನ್ ಗಳಿಸಿ ಅವರು ಈ ಪ್ರಶಸ್ತಿ ಪಡೆದಾಗ ಈ ದಾಖಲೆಯನ್ನು ಸ್ಥಾಪಿಸಿದ್ದರು. ಆ ಸಮಯದಲ್ಲಿ, ರೋಹಿತ್‌ಗೆ 37 ವರ್ಷ 331 ದಿನಗಳು, ಆದರೆ ರಜಾಗೆ ಪ್ರಸ್ತುತ 39 ವರ್ಷ 301 ದಿನಗಳು.
ಪ್ರಸ್ತುತ ಪಂದ್ಯಾವಳಿಯಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸಿರುವ ಜಿಂಬಾಬ್ವೆ ಐತಿಹಾಸಿಕ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಸೂಪರ್-8 ಹಂತದಲ್ಲಿ ವೆಸ್ಟ್ ಇಂಡೀಸ್, ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ.
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪಥುಮ್ ನಿಸಾಂಕ ಅರ್ಧ ಶತಕದ ಬಲದಿಂದ 7 ವಿಕೆಟ್‌ಗೆ 178 ರನ್ ಪೇರಿಸಿತು. ಆದರೆ ಈ ಗುರಿಯನ್ನು ಲೀಲಾಜಾಲವಾಗಿ ಬೆನ್ನಟ್ಟಿದ ಜಂಬಾಬ್ವೆ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗೆ 182 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಲಂಕಾ ಪರ ನಿಸ್ಸಾಂಕ 47 ಎಸೆತಗಳಲ್ಲಿ 62 ರನ್ ಗಳಿಸಿದರು. ಆದರೆ ಪಂದ್ಯ ಸೋತ ಕಾರಣ ಅವರ ಈ ಆಟ ವ್ಯರ್ಥವಾಯಿತು.
AFG vs CAN: ಕೆನಡಾ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ಅಫ್ಘಾನಿಸ್ತಾನ!
ಜಿಂಬಾಬ್ವೆ ಪರ ಬ್ರಯಾನ್ ಬೆನೆಟ್ ಔಟಾಗದೇ 63 ರನ್ ಬಾರಿಸಿದರು. ನಾಯಕ ಸಿಕಂದರ್ ರಜಾ(45) ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಂದು ಹಂತದಲ್ಲಿ ಜಿಂಬಾಬ್ವೆ 36 ಎಸೆತಗಳಲ್ಲಿ 65 ರನ್ ಗಳಿಸಬೇಕಾದ ಕಠಿಣ ಸನ್ನಿವೇಶ ಎದುರಿಸಿತ್ತು. ಈ ಹಂತದಲ್ಲಿ ಸಿಕಂದರ್ ಆಕ್ರಮಣಕಾರಿ ಆಟವಾಡಿದರು. ದುಶಾನ್ ಹೇಮಂತ ಅವರ ಒಂದೇ ಓವರಿನಲ್ಲಿ ಅವರು ಎರಡು ಸಿಕ್ಸರ್ ಸೇರಿದಂತೆ 20 ರನ್ ಬಾರಿಸಿ ಪಂದ್ಯಕ್ಕೆ ತಿರುವು ನೀಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 40 ಎಸೆತಗಳಲ್ಲಿ ವೇಗವಾಗಿ 69 ರನ್ ಸೇರಿಸಿದರು.