Poonam Belliyappa: ಕ್ರೀಡೆಗಳು ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವದ ಗುಣಗಳನ್ನು ಬೆಳೆಸಲಿವೆ : ಪೂನಂ ಬೆಳ್ಳಿಯಪ್ಪ
ಕ್ರೀಡೆಗಳಲ್ಲಿ ಭಾಗಿಯಾಗುವುದು ವಿದ್ಯಾರ್ಥಿ ಜೀವನದ ಮುಖ್ಯವಾದ ಭಾಗ.ಈ ಅವಧಿಯಲ್ಲಿ ನಿಮಗೆ ಇಷ್ಟವಾದ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಉತ್ತಮ ಕ್ರೀಡಾಪಟು ವಾಗಲು ಸಾಧ್ಯ.ಇದರಿಂದಾಗಿ ನಾನು ಏನಾಗಬಲ್ಲೆ ಎಂಬ ಬಗ್ಗೆ ನಿಮ್ಮ ದಾರಿ ಮತ್ತು ಗುರಿ ಸ್ಪಷ್ಟ ವಾಗುತ್ತದೆ. ಯಾರನ್ನೋ ಅನುಕರಣೆ ಮಾಡುವ ಬದಲಿಗೆ ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆ ಯಿರಲಿ. ಯಾರು ಕ್ರೀಡೆಗಳನ್ನು ನಂಬುತ್ತಾರೋ ಅವರಿಗೆ ಕ್ರೀಡೆಗಳೇ ಕೈಹಿಡಿದು ನಡೆಸಿ ಗೌರವ ತಂದು ಕೊಡುತ್ತವೆ

ನಗರಹೊರವಲಯ ಬಿಜಿಎಸ್ ಶಾಲೆಯಲ್ಲಿ ನಡೆದ ಬಿಜಿಎಸ್ ಇಂಟರ್‌ಹೌಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕ್ರೀಡಾಪಟು ಪೂನಂ ಬೆಳ್ಳಿಯಪ್ಪ ಮಾತನಾಡಿದರು.

ಚಿಕ್ಕಬಳ್ಳಾಪುರ : ಶಾಲಾ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಮಾನಸಿಕ ಆರೋಗ್ಯ ಕಾಪಾಡಲು ನೆರವಾಗುವ ಜತೆಗೆ ಶಿಸ್ತು, ಸಮಯ ಪ್ರಜ್ಞೆ, ಮತ್ತುನಾಯಕತ್ವದ ಗುಣಗಳನ್ನು ಬೆಳೆಸಲಿವೆ ಎಂದು ಅಥ್ಲೆಟಿಕ್ಸ್ ವಿಭಾಗದ ಅಂತರಾಷ್ಟ್ರೀಯ ಕ್ರೀಡಾಪಟು ಪೂನಂ ಬೆಳ್ಳಿಯಪ್ಪ ತಿಳಿಸಿದರು.
ನಗರ ಹೊರವಲಯ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ದೀಕ್ಷಾ ಕಾರ್ಯಕ್ರಮದ ಅಡಿಯಲ್ಲಿ ನಡೆದ ಬಿಜಿಎಸ್ ಇಂಟರ್‌ಹೌಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗಿಯಾಗುವುದು ವಿದ್ಯಾರ್ಥಿ ಜೀವನದ ಮುಖ್ಯವಾದ ಭಾಗ.ಈ ಅವಧಿಯಲ್ಲಿ ನಿಮಗೆ ಇಷ್ಟವಾದ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಉತ್ತಮ ಕ್ರೀಡಾಪಟು ವಾಗಲು ಸಾಧ್ಯ.ಇದರಿಂದಾಗಿ ನಾನು ಏನಾಗಬಲ್ಲೆ ಎಂಬ ಬಗ್ಗೆ ನಿಮ್ಮ ದಾರಿ ಮತ್ತು ಗುರಿ ಸ್ಪಷ್ಟವಾಗುತ್ತದೆ.ಯಾರನ್ನೋ ಅನುಕರಣೆ ಮಾಡುವ ಬದಲಿಗೆ ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆಯಿರಲಿ.ಯಾರು ಕ್ರೀಡೆಗಳನ್ನು ನಂಬುತ್ತಾರೋ ಅವರಿಗೆ ಕ್ರೀಡೆಗಳೇ ಕೈಹಿಡಿದು ನಡೆಸಿ ಗೌರವ ತಂದು ಕೊಡುತ್ತವೆ ಎಂದರು.
ಇದನ್ನೂ ಓದಿ: BCCI Adopt Olympic Sports: ಒಲಿಂಪಿಕ್ ಕ್ರೀಡೆ ದತ್ತು ಪಡೆಯಲು ಮುಂದಾದ ಬಿಸಿಸಿಐ
ದೇಶದಲ್ಲಿ ಕ್ರೀಡೆಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಶಾಲಾ ಕಾಲೇಜು ಹಂತದಲ್ಲಿಯೇ ಪ್ರತಿಭಾವಂತ ಕ್ರೀಡಾಪಟುಗಳನ್ನು ಹುಡುಕಿ ಅವರಿಗೆ ಸೂಕ್ತ ತರಬೇತಿ ನೀಡುವ ಕೆಲಸವಾಗುತ್ತಿದೆ. ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಕೂಡ ಪ್ರತಿಭಾವಂತ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ದಾಪುಗಾಲಿಟ್ಟು ಬೆಳೆಯುತ್ತಿರುವುದು ಸಂತೋಷ ತಂದಿದೆ ಎಂದರು.
ರಾಜ್ಯ ಕೇಂದ್ರ ಸರಕಾರಗಳೂ ಕೂಡ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಹೆಚ್ಚಿನ ಮಾನ್ಯತೆ ನೀಡಿವೆ ಕರ್ನಾಟಕ ಸರಕಾರವು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವ, ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ ಹಾಜರಾತಿಯಲ್ಲಿ ಶೇ.15ರಷ್ಟು, ಅಂತರಾ ಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಿದೆ. ಇದಲ್ಲದೆ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದರೆ ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ಶೇ 50ರಷ್ಟು ಕೃಪಾಂಕವನ್ನು ನೀಡುತ್ತಾರೆ. ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ನಗದು ಬಹುಮಾನ ದೊರೆಯಲಿದೆ. ಇದನ್ನು ಮನಗಂಡು ಶಾಲಾಹಂತದಲ್ಲಿಯೇ ಆಟೋಟಗಳಲ್ಲಿ ಭಾಗಿಯಾಗುವು ದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಿ.ಸಿ. ಮೋಹನ್ ಮಾತನಾಡಿ, ಕ್ರೀಡೆಯೆಂದರೆ ಕೇವಲ ಕ್ರಿಕೆಟ್ ಮಾತ್ರ ಎಂಬ ನಂಬಿಕೆ ಸಮಾಜದಲ್ಲಿ ಹಬ್ಬಿದೆ. ಇದು ಸುಳ್ಳು,ಕೊಕ್ಕೋ, ಕಬ್ಬಡ್ಡಿ, ಟೆನಿಸ್, ಹಾಕಿ, ವಾಲಿಬಾಲ್ , ಪುಟ್‌ಬಾಲ್, ಅಥ್ಲೆಟಿಕ್ಸ್ ಹೀಗೆ ನೂರಾರು ಕ್ರೀಡೆಗಳು ಅಷ್ಟೇ ಅವಕಾಶಗಳಿವೆ.ಇದನ್ನು ಮನಗಂಡು ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗೂ ಪ್ರಾಶಸ್ತö್ಯ ನೀಡಬೇಕು. ಬಿಜಿಎಸ್ ಶಿಕ್ಷಣ ಸಂಸ್ಥೆಗಳಿಗೆ ಸಂಬAಧಪಟ್ಟAತೆ ನಡೆಯುತ್ತಿರುವ ಅಂತರಶಾಲಾ ಕ್ರೀಡಾಕೂಟವು ಪ್ರತಿಭಾವಂತ ಕ್ರೀಡಾಪಟುಗಳ ಸಾಧನೆಗೆ ವೇದಿಕೆಯಾಗಲಿ ಎಂದರು.
ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಆಡುವುದನ್ನು ಕಲಿಯಬೇಕು. ಆಟೋಟಗಳಲ್ಲಿ ಸೋಲು ಗೆಲುವು ಸಹಜ.ಇಂದು ಗೆದ್ದವರು ನಾಳೆ ಸೋಲಬಹುದು, ಸೋತವರು ಸತತ ಪರಿಶ್ರಮದಿಂದ ನಾಳೆ ಗೆಲುವು ಪಡೆಯಬಹುದು. ಆದ್ದರಿಂದ ದ್ವೇಷಭಾವನೆಯನ್ನು ತೊರೆಯಬೇಕು. ಒಟ್ಟಿಗೆ ಸೇರಿದಾಗ ಹೊಸ ಬಾಂಧವ್ಯ ಉಂಟಾಗಳು ಸಾಧ್ಯ.ನಮ್ಮ ನಮ್ಮ ಸಾಮರ್ಥ್ಯದ ಜತೆಗೆ ಕೊರತೆಗಳನ್ನೂ ಅರಿಯಲು ಸಾಧ್ಯ. ಎಲ್ಲರಿಗೂ ಒಳಿತಾಗಲಿ ಕಾಲಬೈರವನ ಶ್ರೀರಕ್ಷೆ, ಚುಂಚಶ್ರೀ ಗುರುಗಳ ಆಶೀರ್ವಾದ ನಿಮ್ಮ ಮೇಲಿರಲಿ ಎಂದರು.
ಸಂವಿತ್ ಶಾಲೆಯ ಕೌನ್ಸಿಲರ್ ಕಲಾವತಿ ಕೆ.ಆರ್. ಮಾತನಾಡಿ ಕ್ರೀಡಾಪಟುಗಳಾಗಿ ಬೆಳೆಯಲು ಇಂದು ವಿಫುಲ ಅವಕಾಶಗಳಿವೆ.ಈ ರಂಗದಲ್ಲಿ ಬೆಳೆಯಲು ಆಸಕ್ತಿಯಿರುವವರು ನಿಮ್ಮ ಕ್ಷೇತ್ರವನ್ನು ಅಯ್ಕೆ ಮಾಡಿಕೊಂಡು ಸರಿಯಾದ ತರಬೇತುದಾರರ ಮಾರ್ಗದರ್ಶನದಲ್ಲಿ ಮುಂದುವರೆದಲ್ಲಿ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದರು.
ಪಾರಿವಾಳ ಹಾರಿಸುವ ಮೂಲಕ ಪ್ರಾಂಶುಪಾಲರು ಅತಿಥಿಗಳು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಇದೇ ವೇಳೆ ಪೂನಂ ಬೆಳ್ಳಿಯಪ್ಪ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಪ್ರಾಂಶುಪಾಲ ಡಿ.ಸಿ.ಮೋಹನ್, ಎಲ್ಲಾ ಬೋಧಕ ಬೋದಕೇತರ ಸಿಬ್ಬಂದಿ, ದೈಹಿಕ ಶಿಕ್ಷಕರು, ಇದ್ದರು.