ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SRH vs RR: ರಾಯಲ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್‌ರೈಸರ್ಸ್‌?

IPL 2026: 15 ವರ್ಷದ ವೈಭವ್‌ ಸೂರ್ಯವಂಶಿ ಪಂದ್ಯದ ಪ್ರಮುಖ ಹೈಲೆಟ್ಸ್‌ ಆಗಿದ್ದಾರೆ. 4 ಪಂದ್ಯಗಳಲ್ಲಿ 200 ರನ್‌ ಕಲೆಹಾಕಿರುವ ಅವರು ಟೂರ್ನಿಯ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಜೊತೆ ಯಶಸ್ವಿ ಜೈಸ್ವಾಲ್‌(183), ಧ್ರುವ್‌ ಜುರೆಲ್‌(176) ಕೂಡಾ ರಾಯಲ್ಸ್‌ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.

ಇಂದಿನ ರಾಜಸ್ಥಾನ್‌ vs ಸನ್‌ರೈಸರ್ಸ್‌ ಪಂದ್ಯಕ್ಕೆ ಆಡುವ ಬಳಗ ಹೇಗಿರಲಿದೆ?

SRH Vs RR -

Abhilash BC
Abhilash BC Apr 13, 2026 11:04 AM

ಹೈದರಾಬಾದ್‌, ಎ.13: ಈ ಬಾರಿ ಐಪಿಎಲ್‌(IPL 2026)ನಲ್ಲಿ ಅಜೇಯವಾಗಿರುವ ರಾಜಸ್ಥಾನ ರಾಯಲ್ಸ್(SRH vs RR) ಗೆಲುವಿನ ಓಟ ಮುಂದುವರಿಸಲು ಕಾಯುತ್ತಿದ್ದು, ಇಂದು(ಸೋಮವಾರ) ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ರಾಯಲ್ಸ್‌ ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಗೆದ್ದಿದ್ದರೆ, ಹೈದರಾಬಾದ್‌ ಆಡಿರುವ 4ರ ಪೈಕಿ 3ರಲ್ಲಿ ಸೋಲನುಭವಿಸಿದೆ. ಹೀಗಾಗಿ ಹೈದರಾಬಾದ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

15 ವರ್ಷದ ವೈಭವ್‌ ಸೂರ್ಯವಂಶಿ ಪಂದ್ಯದ ಪ್ರಮುಖ ಹೈಲೆಟ್ಸ್‌ ಆಗಿದ್ದಾರೆ. 4 ಪಂದ್ಯಗಳಲ್ಲಿ 200 ರನ್‌ ಕಲೆಹಾಕಿರುವ ಅವರು ಟೂರ್ನಿಯ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಜೊತೆ ಯಶಸ್ವಿ ಜೈಸ್ವಾಲ್‌(183), ಧ್ರುವ್‌ ಜುರೆಲ್‌(176) ಕೂಡಾ ರಾಯಲ್ಸ್‌ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. ಹೈದರಾಬಾದ್‌ ತಂಡ ಬಲಿಷ್ಠ ಬ್ಯಾಟಿಂಗ್‌ ಲೈನ್‌ ಅಪ್‌ ಹೊಂದಿದ್ದರು ಇದು ಕೇವಲ ಕಾಗದ ಮೇಲಿನ ತಂಡಕ್ಕೆ ಸೀಮಿತವಾಗಿದೆ. ಬೌಲಿಂಗ್‌ ವಿಭಾಗ ತುಂಬಾ ದುರ್ಬಲವಾಗಿದೆ.

ಪಂದ್ಯದ ಪಿಚ್‌ ರಿಪೋರ್ಟ್‌

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್ ಸ್ವರ್ಗವಾಗಿದೆ ಮತ್ತು ಅಭಿಮಾನಿಗಳು ಸೋಮವಾರ ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಇಲ್ಲಿ ಎಸ್‌ಆರ್‌ಹೆಚ್ ಮತ್ತು ಆರ್‌ಆರ್ ನಡುವೆ ನಡೆದ ಕೊನೆಯ ಐಪಿಎಲ್ ಪಂದ್ಯದಲ್ಲಿ, ಸನ್‌ರೈಸರ್ಸ್ 6 ವಿಕೆಟ್‌ಗಳಿಗೆ 286 ರನ್ ಗಳಿಸಿತು ಮತ್ತು ಇದಕ್ಕೆ ಪ್ರತಿಯಾಗಿ, ಆರ್‌ಆರ್ ತನ್ನ 20 ಓವರ್‌ಗಳ ಕೋಟಾದಲ್ಲಿ 242 ರನ್‌ಗಳನ್ನು ಗಳಿಸಿತ್ತು.

ಮುಖಾಮುಖಿ

ಆಡಿದ ಪಂದ್ಯಗಳು: 21

SRH ಗೆಲುವು: 12

RR ಗೆಲುವು: 9

ಫಲಿತಾಂಶವಿಲ್ಲ: 0

SRH vs RR ಪ್ರಮುಖ ಅಂಕಿಅಂಶಗಳು, ದಾಖಲೆಗಳು

ಅತ್ಯಧಿಕ ಮೊತ್ತ: ಮಾರ್ಚ್ 23, 2025 ರಂದು ಹೈದರಾಬಾದ್‌ನಲ್ಲಿ SRH 20 ಓವರ್‌ಗಳಲ್ಲಿ 286/6.

ಕಡಿಮೆ ಮೊತ್ತ: ಮೇ 8, 2014 ರಂದು ಅಹಮದಾಬಾದ್‌ನಲ್ಲಿ RR 19.5 ಓವರ್‌ಗಳಲ್ಲಿ 102/10.

ಅತಿದೊಡ್ಡ ಗೆಲುವು (ರನ್‌ಗಳಿಂದ): ಏಪ್ರಿಲ್ 2, 2023 ರಂದು ಹೈದರಾಬಾದ್‌ನಲ್ಲಿ ರಾಜಸ್ಥಾನ ರಾಯಲ್ಸ್ 72 ರನ್‌ಗಳಿಂದ (ಗುರಿ: 204) ಗೆದ್ದಿತ್ತು.

ಅತಿದೊಡ್ಡ ಗೆಲುವು (ವಿಕೆಟ್‌ಗಳಿಂದ): ಏಪ್ರಿಲ್ 9, 2018 ರಂದು ಹೈದರಾಬಾದ್‌ನಲ್ಲಿ SRH 9 ವಿಕೆಟ್‌ಗಳಿಂದ (ಗುರಿ: 126) ಜಯ ಸಾಧಿಸಿತ್ತು.

ಬ್ಯಾಟ್‌ ಪರೀಕ್ಷಿಸಲು ಪೇಚಾಡಿದ ಅಂಪೈರ್‌ ಮೇಲೆ ಗರಂ ಆದ ರೋಹಿತ್‌; ವಿಡಿಯೊ ವೈರಲ್‌

ಸಂಭಾವ್ಯ ತಂಡಗಳು

ಸನ್‌ರೈಸರ್ಸ್‌ ಹೈದರಾಬಾದ್‌: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಶಿವಂಗ್ ಕುಮಾರ್, ಹರ್ಷಲ್ ಪಟೇಲ್, ಈಶಾನ್ ಮಾಲಿಂಗ.

ರಾಜಸ್ಥಾನ್ ರಾಯಲ್ಸ್: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿ.ಕೀ.), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್.