ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟಿ ತಾನಿಯಾ ಚಟರ್ಜಿಗೆ ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿ ಸಿಕ್ಕಿ ಬಿದ್ದ ಯುಜ್ವೇಂದ್ರ ಚಾಹಲ್

Yuzvendra Chahal: ಇಲ್ಲಿಯವರೆಗೆ, ಯುಜ್ವೇಂದ್ರ ಚಾಹಲ್ ವೈರಲ್ ವೀಡಿಯೊ ಅಥವಾ ಆಪಾದಿತ ಸಂದೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಮೌನವು ಕುತೂಹಲವನ್ನು ಹೆಚ್ಚಿಸಿದೆ, ನೆಟ್ಟಿಗರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಊಹಾಪೋಹಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ.

ನಟಿ ತಾನಿಯಾಗೆ ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿ ಸಿಕ್ಕಿ ಬಿದ್ದ ಚಾಹಲ್

Taniya Chatterjee -

Abhilash BC
Abhilash BC Apr 13, 2026 11:30 AM

ಮುಂಬಯಿ, ಎ.13: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ. 'ಗಾಂಡಿ ಬಾತ್' ನಟಿ ತಾನಿಯಾ ಚಟರ್ಜಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಲಿ ಸಂದೇಶ ಕಳುಹಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಚಹಲ್‌ ಮಾಡಿರುವ ಸಂದೇಶವನ್ನು ಸ್ವತಃ ತಾನಿಯಾ ಚಟರ್ಜಿ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಆದರೆ ಘಟನೆ ಬಗ್ಗೆ ಚಹಲ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾನಿಯಾ ಚಟರ್ಜಿ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ನಟಿ ಚಾಹಲ್ ಇನ್‌ಸ್ಟಾಗ್ರಾಮ್‌ನಲ್ಲಿ ತನಗೆ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ಫೋನ್ ಅನ್ನು ಕ್ಯಾಮೆರಾದತ್ತ ಹಿಡಿದುಕೊಂಡು, ಅವರ ಚಾಟ್ ಅನ್ನು ತೋರಿಸುತ್ತಿರುವುದು ಕೂಡ ಕಂಡುಬಂದಿದೆ.

ಚಹಾಲ್ ಅವರು ತಮಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿ “ನೀವು ತುಂಬಾ ಕ್ಯೂಟ್ ಆಗಿದ್ದೀರಿ” ಎಂದು ಹೇಳಿದ್ದಾರೆ ಎಂದು ತಾನಿಯಾ ತಿಳಿಸಿದ್ದಾರೆ. ಮಾತ್ರವಲ್ಲದೆ ಚಹಲ್‌ ನನ್ನನ್ನು ತುಂಬಾ ತಡವಾಗಿ ನೋಡಿದೆ ಎಂದು ಹೇಳಿದ್ದಾಗಿ ತಿಳಿಸಿದರು. ಸದ್ಯ ಚಹಲ್‌ ಮಾಡಿದ ಈ ಮೆಸೆಜ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಲ್ಲಿಯವರೆಗೆ, ಯುಜ್ವೇಂದ್ರ ಚಾಹಲ್ ವೈರಲ್ ವೀಡಿಯೊ ಅಥವಾ ಆಪಾದಿತ ಸಂದೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಮೌನವು ಕುತೂಹಲವನ್ನು ಹೆಚ್ಚಿಸಿದೆ, ನೆಟ್ಟಿಗರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಊಹಾಪೋಹಗಳನ್ನು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ.



ತಾನಿಯಾ ಚಟರ್ಜಿ ಚಲನಚಿತ್ರಗಳು ಮತ್ತು OTT ವೇದಿಕೆಯಲ್ಲಿ ಬೋಲ್ಡ್‌ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಗಾಂಡಿ ಬಾತ್, ಫ್ಲಾಟ್‌ಮೇಟ್, ಕಸಕ್, ವಾಚ್‌ಮ್ಯಾನ್, ಲವ್ ಬೈಟ್ಸ್ ಮತ್ತು ಉಥಾ ಪಾಠಕ್‌ನಂತಹ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಯುಜ್ವೇಂದ್ರ ಚಾಹಲ್?; ವಿಡಿಯೊ ವೈರಲ್‌

2025 ರಲ್ಲಿ ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ನಂತರ ಚಾಹಲ್, ರೇಡಿಯೋ ನಿರೂಪಕಿ ಆರ್‌ಜೆ ಮಹ್ವಾಶ್ ಜತೆ ಸುತ್ತಾಟ ನೆಡೆಸುತ್ತಿದ್ದರು. ಆದರೆ ಇತ್ತೀಚೆಗೆ ಚಾಹಲ್ ಮತ್ತು ಮಹ್ವಾಶ್ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿಕೊಂಡಿದ್ದಾರೆ.

ಐಪಿಎಲ್‌ ಆರಂಭಕ್ಕೂ ಮುನ್ನ ಚಾಹಲ್‌, ಬಿಗ್ ಬಾಸ್ 13 ರ ಮಾಜಿ ಸ್ಪರ್ಧಿ ಶೆಫಾಲಿ ಬಗ್ಗಾ(Shefali Bagga) ಮುಂಬೈನಲ್ಲಿ ಜತೆಯಾಗಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು.