ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು ಯಾರು?

Most wickets in ipl history: ಈ ಬಾರಿಯ ಐಪಿಎಲ್‌ ವೇಳೆ ಪ್ರತಿ ತಂಡವು ಗರಿಷ್ಠ 2 ಅಭ್ಯಾಸ ಪಂದ್ಯ ಮಾತ್ರ ಆಡಬಹುದು ಮತ್ತು ಅದಕ್ಕಾಗಿ ಮಂಡಳಿಯಿಂದ ಪೂರ್ವಾನುಮತಿ ಕಡ್ಡಾಯ. ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಯುವ ಅಭ್ಯಾಸ ಪಂದ್ಯಗಳು 3.5 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂಬ ನಿಯಮವನ್ನು ಬಿಸಿಸಿಐ ರೂಪಿಸಿದೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

most wickets in ipl history -

Abhilash BC
Abhilash BC Mar 21, 2026 4:15 PM

ಬೆಂಗಳೂರು, ಮಾ.21: ಅಭಿಮಾನಿಗಳು ಭಾರೀ ಕಾತರದಿಂದ ಕಾಯುತ್ತಿರುವ 19ನೇ ಆವೃತ್ತಿಯ ಐಪಿಎಲ್‌(IPL 2026) ಟೂರ್ನಿ ಆರಂಭಕ್ಕೆ ಇನ್ನೇನು ಒಂದು ವಾರ ಮಾತ್ರ ಬಾಕಿಯಿದೆ. ಇದಕ್ಕೂ ಮುನ್ನ ಈ ಹಿಂದಿನ 18 ಆವೃತ್ತಿಯ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌(Most wickets in ipl history) ಕಿತ್ತ ಟಾಪ್‌-5 ಬೌಲರ್‌ ಯಾರೆಂಬ ವರದಿ ಇಲ್ಲಿದೆ.

ಯಜುವೇಂದ್ರ ಚಹಲ್‌

ಸದ್ಯ ಐಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆಸರಿನಲ್ಲಿದೆ. ನಾಲ್ಕು ಫ್ರಾಂಚೈಸಿಗಳ ಪರ ಒಟ್ಟು 174 ಪಂದ್ಯಗಳನ್ನಾಡಿರುವ ಚಹಲ್‌, 221* ವಿಕೆಟ್‌ ಕಿತ್ತಿದ್ದಾರೆ. ಒಂದು ಬಾರಿ 5 ವಿಕೆಟ್‌ ಗೊಂಚಲು ಪಡೆದಿದ್ದಾರೆ. ಹಾಲಿ ಆವೃತ್ತಿಯಲ್ಲಿಯೂ ಆಡುತ್ತಿರುವ ಕಾರಣ ಅವರಿಗೆ ತಮ್ಮ ವಿಕೆಟ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವಿದೆ.

ಭುವನೇಶ್ವರ್‌ ಕುಮಾರ್‌

ಭಾರತ ತಂಡದ ಹಿರಿಯ ಹಾಗೂ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಅವರು ಈ ಯಾದಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರು ಈವರೆಗೆ 190 ಐಪಿಎಲ್‌ ಪಂದ್ಯಗಳಿಂದ ಒಟ್ಟು 198* ವಿಕೆಟ್‌ ಪಡೆದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ 2 ವಿಕೆಟ್‌ ಕಿತ್ತರೆ 200 ವಿಕೆಟ್‌ಗಳ ಕ್ಲಬ್‌ ಸೇರಲಿದ್ದಾರೆ.

ಸುನೀಲ್‌ ನರೈನ್‌

ವೆಸ್ಟ್‌ ಇಂಡೀಸ್‌ನ ಸ್ಪಿನ್‌ ಆಲ್‌ರೌಂಡರ್‌ ಸುನೀಲ್‌ ನರೈನ್‌ ಅವರು ಈವರೆಗೆ 190 ಐಪಿಎಲ್‌ ಪಂದ್ಯಗಳಿಂದ 192* ವಿಕೆಟ್‌ ಕಿತ್ತು ಮೂರನೇ ಸ್ಥಾನದಲ್ಲಿದ್ದಾರೆ. 2012ರಲ್ಲಿ ಕೆಕೆಆರ್‌ ಮೂಲಕ ಐಪಿಎಲ್‌ ಪದಾರ್ಪಣೆ ಮಾಡಿದ ಅವರು ಒಂದೇ ಫ್ರಾಂಚೈಸಿ ಪರ ಆಡುತ್ತಿದ್ದಾರೆ. ಈ ಬಾರಿಯೂ ಆಡುತ್ತಿರುವ ಕಾರಣ ಅವರಿಗೆ 200 ವಿಕೆಟ್‌ ಪೂರ್ತಿಗೊಳಿಸುವ ಅವಕಾಶವಿದೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್‌-5 ಬ್ಯಾಟ್ಸ್‌ಮನ್‌ಗಳು

ಪಿಯೂಷ್ ಚಾವ್ಲಾ

ಮಾಜಿ ಸ್ಪಿನ್ನರ್‌ ಪಿಯೂಷ್ ಚಾವ್ಲಾ ಅವರು ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತವರ ಪಟ್ಟಿಯಲ್ಲಿ ನರೈನ್‌ ಜತೆ ಜಂಟಿ 3ನೇ ಸ್ಥಾನ ಪಡೆದಿದ್ದಾರೆ. ಆದರೆ ಪಂದ್ಯಗಳ ಆಧಾರದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2008ರ ಉದ್ಘಾಟನ ಆವೃತ್ತಿಯಿಂದ ಆಡಿದ್ದ ಅವರು 2024ರಲ್ಲಿ ವಿದಾಯ ಹೇಳಿದ್ದರು. ಒಟ್ಟು 192 ಪಂದ್ಯಗಳಿಂದ 192 ವಿಕೆಟ್‌ ಪಡೆದಿದ್ದಾರೆ.

ಆರ್‌. ಅಶ್ವಿನ್‌

ದಿಗ್ಗಜ ಆಟಗಾರ ಆರ್.‌ ಅಶ್ವಿನ್‌ ಅವರು ಈ ಯಾದಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಒಟ್ಟು 5 ಫ್ರಾಂಚೈಸಿಗಳ ಪರ ಆಡಿರುವ ಅಶ್ವಿನ್‌, 187 ವಿಕೆಟ್‌ ಕಿತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಡಿದ್ದ ಅವರು ಈ ಬಾರಿಯಾ ಆವೃತ್ತಿಗೂ ಮುನ್ನ ನಿವೃತ್ತಿ ಘೋಷಿಸಿದ್ದರು. 183* ವಿಕೆಟ್‌ ಕಿತ್ತಿರುವ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಈ ಬಾರಿ ಅಶ್ವಿನ್‌ ದಾಖಲೆ ಮುರಿಯುವ ಅವಕಾಶವಿದೆ. ಇದಕ್ಕಾಗಿ ಬುಮ್ರಾಗೆ 5 ವಿಕೆಟ್‌ ಅಗತ್ಯವಿದೆ.