ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lakshmi Nivasa Serial: ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ!

Lakshmi Nivasa Serial:ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ಚೆಲ್ವಿ ಪಾತ್ರದ ಮೂಲಕ ಹಳ್ಳಿ ಹುಡುಗಿಯ ಮುಗ್ಧತೆಯನ್ನು ಪಾತ್ರ ಮಾಡ್ತಿರೋ ನಟಿ ಅಶ್ವಿನಿ ಆರ್. ಮೂರ್ತಿ ಎಲ್ಲರಿಗೂ ಅಚ್ಚುಮೆಚ್ಚು. ನಟನೆ ಮತ್ತು ಮುದ್ದಾದ ಪಾತ್ರದ ಮೂಲಕ ಜನಮನ ಗೆಲ್ಲುತ್ತಿರುವ ಜೋಡಿ ಅಂದ್ರೆ ಅದು ವೆಂಕಿ ಮತ್ತು ಚೆಲ್ವಿಯ ಜೋಡಿ. ಲಕ್ಷ್ಮೀ ನಿವಾಸದಲ್ಲಿನ ಇವರ ಪಾತ್ರ ನೋಡಿ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಆಗಿದ್ದಾರೆ. ಆದರೆಅಶ್ವಿನಿ ಹೋಗಿ ಅವರ ಹೆಸರು ಚೆರಿಕಾ ಆಗಿದೆ. ಚೆರಿಕಾ ಆರ್. ಮೂರ್ತಿಕನ್ನಡ ಮತ್ತು ತಮಿಳು ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಮಾತ್ರವಲ್ಲದೇ ಉದ್ಯಮಿಯೂ ಆಗಿದ್ದಾರೆ.

ಸದ್ದಿಲ್ಲದೇ  ದಾಂಪತ್ಯ ಜೀವನಕ್ಕೆ ಕಾಲಿಟ್ಟ  ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ!

ಲಕ್ಷ್ಮೀ ನಿವಾಸ ಧಾರಾವಾಹಿ -

Yashaswi Devadiga
Yashaswi Devadiga Nov 13, 2026 10:52 AM

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ಚೆಲ್ವಿ ಪಾತ್ರದ ಮೂಲಕ ಹಳ್ಳಿ ಹುಡುಗಿಯ ಮುಗ್ಧತೆಯನ್ನು ಪಾತ್ರ ಮಾಡ್ತಿರೋ ನಟಿ ಅಶ್ವಿನಿ ಆರ್. ಮೂರ್ತಿ ಎಲ್ಲರಿಗೂ ಅಚ್ಚುಮೆಚ್ಚು. ನಟನೆ ಮತ್ತು ಮುದ್ದಾದ ಪಾತ್ರದ ಮೂಲಕ ಜನಮನ ಗೆಲ್ಲುತ್ತಿರುವ ಜೋಡಿ ಅಂದ್ರೆ ಅದು ವೆಂಕಿ ಮತ್ತು ಚೆಲ್ವಿಯ ಜೋಡಿ. ಲಕ್ಷ್ಮೀ ನಿವಾಸದಲ್ಲಿನ ಇವರ ಪಾತ್ರ ನೋಡಿ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಆಗಿದ್ದಾರೆ. ಆದರೆಅಶ್ವಿನಿ ಹೋಗಿ ಅವರ ಹೆಸರು ಚೆರಿಕಾ ಆಗಿದೆ.ಚೆರಿಕಾ ಆರ್. ಮೂರ್ತಿಕನ್ನಡ ಮತ್ತು ತಮಿಳು ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಮಾತ್ರವಲ್ಲದೇ ಉದ್ಯಮಿಯೂ ಆಗಿದ್ದಾರೆ. ಇದೀಗ ನಟಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ.

ಎಐ ರಚಿತ ಫೋಟೋ ಶೇರ್​ ಮಾಡಿದ್ದು, ತಮ್ಮ ಪತಿಯ ಮುಖವನ್ನು ರಿವೀಲ್​ ಮಾಡಲಿಲ್ಲ. ನನ್ನ ಶಾಂತಿ, ಸುರಕ್ಷಿತ ಸ್ಥಳ ಮತ್ತು ನಾನು ಯಾವಾಗಲೂ ನಂಬಬಹುದಾದ ವ್ಯಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು. ದೇವರು ನಿಮ್ಮನ್ನು ನಿಜವಾಗಿಯೂ ವಿಶೇಷವಾಗಿಸಿದ್ದಾನೆ, ಮತ್ತು ನಾನು ನಿಮಗಾಗಿ ಪ್ರತಿದಿನ ಅವನಿಗೆ ಧನ್ಯವಾದ ಹೇಳುತ್ತೇನೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಇವರೊಬ್ಬ ಕಾಸ್ಮಟಾಲಜಿಸ್ಟ್. ಇವರು ತಮ್ಮದೇ ಆದ ಬ್ಯೂಟಿ ಸಲೂನ್ ಕೂಡ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಇವರು. ಚೆರಿಕಾ ಅವರಿಗೆ ಲಕ್ಷ್ಮೀ ನಿವಾಸ ಏನು ಮೊದಲ ಸೀರಿಯಲ್ ಅಲ್ಲ, ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ಅಶ್ವಿನಿ ಮಿಂಚಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ಇವರು ನಟಿಸಿದ್ದರು, ಅಷ್ಟೇ ಅಲ್ಲ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ನಟಿಸಿದ್ದರು.

ಮಹೇಶ್ ರಾವ್ ನಿರ್ದೇಶನದ ಜೀ ತಮಿಳು ವಾಹಿನಿಯ 'ಗೆಟ್ಟಿಮೇಳಂ' ಧಾರಾವಾಹಿಯಲ್ಲಿ 'ರೇವತಿ' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀಷ ನಾಯಕನಾಗಿ ನಟಿಸಿರುವ ಕನ್ನಡದ 'ತರಂಗಾಂತರಂಗ' ಸಿನಿಮಾದಲ್ಲಿ ಚೆರಿಕಾ ಮೂರ್ತಿ ನಾಯಕಿಯಾಗಿ ಅಭಿನಯಿಸಿದ್ದಾರೆ.