ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಟ್ನೆಸ್, ಬೌಲಿಂಗ್‌ ಸುಧಾರಿಸದ ಹೊರತು ಸರಣಿ ಗೆಲುವು ಅಸಾಧ್ಯ; ಶುಭಮನ್‌ ಗಿಲ್‌

Shubman Gill: ಇಂಗ್ಲೆಂಡ್‌ ಸರಣಿ ಆರಂಭಕ್ಕೂ ಮುನ್ನವೇ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ಅನುಭವಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯದಿಂದ ಹೊರಬಿದ್ದರು. ಅವರ ಬದಲಿಗೆ ತಂಡಕ್ಕೆ ಆಯ್ಕೆಯಾದ ನಿತೀಶ್‌ ಕುಮಾರ್‌ ರೆಡ್ಡಿ ಕೂಡ ಸರಣಿ ಆರಂಭವಾಗಲು ಕೆಲವೇ ದಿನಗಳು ಇರುವಾಗ ನಿತೀಶ್ ಕುಮಾರ್ ರೆಡ್ಡಿ ಕೂಡ ಕ್ವಾಡ್ರೈಸ್ಪ್ಸ್ ಗಾಯಕ್ಕೆ ತುತ್ತಾದರು.

ಫಿಟ್ನೆಸ್, ಬೌಲಿಂಗ್‌ ಸುಧಾರಿಸದ ಹೊರತು ಸರಣಿ ಗೆಲುವು ಅಸಾಧ್ಯ; ಗಿಲ್‌

Shubman Gill -

Abhilash BC
Abhilash BC Jul 20, 2026 11:53 AM

ಲಾರ್ಡ್ಸ್‌, ಜು.22: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡ ಬಳಿಕ ತಂಡದ ಆಟಗಾರರು ಫಿಟ್ನೆಸ್ ಸುಧಾರಿಸಿಕೊಳ್ಳಬೇಕು ಎಂದು ನಾಯಕ ಶುಭಮನ್‌ ಗಿಲ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸರಣಿ ಆರಂಭಕ್ಕೂ ಮುನ್ನವೇ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ಅನುಭವಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯದಿಂದ ಹೊರಬಿದ್ದರು. ಅವರ ಬದಲಿಗೆ ತಂಡಕ್ಕೆ ಆಯ್ಕೆಯಾದ ನಿತೀಶ್‌ ಕುಮಾರ್‌ ರೆಡ್ಡಿ ಕೂಡ ಸರಣಿ ಆರಂಭವಾಗಲು ಕೆಲವೇ ದಿನಗಳು ಇರುವಾಗ ನಿತೀಶ್ ಕುಮಾರ್ ರೆಡ್ಡಿ ಕೂಡ ಕ್ವಾಡ್ರೈಸ್ಪ್ಸ್ ಗಾಯಕ್ಕೆ ತುತ್ತಾದರು. ವೇಗಿ ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರೂ ಪ್ರವಾಸದ ಸಮಯದಲ್ಲಿ ವಿವಿಧ ಹಂತಗಳಲ್ಲಿ ಮಂಡಿರಜ್ಜು ಸಮಸ್ಯೆಗಳನ್ನು ಎದುರಿಸಿದರು.

ಲಾರ್ಡ್ಸ್ ಪಂದ್ಯದ ನಂತರ ಮಾತನಾಡಿದ ಗಿಲ್, ಭಾರತದ ಮೂಲತಃ ಘೋಷಿಸಲಾದ ತಂಡದಿಂದ ಕನಿಷ್ಠ ಐದು ಆಟಗಾರರು ನಿರ್ಣಾಯಕ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿಲ್ಲ ಎಂದು ಗಮನಸೆಳೆದರು.

"ನಾವು ಘೋಷಿಸಿದ ಮೊದಲ ತಂಡವನ್ನು ನೀವು ನೋಡಿದರೆ, ಕನಿಷ್ಠ ಐದು ಆಟಗಾರರು ಇಂದು ಆಡಲಿಲ್ಲ. ವಿಶ್ವಕಪ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ಫಿಟ್ನೆಸ್ ಸುಧಾರಿಸಿಕೊಳ್ಳಬೇಕು. ತಂಡದ ಬೌಲಿಂಗ್‌ ಇನ್ನಷ್ಟು ಪರಿಣಾಮಕಾರಿಯಾಗಬೇಕು" ಎಂದು ಗಿಲ್ ಹೇಳಿದರು.

"ಒಬ್ಬ ಆಟಗಾರ ಗಾಯಗೊಂಡಾಗ, ಬೇರೆ ಸಂಯೋಜನೆಯೊಂದಿಗೆ ಆಡಬೇಕಾಗುತ್ತದೆ. ಇಬ್ಬರು ಗಾಯಗೊಂಡರೆ, ಮತ್ತೆ ಹೊಸ ಸಂಯೋಜನೆಯೊಂದಿಗೆ ಆಡಬೇಕಾಗುತ್ತದೆ. ಪ್ರತಿ ಪಂದ್ಯದ ನಂತರ (ಗಾಯದಿಂದಾಗಿ) ಒಬ್ಬ ಆಟಗಾರ ಅಲಭ್ಯರಾದರೆ, ಎಲ್ಲೋ ನಾವು ಒಂದು ತಂತ್ರವನ್ನು ತಪ್ಪಿಸಿಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದರು. ಬೂಮ್ರ ಅವರು ಎಡಗಾಲಿನ ಮಂಡಿ ಗಾಯದಿಂದಾಗಿ ಕಣಕ್ಕಿಳಿಯ ಲಿಲ್ಲ. ಇದರಿಂದಾಗಿ ಭಾರತದ ಬೌಲಿಂಗ್ ವಿಭಾಗವು ದುರ್ಬಲವಾಗಿದ್ದು ಬಹಿರಂಗವಾಯಿತು.

ಸಚಿನ್ ಸೇರಿ ಹಲವು ದಿಗ್ಗಜ ಆಟಗಾರರ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಡಕೆಟ್ ಮತ್ತು ಜೇಕಬ್ ಬೆಥೆಲ್ ಜೋಡಿ 192 ರನ್‌ ಪೇರಿಸಿದರು. ಈ ಅಡಿಪಾಯದ ಮೇಲೆ ಜೋ ರೂಟ್ (ಅಜೇಯ 74) ಮತ್ತು ಜೋಸ್ ಬಟ್ಲರ್ (ಔಟಾಗದೆ 41) ದೊಡ್ಡ ಮೊತ್ತವನ್ನು ಕಲೆಹಾಕಿದರು. ಪ್ರಸಿದ್ಧಕೃಷ್ಣ (69ಕ್ಕೆ2), ಅರ್ಷದೀಪ್ ಸಿಂಗ್ (10 ಓವರ್‌; 72ರನ್), ಪ್ರಿನ್ಸ್ ಯಾದವ್ (79ಕ್ಕೆ1) ಮತ್ತು ಗುರ್ನೂರ್ ಬ್ರಾರ್ (10 ಓವರ್; 97 ರನ್) ಅವರು ಬಹಳಷ್ಟು ದಂಡನೆಗೊಳಾಗದರು. ಎಡಗೈ ವೇಗಿ ಅರ್ಷದೀಪ್‌ ಸಿಂಗ್ ಅವರೂ ಲೈನ್ ನಿರ್ವಹಿಸುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 387 (ಬೆನ್‌ ಡಕೆಟ್‌ 141, ಜೇಕಬ್ ಬೆಥಲ್‌ 91, ಜೋ ರೂಟ್‌ ಔಟಾಗದೇ 74, ಜೋಸ್‌ ಬಟ್ಲರ್‌ ಔಟಾಗದೇ 41, ಪ್ರಸಿದ್ಧ ಕೃಷ್ಣ 69ಕ್ಕೆ2, ಪ್ರಿನ್ಸ್‌ ಯಾದವ್‌ 79ಕ್ಕೆ1). ಭಾರತ: 7 ವಿಕೆಟ್‌ಗಳಿಗೆ 360 (ರೋಹಿತ್‌ ಶರ್ಮಾ 138, ಶುಭಮನ್‌ ಗಿಲ್‌ 77, ವಿರಾಟ್‌ ಕೊಹ್ಲಿ 74; ಸ್ಯಾಮ್‌ ಕರನ್‌ 75ಕ್ಕೆ4).