Bengaluru stampede: ಬಂಧಿತ ಆರ್ಸಿಬಿ ಸಿಬ್ಬಂದಿ ನಿಖಿಲ್ ಸೋಸಲೆ ಯಾರು?
Who is Nikhil Sosale: ನಿಖಿಲ್ ಸೋಸಲೆ, ಹಾಗೂ ಸುನಿಲ್ ಮ್ಯಾಥ್ಯೂ ಮುಂಬೈಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕಾಗಿದೆ.


ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ(Bengaluru Stampede) ಉಂಟಾದ ಸಾವು- ನೋವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿಯ(rcb management) ಮಾರುಕಟ್ಟೆ ವಿಭಾಗದ ನಿಖಿಲ್ ಸೋಸಲೆ(Who is Nikhil Sosale) ಹಾಗೂ ಡಿಎನ್ಎ ಈವೆಂಟ್ ಮ್ಯಾನೇಜ್ಮೆಂಟ್ನ ಕಿರಣ್ ಹಾಗೂ ಸುನಿಲ್ ಮ್ಯಾಥ್ಯೂ ಬಂಧಿತರು. ನಿಖಿಲ್ ಸೋಸಲೆ ಯಾರು?, ಇವರ ಹಿನ್ನಲೆ ಏನು? ಎಷ್ಟು ವರ್ಷದಿಂದ ಆರ್ಸಿಬಿ ಪರ ಕಾರ್ಯನಿರ್ವಹಿಸುತ್ತಿದ್ದಾರೆ? ಹೀಗೆ ಆರ್ಸಿಬಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಆಗಸ್ಟ್ 18, 1986 ರಂದು ಜನಿಸಿದ ಸೋಸಲೆ ಸುಮಾರು ಎರಡು ವರ್ಷಗಳಿಂದ ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ಆದಾಯ ಮುಖ್ಯಸ್ಥರಾಗಿದ್ದಾರೆ. ಸೋಸಲೆ ಮೂಲತಃ ಆರ್ಸಿಬಿಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಅನ್ನು ನಿರ್ವಹಿಸುವ ಡಯಾಜಿಯೊ ಇಂಡಿಯಾದ ಉದ್ಯೋಗಿ. ಸೋಸಲೆ ಆರ್ಸಬಿ ಮಾರ್ಕೆಟಿಂಗ್ ಮತ್ತು ಆದಾಯದ ಮುಖ್ಯಸ್ಥರಾಗಿ ಸೆಪ್ಟೆಂಬರ್ 2023 ರಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
ಆರ್ಸಿಬಿಯೊಂದಿಗಿನ ಅವರ ವೃತ್ತಿಪರ ಪ್ರಯಾಣವು 2012 ರಲ್ಲಿ ಪ್ರಾರಂಭವಾಯಿತು. ಮತ್ತು ಹಲವು ವರ್ಷಗಳಲ್ಲಿ, ಅವರು ಫ್ರಾಂಚೈಸಿ ಪರ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಈ ಪಟ್ಟಿ ಹೀಗಿದೆ.
ಹಿರಿಯ ಕಾರ್ಯನಿರ್ವಾಹಕ: ಯುಬಿ ಸ್ಪೋರ್ಟ್ಸ್ ಮಾರ್ಕೆಟಿಂಗ್ ವ್ಯವಹಾರ (2010 - ಜೂನ್ 2012)
ವಾಣಿಜ್ಯ ಮತ್ತು ಕಾರ್ಯಾಚರಣೆ ವ್ಯವಸ್ಥಾಪಕ: (2012–2014)
ಹಿರಿಯ ವ್ಯವಸ್ಥಾಪಕ: ವಾಣಿಜ್ಯ, ಮಾರ್ಕೆಟಿಂಗ್, ಕಾರ್ಯಾಚರಣೆಗಳು (2014–2016)
ವ್ಯವಹಾರ ಮತ್ತು ವಾಣಿಜ್ಯ ಕಾರ್ಯಾಚರಣೆಗಳು: (2016–2017)
ವ್ಯವಹಾರ ಪಾಲುದಾರಿಕೆಗಳ ಮುಖ್ಯಸ್ಥ: (2017–2023)
ಮಾರ್ಕೆಟಿಂಗ್ ಮತ್ತು ಆದಾಯದ ಮುಖ್ಯಸ್ಥ: (2023ರಿಂದ ಕಾರ್ಯನಿರ್ವಹಣೆ)
ಇದನ್ನೂ ಓದಿ IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್ಸಿಬಿ ಪ್ರತಿಕ್ರಿಯೆ!
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧನ
ನಿಖಿಲ್ ಸೋಸಲೆ, ಹಾಗೂ ಸುನಿಲ್ ಮ್ಯಾಥ್ಯೂ ಮುಂಬೈಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕಾಗಿದೆ.