ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಸಂಚಲನ ಮೂಡಿಸಿದ 21 ವರ್ಷದ ಸಕಿಬ್ ಹುಸೇನ್ ಯಾರು?
Who is Sakib Hussain: 21 ವರ್ಷದ ಈ ಆಟಗಾರ ಐಪಿಎಲ್ ಇತಿಹಾಸದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ 2026 ರ ಹರಾಜಿನಲ್ಲಿ ಅವರನ್ನು ಎಸ್‌ಆರ್‌ಹೆಚ್ 30 ಲಕ್ಷ ರೂ.ಗೆ ಖರೀದಿಸಿತ್ತು.
Sakib Hussain -
ಹೈದರಾಬಾದ್, ಎ.14: ಬಿಹಾರದ ಗೋಪಾಲ್‌ಗಂಜ್‌ನ 21 ವರ್ಷದ ಯುವ ವೇಗಿ ಸಕಿಬ್ ಹುಸೇನ್(Who is Sakib Hussain), ತಮ್ಮ ಐಪಿಎಲ್(IPL 2026) ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್(SRH vs RR) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಪರ ಚೊಚ್ಚಲ ಪಂದ್ಯವಾಡಿದ ಅವರು ತಮ್ಮ ಘಾತಕ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ. 24 ರನ್‌ಗೆ 4 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ್ದಾರೆ. 21 ವರ್ಷದ ಈ ಆಟಗಾರ ಐಪಿಎಲ್ ಇತಿಹಾಸದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಡ ಕುಟುಂಬದಿಂದ ಬಂದ ಸಕಿಬ್ ಕ್ರಿಕೆಟ್ ಬಗ್ಗೆ ಕನಸು ಕಂಡವರಲ್ಲ. ಸೈನ್ಯ ಸೇರಿ ತಮ್ಮ ಕುಟುಂಬಕ್ಕೆ ಆಧಾರವಾಗಲು ನಿರ್ಧರಿಸಿದ್ದರು. ಸೈನಿಕನಾಗಲೆಂದೇ ಅವರು ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದರು. ಆದರೆ ಸ್ಥಳೀಯ ಟೂರ್ನಿಯೊಂದರಲ್ಲಿ ಅವರು ತೋರಿದ ಬೌಲಿಂಗ್ ಪ್ರದರ್ಶನ ವೃತ್ತಿಜೀವನಕ್ಕೆ ಮಹತ್ವದ ತಿರುವು ತಂದುಕೊಟ್ಟಿತು. ಐಪಿಎಲ್ 2024 ರ ಸೀಸನ್‌ಗೆ ಮೊದಲು ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಸಹಿ ಮಾಡಿತ್ತು ಆದರೆ ಅವರಿಗೆ ಯಾವುದೇ ಪಂದ್ಯ ಸಿಗಲಿಲ್ಲ ಮತ್ತು ಮುಂದಿನ ಸೀಸನ್‌ಗೆ ಮೊದಲು ಬಿಡುಗಡೆ ಮಾಡಲಾಯಿತು. ಐಪಿಎಲ್ 2026 ರ ಹರಾಜಿನಲ್ಲಿ ಅವರನ್ನು ಎಸ್‌ಆರ್‌ಹೆಚ್ 30 ಲಕ್ಷ ರೂ.ಗೆ ಖರೀದಿಸಿತ್ತು. ಭಾರತದ ಮಾಜಿ ವೇಗಿ ವರುಣ್ ಆರನ್ ಅವರ ಗರಡಿಯಲ್ಲಿ ಪಳಗಿದ ಅವರು ಇದೀಗ ಘಾತಕ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
17ನೇ ವಯಸ್ಸಿನಲ್ಲಿ ಮಿಂಚಿನ ಬೌಲಿಂಗ್
ಬಲಗೈ ವೇಗಿ 2022-23 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ ಟಿ 20 ಗೆ ಪದಾರ್ಪಣೆ ಮಾಡಿದರು. 17 ನೇ ವಯಸ್ಸಿನಲ್ಲಿ, ಅವರು ತಮ್ಮ ಎರಡನೇ ಪಂದ್ಯದಲ್ಲಿ 20 ಕ್ಕೆ 4 ವಿಕೆಟ್ ಗಳಿಸಿದ್ದರು. 2025-26 ರ ರಣಜಿ ಟ್ರೋಫಿಯಲ್ಲಿ ಸಕಿಬ್ ತಮ್ಮ ಮೊದಲ ಐದು ವಿಕೆಟ್ ಗೊಂಚಲು ಪಡೆದರು. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 41 ಕ್ಕೆ 6 ವಿಕೆಟ್ ಪಡೆದರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಬಳಿಕ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಸಕಿಬ್ ಪ್ರತಿಯೊಬ್ಬರೂ ಇಂತಹ ಚೊಚ್ಚಲ ಪಂದ್ಯವನ್ನು ಹೇಗೆ ಕನಸು ಕಾಣುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು.
Sakib Hussain’s Story:
— Sonu (@Cricket_live247) April 14, 2026
From Gopalganj — a farmer’s son who once dreamed of joining the army, but his friends saw a cricketer in him. He couldn’t even afford shoes; his mother sold her jewellery to buy them.
Now: 4 wickets on debut at 145+ km/h ⭐ pic.twitter.com/zPJvF24HOc
“ತುಂಬಾ ಧನ್ಯವಾದಗಳು. ಪ್ರತಿಯೊಬ್ಬ ಆಟಗಾರನೂ ಇಂತಹ ಚೊಚ್ಚಲ ಪಂದ್ಯವನ್ನು ಆಶಿಸುತ್ತಾನೆ, ಆದ್ದರಿಂದ ಇದು ನಿಜವಾಗಿಯೂ ಒಳ್ಳೆಯದು ಎಂದು ಅನಿಸುತ್ತದೆ. ನನ್ನ ಈ ಪ್ರದರ್ಶನದ ಬಗ್ಗೆ ತುಂಬಾ ಸಂತೋಷವಾಗಿದೆ. ಬೌಲಿಂಗ್ ಕೋಚ್ ವರುಣ್ ಭಾಯ್ ಪಂದ್ಯಕ್ಕೆ ಒಂದು ದಿನ ಮೊದಲು ನಾನು ಆಡುತ್ತೇನೆ ಎಂದು ನನಗೆ ತಿಳಿಸಿದರು. ಅವರು ನನ್ನ ಮೇಲಿಟ್ಟ ನಂಬಿಕೆಗೆ ಧನ್ಯವಾಗಳು" ಎಂದು ಹುಸೇನ್ ಹೇಳಿದರು.
ರಾಜೀವಗಾಂಧಿ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್‌ಗಳ ಸುಲಭ ಗೆಲುವು ದಾಖಲಿಸಿತು. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ರಿಯಾನ್ ಪರಾಗ್ ಪಡೆ ಹಾಲಿ ಆವೃತ್ತಿಯಲ್ಲಿ ಮೊದಲ ಸೋಲು ಅನುಭವಿಸಿತು. ಆದರೂ, ಅಗ್ರಸ್ಥಾನ ಅಬಾಧಿತವಾಗಿದೆ.
ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳು
ಅಲ್ಜಾರಿ ಜೋಸೆಫ್ - 6/12 (MI vs SRH, ಹೈದರಾಬಾದ್, 2019)
ಆಂಡ್ರ್ಯೂ ಟೈ - 5/17 (GL vs RPS, ರಾಜ್‌ಕೋಟ್, 2017)
ಶೋಯೆಬ್ ಅಖ್ತರ್ - 4/11 (KKR vs DC, ಕೋಲ್ಕತ್ತಾ, 2008)
ಕೆವೊನ್ ಕೂಪರ್ - 4/26 (RR vs PBKS, ಜೈಪುರ, 2012)
ಅಶ್ವನಿ ಕುಮಾರ್ - 4/24 (MI vs KKR, ಮುಂಬೈ WS, 2025)
ಸಾಕಿಬ್ ಹುಸೇನ್ - 4/24 (SRH vs RR, ಹೈದರಾಬಾದ್, 2026)
ಡೇವಿಡ್ ವೈಸ್ - 4/33 (RCB vs MI, ಬೆಂಗಳೂರು, 2015)
ಪ್ರಫುಲ್ ಹಿಂಗೆ - 4/34 (SRH vs RR, ಹೈದರಾಬಾದ್, 2026)