ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL Auction: ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಬಿಕರಿಯಾದ ದೀಪ್ತಿ, ಅಮೇಲಿಯಾ

WPL 2026 mega auction: ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್‌ ಲ್ಯಾನಿಂಗ್‌(1.9 ಕೋಟಿ), ಪೋಬಿ ಲಿಚ್ಛ್‌ಫೀಲ್ಡ್(1.2 ಕೋಟಿ), ಹರ್ಲೀನ್ ಡಿಯೋಲ್(50 ಲಕ್ಷ), ಇತ್ತೀಚೆಗೆ ಮಹಿಳಾ ಟಿ20ಯಲ್ಲಿ ಅತ್ಯಂತ ವೇಗದ ಶತಕವನ್ನು ಗಳಿಸಿದ ಕಿರಣ್ ನವಗಿರೆ(60 ಲಕ್ಷ) ಆರ್‌ಟಿಎಂ ಮೂಲಕ ಯುಪಿ ವಾರಿಯರ್ಸ್‌ ಸೇರಿದರು. ನ್ಯೂಜಿಲ್ಯಾಂಡ್‌ನ 2 ಕೋಟಿಗೆ ಗುಜರಾತ್‌ ಜೈಂಟ್ಸ್‌ ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಡಬ್ಲ್ಯುಪಿಎಲ್ ಮೆಗಾ ಹರಾಜು; ಆರ್‌ಸಿಬಿ ತೆಕ್ಕೆಗೆ ಸ್ಟಾರ್‌ ಆಲ್‌ರೌಂಡರ್‌

ದೀಪ್ತಿ ಶರ್ಮಾ -

Abhilash BC
Abhilash BC Nov 27, 2025 6:18 PM

ಮುಂಬಯಿ, ನ.27: ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಾಲ್ಕನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಆಟಗಾರ್ತಿಯರ ಮೆಗಾ ಹರಾಜಿ(WPL Auction)ನಲ್ಲಿ ಭಾರತ ಕ್ರಿಕೆಟ್ ತಂಡದ ತಾರಾ ಆಲ್‌ರೌಂಡರ್ ದೀಪ್ತಿ ಶರ್ಮಾ(Deepti Sharma) ಅವರು ಅತ್ಯಧಿಕ ಮೊತ್ತ ಪಡೆದರು. ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಕೆ ಮಾಡಿ 3.20 ಕೋಟಿಗೆ ಯುಪಿ ವಾರಿಯರ್ಸ್ ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಆಸ್ಟ್ರೇಲಿಯಾದ ನಾಯಕಿ ಅಲಿಸ್ಸಾ ಹೀಲಿ ಅನ್‌ಸೋಲ್ಡ್‌ ಆದದ್ದು ಅಚ್ಚರಿ ಮೂಡಿಸಿತು.

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದ ದೀಪ್ತಿ ಶರ್ಮಾರನ್ನು ಹರಾಜಿಗೆ ಬಿಟ್ಟಾಗಲೇ ಅವರು ದುಬಾರಿ ಮೊತ್ತ ಪಡೆಯುವುದು ಖಚಿತವಾಗಿತ್ತು. 50 ಲಕ್ಷ ಮೂಲಬೆಲೆ ಹೊಂದಿದ್ದ ದೀಪ್ತಿ ಖರೀದಿಗೆ ಆರಂಭದಿಂದಲೂ ಡೆಲ್ಲಿ ಹಾಗೂ ಯುಪಿ ತಂಡಗಳ ಮಧ್ಯೆ ತೀವ್ರ ಪೈಪೋಟಿ ನಡೆದವು. ಅಂತಿಮವಾಗಿ ಡೆಲ್ಲಿ ₹3.20 ಕೋಟಿ ನೀಡುವುದಾಗಿ ಘೋಷಣೆ ಮಾಡಿತು. ಆದರೆ, ತನ್ನ ಬಳಿ ಇದ್ದ ಆರ್‌ಟಿಎಂ ಕಾರ್ಡ್ ಬಳಸಿದ ಯುಪಿ ತಂಡ ಅಷ್ಟೇ ಮೊತ್ತಕ್ಕೆ ಅವರನ್ನು ತಂಡಕ್ಕೆ ವಾಪಾಸ್‌ ಸೇರಿಸಿಕೊಂಡಿತು.

ದೀಪ್ತಿ ಬಳಿಕ ನ್ಯೂಜಿಲ್ಯಾಂಡ್‌ನ ಆಲ್‌ರೌಂಡರ್‌ ಅಮೇಲಿಯಾ ಕೆರ್‌ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿ ಎನಿಸಿದರು. ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ ತಂಡವೇ 3 ಕೋಟಿಗೆ ಖರೀದಿ ಮಾಡಿತು. ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ್ದ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೋಲ್ವಾರ್ಡ್ 1.1 ಕೋಟಿ ಮೊತ್ತಕ್ಕೆ ಡೆಲ್ಲಿ ತಂಡದ ಪಾಲಾದರು.

ಆರ್‌ಸಿಬಿ ಸೇರಿದ ಸ್ಟಾರ್‌ ಆಲ್‌ರೌಂಡರ್‌

ಆರ್‌ಸಿಬಿ ತಂಡ ಇಂಗ್ಲೆಂಡ್‌ನ 24 ವರ್ಷದ ವೇಗಿ ಲಾರೆನ್ ಬೆಲ್ ಅವರನ್ನು ಗರಿಷ್ಠ 90 ಲಕ್ಷ ವ್ಯಯಿಸಿ ತಂಡಕ್ಕೆ ಸೇರಿಸಿಕೊಂಡಿತು. 30 ಲಕ್ಷ ಮೂಲಬೆಲೆ ಹೊಂದಿದ್ದರು. ಉಳಿದಂತೆ ತಲಾ 65 ಲಕ್ಷಕ್ಕೆ ದಕ್ಷಿಣ ಆಫ್ರಿಕಾ ಹಾರ್ಡ್‌ ಹಿಟ್ಟರ್‌ ನಾಡಿನ್ ಡಿ ಕ್ಲರ್ಕ್ ಮತ್ತು ಟೀಮ್‌ ಇಂಡಿಯಾದ ಸ್ಪಿನ್‌ ಆಲ್‌ರೌಂಡರ್‌ ರಾಧಾ ಯಾದವ್‌ ಅವರನ್ನು ಖರೀದಿ ಮಾಡಿತು. ಉಭಯ ಆಟಗಾರ್ತಿಯರು 30 ಲಕ್ಷ ಮೂಲಬೆಲೆ ಹೊಂದಿದ್ದರು. ಆಸ್ಟ್ರೇಲಿಯಾ ಜಾರ್ಜಿಯಾ ವೋಲ್ ಅವರನ್ನು 60 ಲಕ್ಷಕ್ಕೆ ತಂಡಕ್ಕೆ ಸೇರಿಸಿಕೊಂಡಿತು. ಆಶಾ ಶೋಭನಾಗೂ ಆರ್‌ಸಿಬಿ ಪೈಪೋಟಿ ನಡೆಸಿತು. ಆದರೆ ಅಂತಿಮವಾಗಿ ಯುಪಿ ತಂಡ 1.10 ಕೋಟಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಹಿರಿಯ ಆಟಗಾರ್ತಿ ಶಿಖಾ ಪಾಂಡೆ 2.4 ಕೋಟಿಗೆ ಯುಪಿ ವಾರಿಯರ್ಸ್‌ ಸೇರಿದರು. ಆರ್‌ಸಿಬಿ 2.2 ಕೋಟಿ ವರೆಗೆ ಬಿಡ್ ಮಾಡಿ ಹಿಂದೆ ಸರಿಯಿತು.

ಇದನ್ನೂ ಓದಿ WPL 2026: ಜ. 9ರಿಂದ ನಾಲ್ಕನೇ ಆವೃತ್ತಿಯ ಡಬ್ಲ್ಯುಪಿಎಲ್‌ ಆರಂಭ

ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್‌ ಲ್ಯಾನಿಂಗ್‌(1.9 ಕೋಟಿ), ಪೋಬಿ ಲಿಚ್ಛ್‌ಫೀಲ್ಡ್(1.2 ಕೋಟಿ), ಹರ್ಲೀನ್ ಡಿಯೋಲ್(50 ಲಕ್ಷ), ಇತ್ತೀಚೆಗೆ ಮಹಿಳಾ ಟಿ20ಯಲ್ಲಿ ಅತ್ಯಂತ ವೇಗದ ಶತಕವನ್ನು ಗಳಿಸಿದ ಕಿರಣ್ ನವಗಿರೆ(60 ಲಕ್ಷ) ಆರ್‌ಟಿಎಂ ಮೂಲಕ ಯುಪಿ ವಾರಿಯರ್ಸ್‌ ಸೇರಿದರು. ನ್ಯೂಜಿಲ್ಯಾಂಡ್‌ನ 2 ಕೋಟಿಗೆ ಗುಜರಾತ್‌ ಜೈಂಟ್ಸ್‌ ತಂಡ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ವಿಶ್ವಕಪ್‌ನಲ್ಲಿ ಮಿಂಚಿದ ಯುವ ವೇಗಿ ಕ್ರಾಂತಿ ಗೌಡ್‌ 50 ಲಕ್ಷಕ್ಕೆ ಯುಪಿ ತಂಡದ ಪಾಲಾದರು. ಆರ್‌ಸಬಿ ಮಾಜಿ ಆಟಗಾರ್ತಿ ರೇಣುಕಾ ಸಿಂಗ್‌(60 ಲಕ್ಷ) ಗುಜರಾತ್‌ ತಂಡ ಸೇರಿದರು.

ಡೆಲ್ಲಿ ಬಲಿಷ್ಠ

ಹರಾಜಿನಲ್ಲಿ ಎರಡು ಬಾರಿಯ ರನ್ನರ್‌ ಅಪ್‌ ತಂಡ ಅತ್ಯಂತ ಜಾಣ್ಮೆಯಿಂದ ಆಟಗಾರ್ತಿಯನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮ, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನೆ ಕಾಪ್‌ ಮತ್ತು ಕನ್ನಡತಿ ನಿಕ್ಕಿ ಪ್ರಸಾದ್‌ ಉಳಿಸಿಕೊಂಡಿದ್ದ ಪ್ರಾಂಚೈಸಿ ಹರಾಜಿನಲ್ಲಿ ಲೌರಾ ವೋಲ್ವಾರ್ಡ್, ಶ್ರೀ ಚರಣಿ, ಸ್ನೇಹಾ ರಾಣ ಮತ್ತು ವಿಂಡೀಸ್‌ ಸ್ಫೋಟಕ ಬ್ಯಾಟರ್‌ ಚಿನೆಲ್ಲೆ ಹೆನ್ರಿ ಅವರನ್ನು ಖರೀದಿಸಿ ತಂಡವನ್ನು ಬಲಿಷ್ಠವಾಗಿ ರೂಪಿಸಿಕೊಂಡಿತು.

ಹರಾಜಿನ ಟಾಪ್ 10 ಖರೀದಿಗಳು

ದೀಪ್ತಿ ಶರ್ಮಾ: 3.2 ಕೋಟಿ (ಯುಪಿ ವಾರಿಯರ್ಜ್)

ಅಮೆಲಿಯಾ ಕೆರ್: 3 ಕೋಟಿ (ಮುಂಬೈ ಇಂಡಿಯನ್ಸ್)

ಶಿಖಾ ಪಾಂಡೆ: 2.40 ಕೋಟಿ (ಯುಪಿ ವಾರಿಯರ್ಜ್)

ಸೋಫಿ ಡಿವೈನ್: 2 ಕೋಟಿ (ಗುಜರಾತ್ ಜೈಂಟ್ಸ್)

ಮೆಗ್ ಲ್ಯಾನಿಂಗ್: 1.90 ಕೋಟಿ (ಯುಪಿ ವಾರಿಯರ್ಜ್)

ಶ್ರೀ ಚರಣಿ: 1.30 ಕೋಟಿ (ದೆಹಲಿ ಕ್ಯಾಪಿಟಲ್ಸ್)

ಚಿನೆಲ್ಲೆ ಹೆನ್ರಿ: 1.30 ಕೋಟಿ (ದೆಹಲಿ ಕ್ಯಾಪಿಟಲ್ಸ್)

ಪೋಬಿ ಲಿಚ್ಛ್‌ಫೀಲ್ಡ್: 1.20 ಕೋಟಿ (ಯುಪಿ ವಾರಿಯರ್ಜ್)

ಲಾರಾ ವೊಲ್ವಾರ್ಡ್ಟ್: 1.10 ಕೋಟಿ (ದೆಹಲಿ ಕ್ಯಾಪಿಟಲ್ಸ್)

ಆಶಾ ಶೋಭಾನ; 1.10 ಕೋಟಿ (ಯುಪಿ ವಾರಿಯರ್ಜ್)