ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Cabinet meeting: ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ವಾರದಲ್ಲಿ 5 ದಿನ ರಾಗಿ ಮಾಲ್ಟ್ ವಿತರಣೆ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ವಾರದಲ್ಲಿ 5 ದಿನ ರಾಗಿ ಮಾಲ್ಟ್ ವಿತರಣೆ

Ragi Malt: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತರಗತಿ 1ರಿಂದ 10 ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಗಿ ಮಿಕ್ಸ್‌ ಅನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿರುವ ಕಾರ್ಯಕ್ರಮವನ್ನು ವಾರದ ಮೂರು ದಿನಗಳ ಬದಲಾಗಿ ಐದು ದಿನಗಳಿಗೆ ವಿಸ್ತರಿಸಲಾಗುತ್ತಿದೆ.

ಮನುವಿಕಾಸ ಸಂಸ್ಥೆಗೆ ಇಂಡಿಯಾ ಸಿಎಸ್ಆರ್ ಮತ್ತು ಸಸ್ಟೇನೆಬಿಲಿಟಿ ಅವಾರ್ಡ್ 2025 ರಾಷ್ಟ್ರೀಯ ಪ್ರಶಸ್ತಿ

ಮನುವಿಕಾಸ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ

ಮನುವಿಕಾಸ ಸಂಸ್ಥೆಯು ಕಳೆದ 20 ವರ್ಷಗಳಿಂದ ಕೆರೆ ಅಭಿವೃದ್ಧಿ, ಕೃಷಿ ಹೊಂಡ ಗಳ ನಿರ್ಮಾಣ ಮತ್ತು ಬೆಟ್ಟ ಸಂರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಗಮನಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ. ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಮತ್ತು ಗುರುದಾಸ್ ಪ್ರಭು ಈ ಪ್ರಶಸ್ತಿಯನ್ನು ಪಡೆದರು

DK Shivakumar: ಡಿಸಿಎಂ ಡಿಕೆ ಶಿವಕುಮಾರ್ ದೇಶದ 2ನೇ ಶ್ರೀಮಂತ ಸಚಿವ, 1413 ಕೋಟಿ ಆಸ್ತಿ ಒಡೆಯ

ಡಿಸಿಎಂ ಡಿಕೆ ಶಿವಕುಮಾರ್ ದೇಶದ 2ನೇ ಶ್ರೀಮಂತ ಸಚಿವ, 1413 ಕೋಟಿ ಆಸ್ತಿ ಒಡೆಯ

ADR report: 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.

Dharmasthala Case: ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದ ಮರು ತನಿಖೆ ಇಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದ ಮರು ತನಿಖೆ ಇಲ್ಲ: ಗೃಹ ಸಚಿವ ಪರಮೇಶ್ವರ್

G Parameshwara: ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯ ಕುಮಾ‌ರ್ ಜೈನ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದು ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳುವುದಿಲ್ಲ. ಯಾವ ಲಿಂಕ್, ಯಾವ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ ಎಂದು ಆ ನಂತರ ಗೊತ್ತಾಗಲಿದೆ ಎಂದರು.

Karnataka Weather: ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಇಂದೂ ಸುರಿಯಲಿದೆ ಭಾರಿ ವರ್ಷಧಾರೆ

ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಇಂದೂ ಸುರಿಯಲಿದೆ ಭಾರಿ ವರ್ಷಧಾರೆ

Bengaluru Rains: ಗುರುವಾರ ಬೆಂಗಳೂರು ಸಹಿತ ರಾಜ್ಯದ ವಿವಿಧ ರಾಜ್ಯಗಳಲ್ಲಿ ಅಬ್ಬರಿಸಿದ ಮುಂಗಾರು ಮಳೆ ಶುಕ್ರವಾರ ಮತ್ತೆ ಧಾರಾಕಾರವಾಗಿ ಸುರಿಯಲಿದೆ. ಹೀಗಾಗಿ ಕರಾವಳಿ ಜಿಲ್ಲೆ, ಬೆಂಗಳೂರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೃಷ್ಣೆಗೆ ಶನಿವಾರ ಮುಖ್ಯಮಂತ್ರಿ ಬಾಗಿನ

ಕೃಷ್ಣೆಗೆ ಶನಿವಾರ ಮುಖ್ಯಮಂತ್ರಿ ಬಾಗಿನ

ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ‌ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು. ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.

ವಿಶ್ವಕರ್ಮ ಸಂಘಟನೆ ಬೆಂಗಳೂರು ಅಧ್ಯಕ್ಷೆ ವಸಂತ ಮುರಳಿ ವಿರುದ್ಧ ಅಶ್ಲೀಲ ಪದ ಬಳಕೆ:  ರಂಗಪ್ಪ.ಆರ್ ಬಿನ್ ರಾಮಾಚಾರಿ ಬಂಧನ

ವಿಶ್ವಕರ್ಮ ಸಂಘಟನೆ ಬೆಂಗಳೂರು ಅಧ್ಯಕ್ಷೆ ವಿರುದ್ಧ ಅಶ್ಲೀಲ ಪದ ಬಳಕೆ

ವಿಶ್ವಕರ್ಮ `ಕರ್ಮ’ವನ್ನು ತೊಡೆದು ಹಾಕಿ ಸನ್ಮಾರ್ಗದಿಂದ ನಡೆಯುವಂತೆ ಜನರಲ್ಲಿ ಮಾರ್ಗದರ್ಶನ ನೀಡುತ್ತದೆ. ವಿಶ್ವಕರ್ಮ ಸಮುದಾಯ ತಮ್ಮದೇ ಆದ ಕೊಡುಗೆ ನೀಡುತ್ತಲೇ ಬರುತ್ತಿದೆ. ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲ. ಕ್ರಿಯಾಶೀಲತೆ, ಸೃಜನಶೀಲತೆಗೆ ಮತ್ತೊಂದು ಹೆಸರೇ ವಿಶ್ವಕರ್ಮ ಸಮುದಾಯ. ವಿಶ್ವಕರ್ಮರು ಈ ನಾಡಿನ ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅಪಾರ.

ಮನ ಸ್ಕಂದ ‘ ದಿ ರೈಟ್‌ಲೈಫ್‌ಟೌನ್‌ಶಿಪ್‌‘ ಯೋಜನೆಗೆ ಐಜಿಬಿಸಿಯ ಪ್ರಿ ಸರ್ಟಿಫೈಡ್‌ಗೋಲ್ಡ್‌ ರೇಟಿಂಗ್‌

‘ ದಿ ರೈಟ್‌ಲೈಫ್‌ಟೌನ್‌ಶಿಪ್‌‘ ಯೋಜನೆಗೆ ರೇಟಿಂಗ್‌

ಐಜಿಬಿಸಿ ಗ್ರೀನ್ ಹೋಮ್ಸ್ ರೇಟಿಂಗ್ ವ್ಯವಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು, ವಾಸಸ್ಥಳ ಯೋಜನೆಗಳು, ಉತ್ತಮ ಪರಿಸರ ನಿರ್ಮಾಣ ಮತ್ತು ಉತ್ತಮ ಸಂಪನ್ಮೂಲಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಈ ಪ್ರಿ-ಸರ್ಟಿಫೈಡ್ ಗೋಲ್ಡ್ ರೇಟಿಂಗ್, ಯೋಜನೆಯ ವಿನ್ಯಾಸ ಮತ್ತು ಯೋಜನಾ ಹಂತದಲ್ಲಿಯೇ ತೆಗೆದುಕೊಳ್ಳಲಾದ ಅಗತ್ಯವಾದ ಶಾಶ್ವತತೆಯ ಮಾನದಂಡಗಳನ್ನು ಮುಂಚಿತವಾಗಿ ಪೂರೈಸಿದೆ ಎನ್ನುವುದನ್ನು ಸೂಚಿಸುತ್ತದೆ.

ಬೆಂಗಳೂರಿನ 5 ಅಪಾರ್ಟ್‌ಮೆಂಟ್‌ಗಳಿಂದ ನಿತ್ಯ 3 ಲಕ್ಷ ಲೀಟರ್ ನೀರು ಮರುಬಳಕೆ: ಜಲ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ

ಬೆಂಗಳೂರಿನ 5 ಅಪಾರ್ಟ್‌ಮೆಂಟ್‌ಗಳಿಂದ ನಿತ್ಯ 3 ಲಕ್ಷ ಲೀಟರ್ ನೀರು ಮರುಬಳಕೆ

ಪ್ರತಿಯೊಂದು ಅಪಾರ್ಟ್‌ಮೆಂಟ್, ಅತ್ಯಾಧುನಿಕ 11-ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಹೆಚ್ಚುವರಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನೀರನ್ನು ಉತ್ತಮ ಗುಣಮಟ್ಟದ ಮರುಬಳಕೆ ಯೋಗ್ಯ ನೀರನ್ನಾಗಿ ಪರಿವರ್ತಿಸಿ, ಸುಮಾರು 60,000 ಲೀಟರ್ ಶುದ್ಧ ನೀರನ್ನು ಉತ್ಪಾದಿಸಲಿದೆ.

ಬೆಂಗಳೂರಿನಲ್ಲಿ 64ನೇ ಸುಬ್ರೋಟೋ ಕಪ್ (U-15) ಆರಂಭ!

ಬೆಂಗಳೂರಿನಲ್ಲಿ 64ನೇ ಸುಬ್ರೋಟೋ ಕಪ್ (U-15) ಆರಂಭ!

ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) vs ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿಯಾಣ) ಮೊದಲ ದಿನದ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಇಂದಿರಾ ಮೋಡರ್ನ್ ಹೈ ಸ್ಕೂಲ್ (ಹರಿ ಯಾಣ) ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿದೆ. ಗುರುತೇಜ್ ವೀರ್ 32ನೇ ನಿಮಿಷದಲ್ಲಿ ಗೋಲು ಮಾಡಿದರು, ಬಳಿಕ ಕಿಪ್ಜೆನ್ ಇಂಜುರಿ ಟೈಮ್ (50+2’)ನಲ್ಲಿ ಇನ್ನೊಂದು ಗೋಲು ಹೊಡೆದರು. ರಾಹುಲ್ ಪಂದ್ಯ ಆರಂಭದ ಮೊದಲನೇ ನಿಮಿಷದಲ್ಲೇ ಹರಿಯಾಣಕ್ಕೆ ಮುನ್ನಡೆ ನೀಡಿದ್ದರು.

ಓಣಂ ಹಬ್ಬದ ಪ್ರಯುಕ್ತ ಆಕಾಸ ಏರ್‌ ಇಂದ ಪ್ರಯಾಣಿಕರಿಗೆ ದಕ್ಷಿಣ ಭಾರತದ ವಿಶೇಷ ಭೋಜನ ಪ್ರಾರಂಭ

ಆಕಾಸ ಏರ್‌ ಇಂದ ಪ್ರಯಾಣಿಕರಿಗೆ ದ.ಭಾರತದ ವಿಶೇಷ ಭೋಜನ ಪ್ರಾರಂಭ

ದಕ್ಷಿಣ ಭಾರತದ ಶ್ರೀಮಂತ ಸಂಪ್ರದಾಯಗಳನ್ನು ಆಚರಿಸಲು ವಿನ್ಯಾಸಗೊಳಿಸಲಾದ ಈ ಹಬ್ಬದ ಪ್ರಯುಕ್ತ ವಿಶೇಷ ಹಬ್ಬದ ಭೋಜವನ್ನು ವಿಮಾನದಲ್ಲಿ ಪ್ರಯಾಣಿಕರು ಸವಿಯಬಹುದು. ಅಪ್ಪಂ ಸ್ಟ್ಯೂ ರೋಲ್, ತೆಂಗಿನಕಾಯಿ ಮತ್ತು ಟೊಮೆಟೊ ಚಟ್ನಿಗಳೊಂದಿಗೆ ಬಡಿಸುವ ಗರಿಗರಿಯಾದ ಪುನು ಗುಲು, ಕ್ಲಾಸಿಕ್ ದಕ್ಷಿಣ ಭಾರತೀಯ ಪಾಯಸಂ ಮತ್ತು ಆಯ್ಕೆಯ ಪಾನೀಯ ಸೇರಿದಂತೆ ಅಧಿಕೃತ ಸುವಾಸನೆಗಳ ಸಮ್ಮಿಲನವನ್ನು ಒಳಗೊಂಡಿದೆ.

ಸೆ.6ರಂದು ಆಜಾದಿ ಹಬ್ಬ: ಸ್ವಾತಂತ್ರ್ಯದ ಗೀತೆಗಳು ಕಾರ್ಯಕ್ರಮ

ಸೆ.6ರಂದು ಆಜಾದಿ ಹಬ್ಬ: ಸ್ವಾತಂತ್ರ್ಯದ ಗೀತೆಗಳು ಕಾರ್ಯಕ್ರಮ

ನಾಗಾಲ್ಯಾಂಡ್‌ನ ಟೆಟ್ಸಿಯೋ ಸಿಸ್ಟರ್ಸ್ ತಮ್ಮ ಪೀಳಿಗೆಯಿಂದ ಬಂದ ಪರಂಪರೆ ಯನ್ನು ಚೋಕ್ರಿ ಉಪಭಾಷೆಯಲ್ಲಿ ಜೀವಂತಗೊಳಿಸಿ, ನೆನಪು ಮತ್ತು ಗುರುತಿನ ಅಂತರಂಗದ ಹಾಡುಗಳನ್ನು ಹಂಚಿ ಕೊಳ್ಳುವುದನ್ನು ಅನುಭವಿಸಿ. ನಂತರ, ನಿರ್ಭೀತ ಸಾಹಿತ್ಯ, ಪ್ರತಿಭಟನಾ ರ‍್ಯಾಪ್ ಮತ್ತು ತಮಿಳು ಪರಂಪರೆಯನ್ನು ಆಧುನಿಕ ಬೀಟ್‌ಗಳೊಂದಿಗೆ ಮಿಶ್ರಣಗೊಳಿಸುವಲ್ಲಿ ಹೆಸರುವಾಸಿಯಾದ ಅರಿವು ಅವರ ವಿಶೇಷ ಡಿಜೆ ಸೆಟ್ ಅನ್ನು ಆನಂದಿಸಿ.

ವಿಶ್ವದರ್ಜೆಯ ಐವಿಎಫ್ ಚಿಕಿತ್ಸೆ ಇನ್ನು ಚಿತ್ರದುರ್ಗದಲ್ಲೇ: ಮಿಲನ್ ಫರ್ಟಿಲಿಟಿ ಮತ್ತು ಶ್ರೀ ಸಾಯಿ ನಾರಾಯಣ ಆಸ್ಪತ್ರೆಯಿಂದ ಮಹತ್ವದ ಹೆಜ್ಜೆ

ಮಿಲನ್ ಫರ್ಟಿಲಿಟಿ ಮತ್ತು ಶ್ರೀ ಸಾಯಿ ನಾರಾಯಣ ಆಸ್ಪತ್ರೆಯಿಂದ ಮಹತ್ವದ ಹೆಜ್ಜೆ

ಶ್ರೀ ಸಾಯಿ ನಾರಾಯಣ ಆಸ್ಪತ್ರೆಯು ಅಗತ್ಯವಾದ ವೈದ್ಯ ಕೀಯ ಮೂಲಸೌಕರ್ಯ, ಸಮಾಲೋಚನೆಗೆ ಬೇಕಾದ ಸ್ಥಳಾವಕಾಶ ಮತ್ತು ಪ್ರಯೋಗಾಲಯದ ಸೌಲಭ್ಯ ಗಳನ್ನು ಒದಗಿಸಲಿದೆ. ಈ ಎರಡು ಸಂಸ್ಥೆ ಗಳು ಒಟ್ಟಾಗಿ, ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆ ಗಳ ಕುಟುಂಬಗಳಿಗೆ ನೈತಿಕ, ಸುಲಭವಾಗಿ ತಲು ಪಬಲ್ಲ ಮತ್ತು ಉತ್ತಮ ಗುಣಮಟ್ಟದ ಸಂತಾನೋ ತ್ಪತ್ತಿ ಆರೋಗ್ಯ ಸೇವೆಯನ್ನು ಒದಗಿಸುವ ಗುರಿ ಯನ್ನು ಹೊಂದಿವೆ.

DK Shivakumar: ಜಿಬಿಐಟಿ ಯೋಜನೆಯ ಭೂ ಸಂತ್ರಸ್ತ ರೈತರಿಗೆ ಎಕರೆಗೆ 1.50-2.50 ಕೋಟಿ ರೂ. ಪರಿಹಾರ: ಡಿಕೆಶಿ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಲೋಗೋ ಬಿಡುಗಡೆ

ಜಿಬಿಐಟಿ ಯೋಜನೆಯ ಭೂ ಸಂತ್ರಸ್ತ ರೈತರಿಗೆ ಆಯಾ ಜಮೀನಿನ ಮಾನದಂಡದ ಆಧಾರದ ಮೇಲೆ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೂ ಪರಿಹಾರ ನೀಡಲು ತೀರ್ಮಾನಿಸಿಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ; ಚುನಾವಣಾ ಆಯೋಗಕ್ಕೆ ಶಿಫಾರಸು

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಶಿಫಾರಸು

CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ (ಸೆಪ್ಟೆಂಬರ್ 4) ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

CM Siddaramaiah: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ ಚಿಟ್‌

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ಚಿಟ್‌

MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕ್ಲೀನ್‌ ಚಿಟ್‌ ನೀಡಲಾಗಿದೆ. ನಿವೃತ್ತ ನ್ಯಾಯಾಧೀಶ ದೇಸಾಯಿ ಸಮಿತಿಯ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದ್ದು, ಈ ವರದಿಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ.

Bengaluru News: ಸೆಪ್ಟೆಂಬರ್‌ 6ರಿಂದ 12ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸೆಪ್ಟೆಂಬರ್‌ 6ರಿಂದ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Power Outage: ಬೆಂಗಳೂರು ನಗರದ 66/11 ಕೆ.ವಿ. ಬಾಣಸವಾಡಿಯ ಶಕ್ತಿ ಪರಿವರ್ತಕ-3ರಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಸೆ. 6ರಿಂದ ಸೆ. 12ರವರೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧೆಡೆ ಮಧ್ಯಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸಿಎಂ ಚಾಲನೆ

ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಗೆ ಸಿಎಂ ಚಾಲನೆ

CM Siddaramaiah: ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸೌಧದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ದುಬೈಯಲ್ಲಿ ಮನೆ ಮಾಡುವವರಿಗೊಂದು ಸಿಹಿ ಸುದ್ದಿ; ಮನೆ ಖರೀದಿಗೆ ಶೇ. 100ರಷ್ಟು ಸಾಲ ಕೊಡಲು ಒಂದಾದ ಪರ್ವ-ಗೋಲ್‌ ಸಂಸ್ಥೆಗಳು

ಮನೆ ಖರೀದಿಗೆ ಶೇ. 100ರಷ್ಟು ಸಾಲ ಕೊಡಲು ಒಂದಾದ ಪರ್ವ-ಗೋಲ್‌ ಸಂಸ್ಥೆ

ದುಬೈಯಲ್ಲಿ ಮನೆ ಖರೀದಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಶೇ. 100ರಷ್ಟು ಸಾಲ ಕೊಡಲು ಕರ್ನಾಟಕದ ಎರಡು ಕಂಪನಿಗಳು ಮುಂದೆ ಬಂದಿವೆ. ದುಬೈನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಬೆಂಗಳೂರಿನ ಗೋಲ್ ಕಾರ್ಪೋರೇಷನ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

Raju Gowda: ''ಸರಿಯಾದ ತನಿಖೆಯಾದರೆ ರಾಜ್ಯ ಸರ್ಕಾರದ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ: ರಾಜು ಗೌಡ

ರಾಜ್ಯ ಸರ್ಕಾರದ ವಿರುದ್ಧ ರಾಜು ಗೌಡ ವಾಗ್ದಾಳಿ

ʼʼಒಂದು ದಿನ ವಿಧಾನಸೌಧವನ್ನೇ ಜೈಲು ಮಾಡುವ ಕಾಲ ಬರುತ್ತದೆ. ಈ ಸರ್ಕಾರದಲ್ಲಿ ಒಬ್ರು, ಇಬ್ರು ಜೈಲಿಗೆ ಹೋಗುವ ಪರಿಸ್ಥಿತಿ ಇಲ್ಲ. ಸರಿಯಾದ ತನಿಖೆಯಾದರೆ ಈ ಸರ್ಕಾರದಲ್ಲಿ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ ಎಂದು ಮಾಜಿ ಸಚಿವ ರಾಜು ಗೌಡ ವಾಗ್ದಾಳಿ ನಡೆಸಿದರು.

Youtuber Sameer: ಯೂಟ್ಯೂಬರ್‌ ಸಮೀರ್‌ಗೆ ತಪ್ಪದ ಸಂಕಷ್ಟ; ಬೆಂಗಳೂರಿನ ಬಾಡಿಗೆ ಮನೆ ಮೇಲೆ ಪೊಲೀಸರಿಂದ ದಾಳಿ

ಸಮೀರ್‌ ಬಾಡಿಗೆ ಮನೆ ಮೇಲೆ ಪೊಲೀಸರಿಂದ ದಾಳಿ

Dharmasthala Case: ಧರ್ಮಸ್ಥಳದ ವಿರುದ್ಧ ಎಐ ವಿಡಿಯೊ ಮಾಡಿ ಸುಳ್ಳು ಆರೋಪ ಹೊರಿಸಿದ ಯೂಟ್ಯೂಬರ್‌ ಸಮೀರ್‌ ಎಂ.ಡಿ.ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್‌ 4ರಂದು ಬೆಳ್ತಂಗಡಿ ಪೊಲೀಸರು ಆತನ ಬೆಂಗಳೂರಿನ ಬಾಡಿಗೆ ಮನೆಗೆ ದಾಳಿ ನಡೆಸಿದೆ.

Cult Movie: ಝೈದ್ ಖಾನ್ ಅಭಿನಯದ ʼಕಲ್ಟ್ʼ ಚಿತ್ರದ ʼಅಯ್ಯೊ ಶಿವನೇʼ ಹಾಡು ಸೆ.10ಕ್ಕೆ ರಿಲೀಸ್‌

ʼಕಲ್ಟ್ʼ ಚಿತ್ರದ ʼಅಯ್ಯೊ ಶಿವನೇʼ ಹಾಡು ಸೆ.10ಕ್ಕೆ ರಿಲೀಸ್‌

Cult Movie: ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರದ ಮೊದಲ ಹಾಡು ʼಅಯ್ಯೊ ಶಿವನೇʼ ಇದೇ ಸೆಪ್ಟೆಂಬರ್ 10 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Sudhir Attavar: ಸುಧೀರ್ ಅತ್ತಾವರ್ ಅವರ ʼಆದಿ ಮಹಾ ಶಕ್ತಿ ಮಹಾಮಾಯಿಯೇʼ ಹಾಡಿಗೆ ವಿದ್ಯಾಭೂಷಣ್ ಧ್ವನಿ

ಸುಧೀರ್ ಅತ್ತಾವರ್ ಬರೆದಿರುವ ಹಾಡಿಗೆ ವಿದ್ಯಾಭೂಷಣ್ ಧ್ವನಿ

ಸಹಸ್ರಾರು ಭಕ್ತಿ ಗೀತೆಗಳನ್ನು ಭಕ್ತಿ ಪರವಶತೆಯಿಂದ ಹಾಡಿ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ವಿದ್ಯಾಭೂಷಣ್ ಅವರು ಸಾಹಿತ್ಯ ಅಕಾಡಮಿ ಪುರಸ್ಕೃತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ʼಆದಿ ಮಹಾ ಶಕ್ತಿ ಮಹಾಮಾಯಿಯೇ...ʼ ಎನ್ನುವ ಹಾಡನ್ನು ಪ್ರಪ್ರಥಮ ಬಾರಿಗೆ ಸಿನಿಮಾಕ್ಕಾಗಿ ಹಾಡಿದ್ದಾರೆ.

GST Council: ನೂತನ ಜಿಎಸ್​ಟಿ: ಮಧ್ಯಮ ವರ್ಗಕ್ಕೆ ಗುಡ್‌, ರಾಜ್ಯದ ಆದಾಯಕ್ಕೆ ಬ್ಯಾಡ್!‌ 70 ಸಾವಿರ ಕೋಟಿ ನಷ್ಟ ಅಂದಾಜು

ಮಧ್ಯಮ ವರ್ಗಕ್ಕೆ ಗುಡ್‌, ರಾಜ್ಯದ ಆದಾಯಕ್ಕೆ ಬ್ಯಾಡ್!‌ 70 ಸಾವಿರ ಕೋಟಿ ನಷ್ಟ

Krishna Byre Gowda: ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, 2024 ಮತ್ತು 25ನೇ ಸಾಲಿಗೆ 70 ಸಾವಿರ ಕೋಟಿ ಒಂದು ವರ್ಷಕ್ಕೆ ಖೋತಾ ಆಗಲಿದೆ ಎಂದು ಹೇಳಿದ್ದಾರೆ. ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಆತಂಕವನ್ನು ಕೃಷ್ಣ ಬೈರೇಗೌಡ ವ್ಯಕ್ತಪಡಿಸಿದ್ದಾರೆ.

Loading...