ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್‌: ಮೇ 1ರಂದು ಪೌರ ಕಾರ್ಮಿಕರ ಸೇವೆ ಕಾಯಂ: ಸಿಎಂ ಘೋಷಣೆ

ಮೇ 1 ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆ ಕಾಯಂ

CM Siddaramaiah: ಮೇ 1 ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕುರಿತ ವಿವರ ಇಲ್ಲಿದೆ.

Toilet cleaning: ಶಾಲೆಗಳಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛ ಮಾಡಿಸಿದ್ರೆ ಬೀಳುತ್ತೆ ಎಫ್‌ಐಆರ್‌; ಶಿಕ್ಷಣ ಇಲಾಖೆ ಎಚ್ಚರಿಕೆ

ಶಾಲೆಗಳಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛ ಮಾಡಿಸಿದ್ರೆ ಬೀಳುತ್ತೆ ಎಫ್‌ಐಆರ್‌!

Toilet cleaning: ಬೆಂಗಳೂರಿನ ಯಲಹಂಕ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛ ಮಾಡಿಸಿದ ಆರೋಪ ಕೇಳಿಬಂದ ಬೆನ್ನಲ್ಲೇ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಇಂತಹ ಘಟನೆಗಳು ಮರುಕಳಿಸಿದಲ್ಲಿ ಶಿಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

Whatsapp Group Admin: ವಾಟ್ಸ್ಯಾಪ್‌ ಗ್ರೂಪ್ ಅಡ್ಮಿನ್‌ಗಳೇ, ನಿಮ್ಮ ಹೊಣೆ ಗೊತ್ತಿರಲಿ, ಇಲ್ಲವಾದರೆ ಜೈಲಿಗೆ ಹೋಗಬೇಕಾದೀತು!

ವಾಟ್ಸ್ಯಾಪ್‌ ಗ್ರೂಪ್ ಅಡ್ಮಿನ್‌ಗಳೇ, ಹೊಣೆ ಅರಿತು ಕಾನೂನಿನಿಂದ ಬಚಾವ್ ಆಗಿ!

ಅಡ್ಮಿನ್‌ಗಳು ತಮ್ಮ ಗ್ರೂಪ್‌ ಅಥವಾ ಪೇಜ್‌ಗಳ ಬಗ್ಗೆ ಎಚ್ಚರದಿಂದ ಇರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಇದರಲ್ಲಿ ಅಡ್ಮಿನ್‌ ಕೂಡಾ ಹೊಣೆಗಾರ. ಸದಸ್ಯರು ಮಾಡಿದ ತಪ್ಪಿಗೆ ಅಡ್ಮಿನ್‌ ಕೋರ್ಟ್‌ ಕಟಕಟೆಯಲ್ಲಿ ನಿಲ್ಲಬಾರದು ಎಂದಿದ್ದರೆ, ಈ ಅಂಶಗಳನ್ನು ಗಮನಿಸಿ.

Physical Abuse: ಮಾಟ, ಮಂತ್ರ ತೆಗೆಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಧರ್ಮಗುರು ಆರೆಸ್ಟ್

ಮಾಟ- ಮಂತ್ರ ತೆಗೆಸುವೆ ಎಂದು ಲೈಂಗಿಕ ಕಿರುಕುಳ, ಮುಸ್ಲಿಂ ಧರ್ಮಗುರು ಆರೆಸ್ಟ್

ಈ ವ್ಯಕ್ತಿ ಇದೇ ರೀತಿ ಮಾಟ ಮಂತ್ರ ನಿವಾರಿಸುವ ಉಸ್ತಾದ್ ಎಂಬ ಸೋಗಿನಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಹಾಗೂ ಕಿರುಕುಳ ನೀಡಿರುವ ಬಗ್ಗೆ ದೂರುಗಳಿವೆ ಎಂದು ತಿಳಿದು ಬಂದಿದೆ. ಹಣ ಪಡೆದು ವಂಚಿಸುತ್ತಿದ್ದುದಲ್ಲದೆ ಅವರಿಗೆ ದೈಹಿಕವಾಗಿಯೂ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

Gold Price Today:  ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಗ್ರಾಹಕರಿಗೆ ಕೊಂಚ ನಿರಾಳ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today: ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 25ರೂ. ಕಡಿಮೆಯಾಗಿ 8,285 ರೂ. ಮತ್ತು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 28ರೂ.ಕಡಿಮೆ ಆಗಿದ್ದು 9,038 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 66,280 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 82,850 ರೂ. ಮತ್ತು 100 ಗ್ರಾಂಗೆ 8,28,500 ರೂ. ನೀಡಬೇಕಾಗುತ್ತದೆ.

Self Harming: ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ವೈದ್ಯ ಆತ್ಮಹತ್ಯೆ

ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ವೈದ್ಯ ಆತ್ಮಹತ್ಯೆ

Self Harming: ಆತ್ಮಹತ್ಯೆಗೆ ಶರಣಾದ ವೈದ್ಯ ಡಾ. ರಾಜಶೇಖರ್ ಎಂದು ತಿಳಿದುಬಂದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಡಾ. ರಾಜಶೇಖರ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ವೈದ್ಯ ಡಾ. ರಾಜಶೇಖರ್ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Missing Case: ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆ, ರಾತ್ರಿಯಿಡೀ ಟೆನ್ಷನ್‌ ಕೊಟ್ಟ 5 ಮಕ್ಕಳು!

ಮೀನು ಹಿಡಿಯಲು ಹೋಗಿ ನಾಪತ್ತೆ, ರಾತ್ರಿಯಿಡೀ ಟೆನ್ಷನ್‌ ಕೊಟ್ಟ 5 ಮಕ್ಕಳು!

ನಿನ್ನೆ ಸಂಜೆ ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ಮನೆಗೆ ಮರಳಿರಲಿಲ್ಲ. ಪಾಲಕರು ಗಾಬರಿಯಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸ್‌ ದೂರು ನೀಡಲಾಗಿದೆ. ಹೇಳದೆ ಕೇಳದೆ ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಗಾಬರಿಯಾದ ಮಕ್ಕಳು ದೇಗುಲದಲ್ಲಿಯೇ ಉಳಿದುಕೊಂಡಿದ್ದರು.

Crime News: ನಗ್ನ ವಿಡಿಯೋ ಕಾಲ್‌ ಮಾಡುವಂತೆ ಒತ್ತಾಯಿಸಿದ ಅನ್ಯಕೋಮಿನ ಯುವಕನಿಗೆ ಧರ್ಮದೇಟು

ನಗ್ನ ವಿಡಿಯೋ ಕಾಲ್‌ ಮಾಡುವಂತೆ ಒತ್ತಾಯಿಸಿದ ಅನ್ಯಕೋಮಿನ ಯುವಕನಿಗೆ ಧರ್ಮದೇಟು

ಯುವತಿ ತನ್ನ ಕಚೇರಿಯ ಸಹೋದ್ಯೋಗಿಯ ನಂಬರ್ ನೀಡಿ ಆತನನ್ನು ಸಾಗ ಹಾಕಿದ್ದರು. ಆದರೆ, ಅದು ಆ ಯುವತಿಯದ್ದೇ ಫೋನ್ ನಂಬರ್ ಎಂದು ಭಾವಿಸಿದ್ದ ಸವಾದ್ ನಿರಂತರ ‌ಅಶ್ಲೀಲ ಮೆಸೇಜ್ ಮಾಡಲು ಆರಂಭಿಸಿದ್ದ. ಆತನ ಎಲ್ಲ ಮೆಸೇಜ್​​ಗಳಿಗೂ ಆ ಯುವತಿಯ ಸಹೋದ್ಯೋಗಿ ಯುವಕ ಉತ್ತರಿಸಿ ಆಟವಾಡಿಸಿದ್ದ.

Fraud Case: ನಟಿ ಸಂಜನಾ ಗಲ್ರಾನಿಗೆ ವಂಚನೆ, ಆರೋಪಿಗೆ ಜೈಲು, 61 ಲಕ್ಷ ರೂ. ದಂಡ

ನಟಿ ಸಂಜನಾ ಗಲ್ರಾನಿಗೆ ವಂಚನೆ, ಆರೋಪಿಗೆ ಜೈಲು, 61 ಲಕ್ಷ ರೂ. ದಂಡ

ಕನ್ನಡದ ನಟಿ ಸಂಜನಾ ಗಲ್ರಾನಿಗೆ ಸ್ನೇಹಿತನಾಗಿದ್ದ ರಾಹುಲ್ ತೋನ್ಸೆ ನಟಿಗೆ ರಿಯಲ್‌ ಎಸ್ಟೇಟ್‌ ಹೂಡಿಕೆ ಭರವಸೆ ನೀಡಿ ಆಕೆಯಿಂದ ಲಕ್ಷಾಂತರ ರೂಪಾಯಿ ಪಡೆದು, ಯಾವುದೇ ಆಸ್ತಿ ನೋಂದಣಿ ಮಾಡಿಸದೆ ವಂಚಿಸಿದ್ದಾನೆ ಎಂದು ನಟಿ ದೂರು ದಾಖಲಿಸಿದ್ದರು.

Murder Case: ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲ್ಲಿಸಿ ಹೆಣದ ಮುಂದೆ ಗೋಳಾಡಿದ ಪತ್ನಿ!

ಪ್ರಿಯಕರನಿಂದ ಪತಿಯನ್ನು ಕೊಲ್ಲಿಸಿ ಹೆಣದ ಮುಂದೆ ಗೋಳಾಡಿದ ಪತ್ನಿ!

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವೆಂಕಟೇಶನ ಪತ್ನಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ಮುಂದೆ ನನ್ನ ಗತಿ ಏನು ಎಂದು ಪತಿಯ ಶವದ ಮುಂದೆ ಗೋಳಾಡಿ ಅತ್ತಿದ್ದಳು. ಆದರೆ, ಪೊಲೀಸರು ಚುರುಕು ಕಣ್ಣುಗಳು ಆಕೆಯ ನಾಟಕವನ್ನು ಬಟಾಬಯಲಾಗಿಸಿದೆ.

Vinay Somaiah death: ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್​ನಲ್ಲಿ ಏನಿದೆ?

ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್​ನಲ್ಲಿ ಏನಿದೆ?

ಪತ್ನಿಗೆ ಬರೆದ ಪತ್ರದಲ್ಲೂ, ನನ್ನ ಸಾವಿಗೆ ಪೊಲೀಸರ ಕಿರುಕುಳ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ. ಕೋರ್ಟ್ ಸ್ಟೇ ಇದ್ದರೂ ಪೊಲೀಸರು ಪದೇ ಪದೇ ಕರೆ ಮಾಡಿ ಬರಲು ಹೇಳ್ತಿದ್ರು. ಇದು ಕ್ಷಮಿಸುವ ತಪ್ಪಲ್ಲ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇತ್ತು ಎಂದು ಬರೆದಿದ್ದರು.

Road Accident: ಟ್ರಾಕ್ಟರ್‌ ಮಗುಚಿ ಬಿದ್ದು ಬಾಲಕಿ ಸಾವು, ಇಬ್ಬರಿಗೆ ಗಾಯ

ಟ್ರಾಕ್ಟರ್‌ ಮಗುಚಿ ಬಿದ್ದು ಬಾಲಕಿ ಸಾವು, ಇಬ್ಬರಿಗೆ ಗಾಯ

ಚಾಲಕ ತನ್ನ ಆರು ಮತ್ತು ಒಂಬತ್ತು ವರ್ಷದ ಮಕ್ಕಳನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ತನ್ನ ಶೆಡ್‌ಗೆ ಹೋಗುತ್ತಿದ್ದರು. ಪಟ್ಟಂದೂರು ಅಗ್ರಹಾರ ಕೆರೆ ಏರಿ ಮೇಲೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಉರುಳಿದ ಟ್ರ್ಯಾಕ್ಟರ್‌ ಕೆರೆಗೆ ಬಿದ್ದಿದೆ.

Weather forecast: ಹವಾಮಾನ ವರದಿ; ಇಂದು ಮೈಸೂರು, ಚಾಮರಾಜನಗರ ಸೇರಿ ಹಲವೆಡೆ ಭಾರಿ ಮಳೆ ನಿರೀಕ್ಷೆ

ಹವಾಮಾನ ವರದಿ; ಇಂದು ಮೈಸೂರು, ಚಾಮರಾಜನಗರ ಸೇರಿ ಹಲವೆಡೆ ಭಾರಿ ಮಳೆ ನಿರೀಕ್ಷೆ

Weather forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ° C ಮತ್ತು 23 ° C ಆಗಿರಬಹುದು.

Vidhana Soudha lighting: ಮೆಟ್ರೋ ಪಿಲ್ಲರ್, ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ: ಡಿಸಿಎಂ ಡಿಕೆಶಿ

ಮೆಟ್ರೋ ಪಿಲ್ಲರ್, ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ: ಡಿಸಿಎಂ ಡಿಕೆಶಿ

Vidhana Soudha lighting: ಸರ್ಕಾರದ ಆಸ್ತಿಗಳಲ್ಲಿ ದೀಪಾಲಂಕಾರ ಮಾಡುತ್ತೇವೆ, ಖಾಸಗಿ ಸ್ಥಳ, ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ ಸುಮಾರು 40 ಕಡೆ ದೀಪಾಲಂಕಾರಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

Vidhana Soudha lighting: ವಿಧಾನಸೌಧದ ನಿತ್ಯ ದೀಪಾಲಂಕಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ವಿಧಾನಸೌಧದ ನಿತ್ಯ ದೀಪಾಲಂಕಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

Vidhana Soudha lighting: ಈ ಮೊದಲು ರಾಷ್ಟ್ರೀಯ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ, ಇನ್ನುಮುಂದೆ ಪ್ರತಿದಿನ ಬಣ್ಣಬಣ್ಣದ ಬೆಳಕಿನಿಂದ ಶಕ್ತಿಸೌಧ ಕಂಗೊಳಿಸಲಿದೆ. ಭಾನುವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ನಿತ್ಯ ದೀಪಾಲಂಕಾರವನ್ನು ಉದ್ಘಾಟಿಸಿದ್ದಾರೆ.

Waqf Bill: ವಕ್ಫ್‌ ತಿದ್ದುಪಡಿಯಿಂದ ಒಂದೇ ಒಂದು ದರ್ಗಾ, ಮಸೀದಿಗೂ ಧಕ್ಕೆ ಆಗಲ್ಲ: ಪ್ರಲ್ಹಾದ್‌ ಜೋಶಿ

ವಕ್ಫ್‌ ತಿದ್ದುಪಡಿಯಿಂದ ಒಂದೇ ಒಂದು ದರ್ಗಾ, ಮಸೀದಿಗೂ ಧಕ್ಕೆ ಆಗಲ್ಲ

Waqf Bill: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟನೆ ನೀಡಿದ್ದಾರೆ.ವಕ್ಫ್‌ನಲ್ಲಿ ಪ್ರಮುಖವಾಗಿ ಆಡಳಿತಾತ್ಮಕವಾಗಿ ಪಾರದರ್ಶಕ ಬದಲಾವಣೆ ತರಬೇಕಿತ್ತು ಅದನ್ನು ಮಾಡಿದ್ದೇವೆ. ಹಾಗೆಂದ ಮಾತ್ರಕ್ಕೆ ದರ್ಗಾ, ಮಸೀದಿಯಂತಹ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುತ್ತೇವೆ ಎಂದಲ್ಲ ಎಂದು ಹೇಳಿದ್ದಾರೆ.

Physical Abuse: ದೇಶವೇ ತಲೆ ತಗ್ಗಿಸುವ ಘಟನೆ; ಬೆಂಗಳೂರಿನ ನಡುರಸ್ತೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರಿನ ನಡುರಸ್ತೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಗುರುವಾರ (ಏ. 4) ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆ ಮೇಲೆ ದೌರ್ಜನ್ಯ ನಡೆಸಿ ಪರಾರಿಯಾಗಿದ್ದಾನೆ. ಬಿಟಿಎಂ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Karnataka Weather: ನಾಳೆ ಹಾಸನ, ಕೊಡಗು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ನಾಳೆ ಹಾಸನ, ಕೊಡಗು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

Karnataka Weather: ಕಲಬುರಗಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ 38.6 ಡಿ.ಸೆ ದಾಖಲಾಗಿದೆ. ಇನ್ನು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 24 ಗಂಟೆಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ, ನಂತರದ 4 ದಿನಗಳಲ್ಲಿ 2-4 ಡಿಗ್ರಿಗಳಷ್ಟು ಏರಿಕೆಯಾಗಲಿದೆ.

Hubli Accident: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ; ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಮೂವರು ಮಹಿಳೆಯರ ದುರ್ಮರಣ

ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಮೂವರು ಮಹಿಳೆಯರ ದುರ್ಮರಣ

Hubli Accident: ಹುಬ್ಬಳ್ಳಿ ನಗರದ ಹೊರವಲಯದ ನೂಲ್ವಿ ಕ್ರಾಸ್‌ನಲ್ಲಿ ದುರ್ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ.

Basanagouda Patil Yatnal: ಬಿಎಸ್‌ವೈ ಕುಟುಂಬದಿಂದ ಬಿಜೆಪಿ ಮುಕ್ತವಾದರೆ ಮತ್ತೆ ಪಕ್ಷ ಸೇರುವೆ: ಶಾಸಕ ಯತ್ನಾಳ್

ಬಿಎಸ್‌ವೈ ಕುಟುಂಬದಿಂದ ಬಿಜೆಪಿ ಮುಕ್ತವಾದ್ರೆ ಮತ್ತೆ ಪಕ್ಷ ಸೇರುವೆ: ಯತ್ನಾಳ್

Basanagouda Patil Yatnal: ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರಗೆ ದಮ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆರಿಸಿ ಬರಲಿ. ನಾನೂ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಹಾಕಿದ್ದಾರೆ.

Ram Navami 2025: ಕಲ್ಪತರು ನಾಡಲ್ಲಿ ಮೊಳಗಿದ ರಾಮ ನಾಮ ಜಪ; ದೇವಾಲಯಗಳಲ್ಲಿ ವಿಶೇಷ ಪೂಜೆ

ಕಲ್ಪತರು ನಾಡಲ್ಲಿ ಮೊಳಗಿದ ರಾಮ ನಾಮ ಜಪ; ದೇವಾಲಯಗಳಲ್ಲಿ ವಿಶೇಷ ಪೂಜೆ

Ram Navami 2025: ತುಮಕೂರು ಜಿಲ್ಲೆಯ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆಗಳು ನಡೆದವು. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ.

SDM: ಉತ್ತಮ ನಾಯಕನಾಗಬೇಕಾದರೆ ಟೆಕ್ನಾಲಜಿಯ ಬಳಕೆ ಸರಿಯಾಗಿ ತಿಳಿದಿರಬೇಕು

ಸಂಪನ್ನಗೊಂಡ ಎಸ್‌ಡಿಎಂ ಐಎಂಡಿ ಕಾಲೇಜಿನ ಘಟಿಕೋತ್ಸವ

ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಿಸಿ ಮಾತನಾಡಿದ ಕಾರ್ಯ ಕ್ರಮದ ವಿಶೇಷ ಅತಿಥಿ ಟಿವಿಎಸ್‌ ಆಟೊಮೊಬೈಲ್‌ ಸೊಲ್ಯೂಷನ್ಸ್‌ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ನಟರಾಜನ್‌ ಶ್ರೀನಿವಾಸನ್‌, ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ನೋಡಬೇಕೆಂದರೆ ಮೈಸೂರಿಗೆ ಬರಬೇಕು.

Ram Navami 2025: ಕಲಬುರಗಿಯಲ್ಲಿ ಅದ್ಧೂರಿ ರಾಮೋತ್ಸವ; ಮೆರವಣಿಗೆಯಲ್ಲಿ ರಾರಾಜಿಸಿದ ಆರ್‌ಸಿಬಿ ಜೆರ್ಸಿ

ಕಲಬುರಗಿಯಲ್ಲಿ ಅದ್ಧೂರಿ ರಾಮೋತ್ಸವ; ಶ್ರೀರಾಮನ ಮೂರ್ತಿ ಮೆರವಣಿಗೆ

Ram Navami 2025: ರಾಮ ನವಮಿ ಪ್ರಯುತ್ತ ಕಲಬುರಗಿ ನಗರದಲ್ಲಿ ರಾಮ ನವಮಿ ಉತ್ಸವ ಸಮಿತಿಯಿಂದ 15 ಅಡಿ ಶ್ರೀರಾಮ ಪ್ರಭುವಿನ ಮೂರ್ತಿ ಮೆರವಣಿಗೆಗೆ ಹಲವು ಪೂಜ್ಯರು ಚಾಲನೆ ನೀಡಿದ್ದಾರೆ. ಆಳಂದ ಚೆಕ್ ಪೋಸ್ಟ್ ಹತ್ತಿರದ ರಾಮತಿರ್ಥ್ ಮಂದಿರದಿಂದ ಮೆರವಣಿಗೆ ಪ್ರಾರಂಭವಾಯಿತು.

Vinay Guruji: ನಮಗೆ ಬೇಕಿರುವುದು ಗಾಂಧಿ ನೋಟಲ್ಲ, ಗಾಂಧಿ ಆದರ್ಶಗಳು: ವಿನಯ್ ಗುರೂಜಿ

ನಮಗೆ ಬೇಕಿರುವುದು ಗಾಂಧಿ ನೋಟಲ್ಲ, ಗಾಂಧಿ ಆದರ್ಶಗಳು

Vinay Guruji: ತುಮಕೂರು ನಗರದ 1ನೇ ವಾರ್ಡಿನ ಮರಳೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶಿವ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ವಿನಯ್‌ ಗುರೂಜಿ ಅವರು ಮಾತನಾಡಿದ್ದಾರೆ. ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ ಮಾರ್ಗದಲ್ಲಿ ಸಾಗುತ್ತದೆ ಎಂದು ಅವರು ತಿಳಿಸಿದ್ದಾರೆ.