ಬರ್ತಿದೆ ಪುನೀತ್ ರಾಜ್‌ಕುಮಾರ್ ಬಯೋಗ್ರಫಿ, ʼಅಪ್ಪುʼ ಮುಖಪುಟ ಅನಾವರಣ
Puneeth Rajkumar: ಫ್ಯಾನ್ಸ್ ಪ್ರೀತಿಯಿಂದ ಪುನೀತ್ ಅವರನ್ನು ಕರೆಯುವ ʼಅಪ್ಪುʼ ಎಂಬ ಹೆಸರಿನಲ್ಲೇ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಎರಡು ವರ್ಷಗಳ ಪ್ರಯತ್ನದಿಂದ ಈ ಪುಸ್ತಕ ಹೊರ ಬಂದಿದೆ. ಈ ಪುಸ್ತಕದ ಕವರ್ ಪೇಜ್ ಹೇಗಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ.