ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಈ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಟ್ಟರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ..!

ಸಾವಿರಾರು ವರ್ಷಗಳ ಕಾಲ ಬದುಕಬಲ್ಲ ಆಮೆಗೆ ಪುರಾಣ ಮತ್ತು ವಾಸ್ತುವಿನಲ್ಲೂ ಮಹತ್ವ ಇದೆ. ಮನೆಯಲ್ಲಿ ಆಮೆಯನ್ನು ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿಯ ಭಾವನೆ ಹೆಚ್ಚಾಗಿ, ಪ್ರಗತಿ ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ಈ ಆಮೆ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಹಣದ ಕೊರತೆ ಇರುವುದಿಲ್ಲ. ವಾಸ್ತುವಿನಲ್ಲಿ (vastu) ವಿಶೇಷ ಸ್ಥಾನಮಾನ ಹೊಂದಿರುವ ಈ ಆಮೆಯನ್ನು ಮನೆಯಲ್ಲಿ ತಂದಾಗ ಅದನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಕ್ರಮದಲ್ಲಿ ಇಟ್ಟರೆ ಮಾತ್ರ ಲಾಭ.

ಮನೆಯಲ್ಲಿ ಆಮೆ ಪ್ರತಿಮೆ ಇಡುವುದು ಶುಭವೋ..? ಅಶುಭವೋ...?

ಆಮೆ

Profile Sushmitha Jain Mar 10, 2025 8:45 AM

ಮನೆ ಹಾಗೂ ನಾವು ಕೆಲಸ ಮಾಡುವಂತಹ ಆಫೀಸ್‌ನಲ್ಲಿ ಪ್ರತಿಯೊಂದು ವಸ್ತುಗಳು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಇರಬೇಕು ಎನ್ನುವುದು ವಾಸ್ತು ಶಾಸ್ತ್ರದ ಮೊದಲ ನಿಯಮ ಆಗಿರುತ್ತದೆ. ಹೀಗೆ ಇದ್ದಲ್ಲಿ ಮಾತ್ರ ಯಾವುದೇ ದೋಷಗಳಿಲ್ಲದೆ ಪ್ರತಿಯೊಂದು ಕೆಲಸಗಳು ಕೂಡ ಸರಾಗವಾಗಿ ನಡೆಯುತ್ತದೆ ಎನ್ನುವುದು ಪ್ರತಿಯೊಬ್ಬರ ನಂಬಿಕೆ ಆಗಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಏನಾದರೂ ದೋಷ ಮನೆಯಲ್ಲಿ ಇದ್ದರೆ ಕುಟುಂಬ ಸದಸ್ಯರ ನಡುವೆ ಕೆಲವೊಂದು ಅಸಮಾಧಾನಗಳಿಂದ ಜಗಳ ನಡೆಯುವಂತಹ ಸಾಧ್ಯತೆ ಕೂಡ ಇರುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮಾತ್ರವಲ್ಲದೆ ಫೆಂಗ್ ಶುಯಿ ಪ್ರಕಾರವೂ ಆಮೆ ಮನೆಯಲ್ಲಿದ್ದರೆ ಸಕಲ ವಾಸ್ತು ದೋಷಗಳು ನಿವಾರಣೆಯಾಗಿ, ಸುಖಮಯ ಜೀವನ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗುತ್ತದೆ. ಇದರಿಂದ ಮನೆಯಲ್ಲಿ ಒಳ್ಳೆಯದಾಗಿ, ಸಂಪತ್ತು ಸಿಗಲಿ ಎಂಬುದಾಗಿದೆ.

ಹಾಗಾದ್ರೆ ಬನ್ನಿ ಮನೆಯ ಯಾವ ದಿಕ್ಕಿಗೆ ಆಮೆ ಪ್ರತಿಮೆ ಇಡಬೇಕು...? ಯಾವ ರೀತಿಯ ಆಮೆ ಇಡಬೇಕು ಎಂದು ತಿಳಿಯೋಣ.

ಆಮೆ ವಿಗ್ರಹ (Turtle idols)
ವಾಸ್ತು ಶಾಸ್ತ್ರದ ಪ್ರಕಾರ ಆಮೆಯು ಧನಾತ್ಮಕ ಶಕ್ತಿಯ (Positive Energy) ಸಂಕೇತವಾಗಿದ್ದು, ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಆಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಜೀವನದಲ್ಲಿ ಸಂತೋಷ, ಸಮೃದ್ಧಿಯು (Wealth) ಹೆಚ್ಚುವುದಲ್ಲದೆ, ಸದಾ ನಿಮಗೆ ನೆಮ್ಮದಿ ಲಭ್ಯವಾಗುತ್ತದೆ. ಮನೆಯ ಉತ್ತರ (North Derection)) ಭಾಗದಲ್ಲಿ ಲೋಹದ ಆಮೆಯನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುವುದರ ಜೊತೆಗೆ ನೀವು ಕೈಹಾಕಿದ ಕ್ಷೇತ್ರದಲ್ಲಿ ಯಶಸ್ಸು (Success) ಲಭ್ಯವಾಗುತ್ತದೆ.

ಮರದ ಆಮೆ- ವಾಸ್ತು ಶಾಸ್ತ್ರದ ಪ್ರಕಾರ, ಮರದ ಆಮೆಯನ್ನು ಮನೆಯ ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇರಿಸುವುದರಿಂದ ನಿಮ್ಮ ಮನೆಯಿಂದ ಎಲ್ಲಾ ನಕಾರಾತ್ಮಕ ಶಕ್ತಿ (Negative energy)ಯನ್ನು ತೆಗೆದುಹಾಕುತ್ತದೆ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಯಶಸ್ಸಿಗೆ ಇದು ಪ್ರಯೋಜನಕಾರಿಯಾಗಿದೆ.


ಸ್ಫಟಿಕ ಅಥವಾ ಗಾಜಿನ ಆಮೆ - ಆಮೆ ಸಂಪತ್ತಿನ ಸಂಕೇತವಾಗಿದೆ. ಗಾಜಿನ ಆಮೆ (Glass turtle) ಯನ್ನು ಮನೆ ಅಥವಾ ಕಚೇರಿಯಲ್ಲಿ ಇಡುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಗಾಜಿನ ಆಮೆ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಯಾವುದೇ ವಾಸ್ತು ದೋಷವನ್ನು ಹೋಗಲಾಡಿಸಲು ಆಮೆಯನ್ನು ಮನೆಯಲ್ಲಿ ಇಡುವುದು ಮುಖ್ಯವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಸ್ವಾಮಿ ಕುಬೇರನು ಮನೆಯ ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾನೆ, ಆದ್ದರಿಂದ ಈ ದಿಕ್ಕಿನಲ್ಲಿ ಸ್ಫಟಿಕ ಅಂದರೆ ಆಮೆ ವಿಗ್ರಹವನ್ನು ಇಡುವುದು ಲಾಭದಾಯಕವಾಗಿದೆ

ಆದರೆ ಬಾಯಿ ತೆರೆದಿರುವ ಆಮೆಯನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಹಾಗೆ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಫಲಿತಾಂಶ ಉಂಟಾಗಬಹುದು. ಅಂತಹ ಆಮೆಯನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಕುಟುಂಬದಲ್ಲಿ ಜಗಳ, ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಗಿಡವಿದ್ದರೆ ಸಂಪತ್ತನ್ನು ಆಕರ್ಷಿಸುವುದು