ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಹುಟ್ಟಿದ ಪ್ರೀತಿ: 75ರ ವೃದ್ಧನ ಜೊತೆ 30ರ ಯುವತಿಯ ಮದುವೆ!

Viral News: ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿರುವ ಜೋಡಿಯ ಪ್ರೇಮಕಥೆಯೊಂದು ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಔರಯ್ಯದಲ್ಲಿ, 75 ವರ್ಷದ ರಾಮ್‌ಸುಗರ್ ಎಂಬುವವರು 30 ವರ್ಷದ ರಾಣಿ ರಜಪೂತ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ. ಇವರಿಬ್ಬರೂ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಈಗಾಗಲೇ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿದೆ.

75ರ ವೃದ್ಧ ಜೊತೆ 30ರ ಯುವತಿ ಮದುವೆ!

75ರ ವೃದ್ಧನ ಜೊತೆ 30ರ ಯುವತಿಯ ಮದುವೆ -

Profile
Pushpa Kumari Oct 17, 2026 5:51 PM

ಉತ್ತರ ಪ್ರದೇಶದ,ಅ.17: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅನ್ನೋದನ್ನು ನೀವು ಕೇಳಿರಬಹುದು. ಇದೀಗ ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿರುವ ಜೋಡಿಯ ಪ್ರೇಮಕಥೆ ಯೊಂದು ಚರ್ಚೆಗೆ (Viral News) ಕಾರಣವಾಗಿದೆ. ಉತ್ತರ ಪ್ರದೇಶದ ಔರಯ್ಯದಲ್ಲಿ, 75 ವರ್ಷದ ರಾಮ್‌ಸುಗರ್ ಎಂಬು ವವರು 30 ವರ್ಷದ ರಾಣಿ ರಜಪೂತ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ. ಇವರಿಬ್ಬರೂ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಈಗಾಗಲೇ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿದೆ.

ಔರೈಯಾದಲ್ಲಿ ನಡೆಯಲಿರುವ ಒಂದು ವಿಶಿಷ್ಟ ಮದುವೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿರುವ ಈ ಜೋಡಿಯ ಪ್ರೇಮಕಥೆ ಈಗ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆಲವರು ಇವರಿಗೆ ಅಭಿನಂದನೆ ಸಲ್ಲಿಸುತ್ತಿದ್ದರೆ, ಮತ್ತೆ ಕೆಲವರು 45 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ತಮಾಷೆ ಮಾಡುತ್ತಾ, ಪ್ರಶ್ನೆಗಳನ್ನು ಹಾಕಿದ್ದಾರೆ.

ವಿಡಿಯೋ ನೋಡಿ:



75 ವರ್ಷ ವಯಸ್ಸಿನ ರಾಮಸುಗರ್ ಹಾಗೂ 30 ವರ್ಷ ವಯಸ್ಸಿನ ರಾಣಿ ರಜಪೂತ್ ಇವರು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಪರಿಚಯರಾದವರು. ರಾಣಿ ರಜಪೂತ್ ಅವರು ರಾಮಸುಗರ್ ಅವರ ಮಗಳನ್ನು ಭೇಟಿ ಮಾಡಲು ಅವರ ಮನೆಗೆ ಆಗಾಗ ಹೋಗುತ್ತಿದ್ದರು. ಈ ವೇಳೆ ರಾಮ ಸುಗರ್ ಮತ್ತು ರಾಣಿ ನಡುವೆ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿದೆ. ಕಳೆದ ಒಂದು ವರ್ಷದಿಂದ ಇವರು ಪ್ರೀತಿಯಲ್ಲಿದ್ದರು ಎನ್ನಲಾಗಿದೆ.

Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

​ಇವರಿಬ್ಬರೂ ಈಗಾಗಲೇ ತಮ್ಮ ಉಂಗುರ ಬದಲಾವಣೆ ಕಾರ್ಯಕ್ರಮ ವನ್ನು ನೆರವೇರಿಸಿಕೊಂಡಿದ್ದಾರೆ. ನವರಾತ್ರಿ ಮುಗಿದ ತಕ್ಷಣ ಮದುವೆಯಾಗಲು ನಿರ್ಧರಿಸಿದ್ದಾರೆ. ಇವರ ನಿಶ್ಚಿತಾರ್ಥ ಸಮಾರಂಭದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕುಟುಂಬಸ್ಥರು ಸಂಭ್ರಮಿಸುತ್ತಿರುವುದು ದೃಶ್ಯದಲ್ಲಿದೆ.

ಈ ಬಗ್ಗೆ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ''ಒಬ್ಬರು, ಪ್ರೀತಿ ನಿಜವಾಗಿಯೂ ಕುರುಡಾಗಿದೆಯೇ?” ಎಂದು ಕೇಳಿದ್ದಾರೆ. ಇನ್ನೊಬ್ಬರು "ಪ್ರೀತಿ ಕುರುಡು ಎಂದು ಹೇಳುತ್ತಾರೆ, ಅದು ನಿಜವೆಂದು ಇಂದೇ ನೋಡಿದೆ," ಅಂದರು.ಕೆಲವು ಬಳಕೆದಾರರು ಜೋಡಿಯ ಆರ್ಥಿಕ ಸ್ಥಿತಿ ಹಾಗೂ ಆಸ್ತಿಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ.