ಕೈ ಹಿಡಿದು ಅನುಚಿತ ವರ್ತನೆ ತೋರಿದ ರೈಡರ್: ಪೋಸ್ಟ್ ನಲ್ಲಿ ಅಹಿತಕರ ಅನುಭವ ಶೇರ್ ಮಾಡಿದ ಬೆಂಗಳೂರಿನ ಮಹಿಳೆ!
Viral News: ಆ್ಯಪ್ ಆಧಾರಿತ ವಾಹನ ಸೌಕರ್ಯಗಳನ್ನು ಬಳಸುವ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಆತಂಕ ವ್ಯಕ್ತ ಪಡಿಸುವ ಘಟನೆಯೊಂದು ನಡೆದಿದೆ. "ರಾಪಿಡೊ ಪಿಂಕ್" ರೈಡ್ ವೇಳೆ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅನುಚಿತವಾಗಿ ವರ್ತನೆ ತೋರಿದ್ದಾನೆ. ಈ ಘಟನೆ ಬಗ್ಗೆ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ಕೇಳಿ ಬಂದಿದೆ.
ಇಂಟರ್ ನೆಟ್ ಚಿತ್ರ -
ಬೆಂಗಳೂರು,ಅ.17: ಇತ್ತೀಚೆಗೆ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವ ಅನೇಕ ಘಟನೆಗಳು ವರದಿಯಾಗಿವೆ. ಅದರಲ್ಲೂ ಆ್ಯಪ್ ಆಧಾರಿತ ವಾಹನ ಸೌಕರ್ಯಗಳನ್ನು ಬಳಸುವ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಆತಂಕ ವ್ಯಕ್ತ ಪಡಿಸುವ ಘಟನೆಯೊಂದು ನಡೆದಿದೆ. "ರಾಪಿಡೊ ಪಿಂಕ್" ರೈಡ್ ವೇಳೆ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅನುಚಿತವಾಗಿ ವರ್ತನೆ ತೋರಿದ್ದಾನೆ. ಈ ಘಟನೆ (Viral News) ಬಗ್ಗೆ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ಕೇಳಿ ಬಂದಿದೆ.
ಬೆಂಗಳೂರಿನ ಮಹಿಳೆಯೊಬ್ಬರು ಇತ್ತೀಚೆಗೆ 'ರಾಪಿಡೋ ಪಿಂಕ್' ಸೇವೆಯನ್ನು ಬಳಸುವಾಗ ಅಹಿತಕರ ಅನುಭವವೊಂದನ್ನು ಎದುರಿಸಿದ್ದಾರೆ. ಪ್ರಯಾಣ ಮುಗಿದ ನಂತರವೂ ರೈಡರ್ ತನ್ನ ಕೈಯನ್ನು ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಂಡಿದ್ದ. ಹಾಗೂ ತನ್ನ ವಸತಿ ಸಂಕೀರ್ಣದ ಹೊರಗೆಯೇ ಉಳಿದುಕೊಂಡಿದ್ದ ಎಂದು ಅವರು ಆರೋಪಿಸಿದ್ದಾರೆ.
ರಾಪಿಡೋ ರೈಡರ್ ತನ್ನ ಕೈ ಹಿಡಿದುಕೊಂಡಿದ್ದ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಇದರಿಂದ ತನಗೆ ಅಸುರಕ್ಷಿತ ಭಾವನೆ ಉಂಟಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ. ಸೃಷ್ಟಿ ಅವರ ಪ್ರಕಾರ, ಮಳೆಯ ಕಾರಣದಿಂದಾಗಿ ಅವರು ಆರಂಭದಲ್ಲಿ ಈ ಪ್ರಯಾಣವನ್ನು ಕೈಗೊಳ್ಳಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದರು. ಆದರೆ ಮಳೆಯ ಕಾರಣ ನೀಡಿ, ಬುಕಿಂಗ್ ರದ್ದುಗೊಳಿಸದಂತೆ ರೈಡರ್ ಪದೇ ಪದೇ ವಿನಂತಿಸಿಕೊಂಡಿದ್ದಾರೆ.
TRIGGER ⚠️WARNING @rapidoapp_ @BlrCityPolice I don't understand how RAPIDO has no accountability for such riders. I was already hesitant to take the ride because of rain. This rider “SYED TOUSIF Z” repeatedly asked not to cancel the ride because of the rain. https://t.co/wRDoltdAGM
— swishbee (@srishhteaaaa) October 15, 2026
ಪ್ರಯಾಣದ ವೇಳೆ ರೈಡರ್ ಅತಿಯಾಗಿ ಸ್ನೇಹದಿಂದ ಇರಲು ಪ್ರಯತ್ನಿಸಿದ್ದಾನೆ. ಸೃಷ್ಟಿಗೆ ರೈನ್ಕೋಟ್ ನೀಡಲು ಮುಂದಾಗಿದ್ದು ಸೃಷ್ಟಿ ಇಯರ್ಫೋನ್ಗಳನ್ನು ಧರಿಸಿದ್ದರೂ ಪದೇ ಪದೇ ಮುಟ್ಟಿ ಮಾತನಾಡಿಸುತ್ತಿದ್ದ. ಅಪಾರ್ಟ್ಮೆಂಟ್ ತಲುಪಿದ ಬಳಿಕ ಹೆಲ್ಮೆಟ್ ಮರಳಿಸುವಾಗ ಆಕೆಯ ಕೈಯನ್ನು ಕೆಲ ಸೆಕೆಂಡುಗಳ ಕಾಲ ಗಟ್ಟಿಯಾಗಿ ಹಿಡಿದು ಅಸಹ್ಯವಾಗಿ ನಕ್ಕಿದ್ದಾನೆ. ಹಣ ಪಾವತಿ ವೇಳೆ ಕ್ಯೂಆರ್ ಕೋಡ್ ಕೇಳಿದಾಗ ಫೋನ್ ಸರಿಯಿಲ್ಲ ಎಂದು ಮೊಬೈಲ್ ನಂಬರ್ ಕೇಳಿದ್ದಾನೆ. ಆದರೂ ಸೃಷ್ಟಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಿದ್ದಾರೆ.
ರೈಡ್ ಮುಗಿದ ಬಳಿಕವು ಕೆಲವು ಸಮಯದ ವರೆಗೆ ಅಲ್ಲಿಂದ ಕದಲದೆ ನಿಂತಿದ್ದ. ಇದರಿಂದ ತಮಗೆ ತೀವ್ರ ಮಾನಸಿಕ ಆಘಾತ ವಾಗಿದೆ ಎಂದು ಸೃಷ್ಟಿ ಪೋಸ್ಟ್ ಮಾಡಿದ್ದಾರೆ. ಜನನಿಬಿಡ ಸಮಯದಲ್ಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಪಿಡೊ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವ ಇಂತಹ ಅನುಚಿತ ವರ್ತನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಂಬಂಧಪಟ್ಟ ಚಾಲಕನನ್ನು ಪ್ಲಾಟ್ ಫಾರ್ಮ್ನಿಂದ ನಿಷೇಧಿಸಲಾಗಿದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ.