ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಗುವಿನ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಿ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ರಾಪಿಡೋ ಓಡಿಸುತ್ತಿರುವ ತಂದೆ!

Viral News: ಹೊಟ್ಟೆ ಪಾಡಿಗಾಗಿ ಜೀವಿಸುತ್ತಿರುವಾಗ ಕೆಲವೊಂದು ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಘಟನೆಯೊಂದು ಎಲ್ಲರ ಕರುಳು ಹಿಂಡುವಂತಿದೆ. ವ್ಯಕ್ತಿಯೊಬ್ಬರು ತನ್ನ ಮಗುವಿನ ಆರೈಕೆಗಾಗಿ ಓಮನ್‌ನಲ್ಲಿದ್ದ ಉದ್ಯೋಗವನ್ನೇ ಬಿಟ್ಟು ಬಂದು ರಾಪಿಡೋ ವೃತ್ತಿ ಆಯ್ದುಕೊಂಡಿರುವುದಾಗಿ ತಿಳಿಸಿದ್ದಾರೆ.

ಮಗುವಿನ ಆರೈಕೆಗಾಗಿ ಓಮನ್‌ನಲ್ಲಿದ್ದ ಉದ್ಯೋಗವನ್ನೇ ತೊರೆದ ವ್ಯಕ್ತಿ!

ಮಗುವಿನ ಆರೈಕೆಗಾಗಿ ಓಮನ್‌ನಲ್ಲಿದ್ದ ಉದ್ಯೋಗವನ್ನೇ ತೊರೆದ ವ್ಯಕ್ತಿ -

Profile
Pushpa Kumari Oct 17, 2026 3:24 PM

ಬೆಂಗಳೂರು,ಅ. 17: ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ.ಕೆಲವೊಂದು ಸವಾಲುಗಳನ್ನು ಎದುರಿಸಲು ನಮ್ಮ ಕನಸುಗಳನ್ನೇ ತ್ಯಾಗ ಮಾಡಬೇಕಾಗುತ್ತದೆ. ಹೊಟ್ಟೆ ಪಾಡಿಗಾಗಿ ಜೀವಿಸುತ್ತಿರುವಾಗ ಕೆಲವೊಂದು ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಸೋಷಿಯಲ್  ಮೀಡಿಯಾದಲ್ಲಿ ವೈರಲ್ (Viral News) ಆಗಿರುವ ಘಟನೆಯೊಂದು ಎಲ್ಲರ ಕರುಳು ಹಿಂಡುವಂತಿದೆ. ವ್ಯಕ್ತಿಯೊಬ್ಬರು ತನ್ನ ಮಗುವಿನ ಆರೈಕೆಗಾಗಿ ಓಮನ್‌ನಲ್ಲಿದ್ದ ಉದ್ಯೋಗವನ್ನೇ ಬಿಟ್ಟು ಬಂದು ರಾಪಿಡೋ ವೃತ್ತಿ ಆಯ್ದುಕೊಂಡಿರುವುದಾಗಿ ತಿಳಿಸಿದ್ದಾರೆ.

ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿದ್ದ ಮಗುವಿನ ಜೀವ ಉಳಿಸಲು ವಿದೇಶದ ಉತ್ತಮ ಪ್ಯಾಕೇಜ್ ಕೆಲಸ ಬಿಟ್ಟು ಅನಿವಾರ್ಯತೆಯಿಂದ ಬೆಂಗಳೂರಿನಲ್ಲಿ ರಾಪಿಡೋ ಓಡಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಈಗಾಗಲೇ ತಮ್ಮ ಉಳಿತಾಯ ದಿಂದ 8-9 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಆ ಚಾಲಕ ತಿಳಿಸಿದ್ದಾರೆ.



ರಾಪಿಡೋ ಓಡಿಸುತ್ತಿರುವ ಹತಾಶ ತಂದೆಯೊಬ್ಬರ ಕಥೆಯನ್ನು ಪ್ರಯಾಣಿಕರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ​​ಸಾಕ್ಷಿ ಎಂಬ ಬಳಕೆದಾರರು ರಾಪಿಡೋ ಬುಕ್ ಮಾಡಿದ್ದಾಗ ಪ್ರಯಾಣದ ವೇಳೆ ಚಾಲಕ ಜೊತೆಗೆ ಮಾತನಾಡಿದ್ದಾರೆ. ಆಗ ಚಾಲಕ ತಮ್ಮ ಮಗುವಿನ ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಒಮಾನ್ ದೇಶದಲ್ಲಿದ್ದ ಉದ್ಯೋಗವನ್ನೇ ಬಿಟ್ಟು ವಾಪಸ್ ಬಂದಿರುವುದಾಗಿ ತಿಳಿಸಿದ್ದಾರೆ.

Viral Video: ಹಠಾತ್ ಮಳೆ: ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು

ಉದ್ಯೋಗಕ್ಕಾಗಿ ಸಂದರ್ಶನಗಳಿಗೆ ಹಾಜರಾಗುತ್ತಿದ್ದರೂ ಮಗುವಿನ ಚಿಕಿತ್ಸೆಗಾಗಿ ಪ್ರತಿ ತಿಂಗಳು ಕನಿಷ್ಠ ಆರು ದಿನಗಳ ರಜೆ ಬೇಕಾಗುವುದರಿಂದ, ಉದ್ಯೋಗ ಸಿಗುವುದು ಕಷ್ಟಕರವಾಗಿದೆ.​ ಮಗುವಿನ ಇದುವರೆಗಿನ ಚಿಕಿತ್ಸೆಗಾಗಿ ಆ ತಂದೆ ತಮ್ಮ ಬಳಿಯಿದ್ದ 8 ರಿಂದ 9 ಲಕ್ಷ ರೂ. ಉಳಿತಾಯವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದಾರೆ.

​ಹಣದ ಹೊಂದಾಣಿಕೆಗಾಗಿ ಸಾಲ ಮಾಡುವ ದುಸ್ಥಿತಿಗೆ ತಲುಪಿದ್ದಾರೆ. ಕುಟುಂಬವನ್ನು ನಿರ್ವಹಿಸಲು ಮತ್ತು ಚಿಕಿತ್ಸಾ ವೆಚ್ಚಗಾಗಿ ಪ್ರಸ್ತುತ ರಾಪಿಡೋ ಓಡಿಸುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ​ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸ್ಪಂದಿಸಿದ್ದಾರೆ. ಬಳಕೆದಾರರೊಬ್ಬರು ಜೀವನ ಎಷ್ಟು ಕಷ್ಟಕರ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಬರೆದಿದ್ದಾರೆ.