16 ಸೀಟರ್ ಜೀಪ್‌ನಲ್ಲಿ 60 ಮಂದಿ ಪ್ರಯಾಣ; ರಾಜಸ್ಥಾನದ ವಿಡಿಯೊ ವೈರಲ್
16 ಆಸನಗಳ ಜೀಪಿನಲ್ಲಿ ಪ್ರಯಾಣಿಸುವ ಮೂಲಕ 60 ಪ್ರಯಾಣಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೊ ವೈರಲ್ ಆಗಿದೆ. ರಾಜಸ್ಥಾನದ ಬನ್‌ಸ್ವಾರ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಕೇವಲ 16 ಜನರಿಗೆ ಕೂರಲು ವ್ಯವಸ್ಥೆ ಇರುವ ಸಣ್ಣ ಜೀಪಿನಲ್ಲಿ 60 ಮಂದಿ ಪ್ರಯಾಣಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರಯಾಣಿಸಿದ್ದಾರೆ.
16 ಸೀಟರ್ ಜೀಪಿನಲ್ಲಿ 60 ಮಂದಿ ಪ್ರಯಾಣಿಕರು -
ಜೈಪುರ, ಜ. 11: ಇತ್ತೀಚೆಗೆ ವಾಹನ ಚಾಲನೆ ಮಾಡುವಾಗ ನಿಯಮಗಳನ್ನು ಉಲ್ಲಂಘನೆ ಮಾಡುವ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸೀಟ್ ಬೆಲ್ಟ್ ಹಾಕದಿರುವುದು, ಫೋನ್ ಬಳಸುವುದು, ಅತಿಯಾದ ವೇಗ, ಡ್ರಂಕ್ ಆ್ಯಂಡ್ ಡ್ರೈವ್ ಇತ್ಯಾದಿ ನಿಯಮ ಉಲ್ಲಂಘನೆ ಮಾಡುವವರು ಇದ್ದಾರೆ. 16 ಆಸನಗಳ ಜೀಪ್‌ನಲ್ಲಿ ಪ್ರಯಾಣಿಸುವ ಮೂಲಕ 60 ಪ್ರಯಾಣಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೊ ವೈರಲ್ (Viral Video) ಆಗಿದೆ. ರಾಜಸ್ಥಾನದ ಬನ್‌ಸ್ವಾರ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಕೇವಲ 16 ಜನರಿಗೆ ಕೂರಲು ವ್ಯವಸ್ಥೆ ಇರುವ ಸಣ್ಣ ಜೀಪ್‌ನಲ್ಲಿ 60 ಮಂದಿ ಪ್ರಯಾಣಿಸಿದ್ದು, ಹಲವರು ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಆನಂದಪುರಿ ಪ್ರದೇಶದಲ್ಲಿ ಈ ದೃಶ್ಯ ಕಂಡುಬಂದಿದ್ದು, ಜೀಪಿನ ಒಳಭಾಗ ಮಾತ್ರವಲ್ಲದೆ ಬಾನೆಟ್, ಛಾವಣಿ ಮತ್ತು ಬಾಗಿಲಲ್ಲಿ ಪ್ರಯಾಣಿಕರು ನೇತಾಡುತ್ತಿರುವುದು ಕಂಡು ಬಂದಿದೆ. ಜೀಪಿನಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಕೂಡ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲದೆ ಈ ಜೀಪ್ ಅತೀ ವೇಗವಾಗಿ ಸಾಗಿದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ದೊಡ್ಡ ಅಪಾಯ ಉಂಟಾಗುವ ಸಾಧ್ಯತೆ ಇತ್ತು.
ವಿಡಿಯೊ ನೋಡಿ:
राजस्थान के बांसवाड़ा के आनंदपुरी में बसों की कमी के कारण 16 सीटर जीप में करीब 60 लोग जान जोखिम में डालकर सफर करते नजर आए।
— Webdunia Hindi (@WebduniaHindi) January 10, 2026
वीडियो वायरल होने के बाद परिवहन विभाग ने कार्रवाई करते हुए ओवरलोड वाहनों के चालान किए।#rajasthan #TrendingNow pic.twitter.com/H17H4dQbZC
ಈ ದೃಶ್ಯವು ಟ್ರಕ್‌ಗೆ ಹುಲ್ಲು ತುಂಬಿಸುತ್ತಿರುವಂತೆ ಕಾಣುತ್ತದೆ. ಜೀಪ್ ತುಂಬಾ ಜನದಟ್ಟಣೆಯಿಂದ ಕೂಡಿದ್ದು, ಚಾಲಕನಿಗೆ ಮುಂಭಾಗದ ವಿಂಡ್‌ಸ್ಕ್ರೀನ್ ಮೂಲಕ ಮಾತ್ರ ಗೋಚರವಾಗುತ್ತಿತ್ತು.ಈ ಭಾಗದಲ್ಲಿ ಹೆಚ್ಚು ಜನರಿರುವ ಪ್ರದೇಶವಾಗಿದ್ದು, ಇಲ್ಲಿ ಸರಿಯಾದ ಸರ್ಕಾರಿ ಬಸ್ ಅಥವಾ ಸಾರಿಗೆ ವ್ಯವಸ್ಥೆ ಇಲ್ಲ ಎಂಬುದು ಸ್ಥಳೀಯರು ಈ ಬಗ್ಗೆ ದೂರು ನೀಡಿದ್ದಾರೆ.
ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಪೋಸ್ಟ್ ವೈರಲ್!
ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದಾರೆ. ನಿಯಮ ಮೀರಿ ಜನರನ್ನು ತುಂಬಿಸಿಕೊಂಡಿದ್ದ ವಾಹನಗಳಿಗೆ ಭಾರಿ ಮೊತ್ತದ ದಂಡ ಕೂಡ ವಿಧಿಸಿದ್ದಾರೆ. ನೆಟ್ಟಿಗರು ಕೂಡ ಈ ವಿಡಿಯೊ ಬಗ್ಗೆ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಸಾರಿಗೆ ಸೌಲಭ್ಯಗಳ ಕೊರ ತೆಯೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಜನರ ಪ್ರಾಣದ ಜತೆ ಈ ರೀತಿ ಆಟವಾಡುವುದು ತಪ್ಪು ಎಂದು ಹೇಳಿದ್ದಾರೆ.