ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸಾವು; ದೇಹದ ಮೇಲೆ ಗಾಯವೂ ಇಲ್ಲ... ಸ್ಥಳದಲ್ಲಿ ರಕ್ತದ ಕಲೆಗಳೂ ಇಲ್ಲ!

Jaipur Self Harming News: ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬಳು ಶಾಲಾ‌ ಮಹಡಿಯಿಂದ ಹಾರಿ ಸಾವನಪ್ಪಿದ್ದ ಘಟನೆ ಜೈಪುರದಲ್ಲಿ ನಡೆದಿದೆ‌. 9 ವರ್ಷದ ಬಾಲಕಿಯು ನಾಲ್ಕನೇ ಮಹಡಿಯಿಂದ ಹಾರಿ ನವೆಂಬರ್ 1ರಂದು ಸಾವನ್ನಪ್ಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆ ಸಾವನಪ್ಪಿದ್ದ ದೃಶ್ಯಗಳು ಸೆರೆಯಾಗಿದ್ದು ಬಾಲಕಿ ಕಂಬಿ ಬೇಲಿಯನ್ನು ಹತ್ತಿ ಜಿಗಿಯುತ್ತಿರುವ ದೃಶ್ಯ ಕಂಡುಬಂದಿದೆ. ಮಹಡಿಯಿಂದ 47 ಅಡಿ ಎತ್ತರದಿಂದ ಬಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಅಮಾರಿಯಾಳನ್ನು ತಕ್ಷಣ ಪಕ್ಕದ ಆಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಹೊರಡುವ ಮೊದಲೇ ಆಕೆ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದನ್ನು ವೈದ್ಯರು ತಿಳಿಸಿದ್ದಾರೆ..

ನಾಲ್ಕನೆ ಮಹಡಿಯಿಂದ ಬಿದ್ದ ಬಾಲಕಿ- ಸಾವಿನ ಬಗ್ಗೆ ಹಲವು ಶಂಕೆ

ಮಹಡಿಯಿಂದ ಹಾರಿದ 9ರ ಬಾಲಕಿ ಸಾವು -

Profile Pushpa Kumari Nov 2, 2025 2:34 PM

ಜೈಪುರ: ಇತ್ತೀಚಿನ ದಿನದಲ್ಲಿ ಚಿಕ್ಕಮಕ್ಕಳು ಸಣ್ಣ ಪುಟ್ಟ ಕಾರಣಕ್ಕೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಿದೆ. ಅಂತೆಯೇ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬಳು ಶಾಲಾ‌ ಮಹಡಿಯಿಂದ ಹಾರಿ ಸಾವನಪ್ಪಿದ್ದ ಘಟನೆ ಜೈಪುರದಲ್ಲಿ (Jaipur) ನಡೆದಿದೆ‌. 9 ವರ್ಷದ ಬಾಲಕಿಯು ನಾಲ್ಕನೇ ಮಹಡಿಯಿಂದ ಹಾರಿ ನವೆಂಬರ್ 1ರಂದು ಆತ್ಮಹತ್ಯೆ(Self Harming Case) ಮಾಡಿಕೊಂಡಿದ್ದಾಳೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆ ಸಾವನಪ್ಪಿದ್ದ ದೃಶ್ಯಗಳು ಸೆರೆಯಾಗಿದ್ದು ಬಾಲಕಿ ಕಂಬಿಬೇಲಿಯನ್ನು ಹತ್ತಿ ಜಿಗಿಯುತ್ತಿರುವ ದೃಶ್ಯ ಕಂಡುಬಂದಿದೆ. ನಾಲ್ಕನೇ ಮಹಡಿಯಿಂದ ಹಾರಿ ಆ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದರೂ ಘಟನಾ ಸ್ಥಳದಲ್ಲಿ ಯಾವುದೇ ರಕ್ತದ ಕಲೆಗಳು, ಗಾಯದ ಗುರುತುಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಇದೀಗ ಎಡೆಮಾಡಿದೆ.

ನೀರ್ಜಾ ಮೋದಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಮಹಡಿಯಿಂದ 47 ಅಡಿ ಎತ್ತರದಿಂದ ಬಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಅಮಾರಿಯಾಳನ್ನು ತಕ್ಷಣ ಪಕ್ಕದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಹೊರಡುವ ಮೊದಲೇ ಆಕೆ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದನ್ನು ವೈದ್ಯರು ತಿಳಿಸಿದ್ದಾರೆ.. ಸಾವಿಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಮಾನಸ ಸರೋವರ ಠಾಣಾಧಿಖಾರಿ ಲಖನ್ ಕಠಾನಾ ಹೇಳಿದ್ದಾರೆ.

ವಿಡಿಯೊ ಇಲ್ಲಿದೆ



ಇದನ್ನೂ ಓದಿ:Viral News: ಬಾತ್‍ರೂಮ್‍ ಬಾಗಿಲು ತೆರೆಯಲು ಸಾಧ್ಯವಾಗದೆ ಮಕ್ಕಳು ಸಿಕ್ಕಿಬಿದ್ದರೆ ಹೀಗೆ ಮಾಡಿ; ರಕ್ಷಣಾ ಕಾರ್ಯಾಚರಣೆಯನ್ನು ರೆಕಾರ್ಡ್ ಮಾಡಿದ ತಾಯಿ

ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಬಾಲಕಿ ಬಿದ್ದಿದ್ದ ಜಾಗದಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ ಹೀಗಾಗಿ ಇದು ಕೊಲೆಯಾಗಿರಬಹುದು ಎಂದು ಕೂಡ ಪೊಲೀಸರು ಶಂಕಿಸಿದ್ದಾರೆ. ಅಧಿ ಕಾರಿಗಳು ಶಾಲೆಗೆ ಬರುವ ಮೊದಲೇ ಬಾಲಕಿ ಬಿದ್ದಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದ್ದು, ಯಾವುದೇ ರಕ್ತದ ಕಲೆಗಳು ಕಾಣಿಸುತ್ತಿರಲಿಲ್ಲ. ಹೀಗಾಗಿ ಇದು ಅನುಮಾನಾಸ್ಪದ ಸಾವು ಎಂದು ಆರೋಪಿಸಿ ಬಾಲಕಿಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ನೀರ್ಜಾ ಶಾಲಾ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹೊಸ ಅನುಮಾನ ಹುಟ್ಟು ಹಾಕುವಂತೆ ಮಾಡಿದೆ. ಶಾಲಾ ಆಡಳಿತ ಮಂಡಳಿ ಇದ್ದೂ ಕೂಡ ಮಕ್ಕಳನ್ನು ಬೇಜವಬ್ದಾರಿಯುತವಾಗಿ ನಡೆಸಿಕೊಂಡಿದ್ದಾರೆ. ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಕೇಳಿದರೂ ಯಾವುದೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಬಾಲಕಿಯ ಪೋಷಕರು ತಮ್ಮ ದೂರಿನಲ್ಲಿ ಅನುಮಾನಸ್ಪದ ಸಾವು ಎಂಬ ಶಂಕೆಯನ್ನು ಉಲ್ಲೇಖಿಸಿದ್ದಾರೆ. ಮೃತ ಬಾಲಿಕಿಯು ಪೋಷಕರಿಗೆ ಅವಳೊಬ್ಬಳೇ ಮಗಳು ಎಂದು ಕೂಡ ತಿಳಿದು ಬಂದಿದೆ. ಆಕೆಯ ತಾಯಿ ಬ್ಯಾಂಕಿನಲ್ಲಿ ಮತ್ತು ಆಕೆಯ ತಂದೆ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ತಮ್ಮ ಒಬ್ಬಳೆ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಅವರಿದ್ದಾರೆ..