ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬಾತ್‍ರೂಮ್‍ ಬಾಗಿಲು ತೆರೆಯಲು ಸಾಧ್ಯವಾಗದೆ ಮಕ್ಕಳು ಸಿಕ್ಕಿಬಿದ್ದರೆ ಹೀಗೆ ಮಾಡಿ; ರಕ್ಷಣಾ ಕಾರ್ಯಾಚರಣೆಯನ್ನು ರೆಕಾರ್ಡ್ ಮಾಡಿದ ತಾಯಿ

Boy Gets Trapped in Bathroom: ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆಗಳನ್ನು ಪಡೆಯಲು ಅನೇಕರು ವಿಪರೀತ ಸಾಹಸಗಳು, ಅಪಾಯಕಾರಿ ಸವಾಲುಗಳ ರೀಲ್ಸ್‌ಗಳು ಮಾಡುತ್ತಿರುತ್ತಾರೆ. ಖ್ಯಾತಿಯನ್ನು ಪಡೆಯುವ ಸಲುವಾಗಿ ಅನೇಕರು ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ರೀಲ್ಸ್ ಮಾಡುತ್ತಾರೆ. ಬಹಳಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಕೂಡ. ಮಹಿಳೆಯೊಬ್ಬಳ ಮಗ ಬಾತ್‌ರೂಮ್‌ನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದ. ಆದರೆ ಬಳಿಕ ತೆಗೆಯಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದ. ನೆರೆಹೊರೆಯವರನ್ನು ಕರೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ದೃಶ್ಯವನ್ನು ಬಾಲಕನ ತಾಯಿ ಚಿತ್ರೀಕರಿಸಿದ್ದಾರೆ.

ಬಾತ್‍ರೂಮ್‍ ಬಾಗಿಲು ತೆರೆಯಲು ಸಾಧ್ಯವಾಗದೆ ಸಿಕ್ಕಿಬಿದ್ದ ಬಾಲಕ

-

Priyanka P Priyanka P Nov 1, 2025 9:03 PM

ದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ (Social media) ವೀಕ್ಷಣೆಗಳನ್ನು ಪಡೆಯಲು ವಿಪರೀತ ಸಾಹಸಗಳು, ಅಪಾಯಕಾರಿ ಸವಾಲುಗಳು ಅಥವಾ ಅನೈತಿಕ ನಡವಳಿಕೆಯನ್ನು ಪ್ರಯತ್ನಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಯುವತಿಯನ್ನು ಬೈಕ್‌ನ ಹಿಂದೆ ಕೂರಿಸಿ ವ್ಹೀಲಿಂಗ್ ಮಾಡಲು ಹೋಗಿ ರಸ್ತೆಯಲ್ಲೇ ಬಿದ್ದಿರುವ ಘಟನೆಯ ವಿಡಿಯೊವೊಂದು ವೈರಲ್ ಆಗಿತ್ತು. ಇದಗ ಆಕಸ್ಮಿಕವಾಗಿ ಮಕ್ಕಳು ಬಾತ್‌ರೂಮ್‌ನೊಳಗೆ ಸಿಕ್ಕಿ ಹಾಕಿಕೊಂಡರೆ ಅವರನ್ನು ಹೇಗೆ ರಕ್ಷಿಸಬೇಕು ಎಂದು ವಿವರಿಸುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಾಲಕನೊಬ್ಬ ಆಕಸ್ಮಿಕವಾಗಿ ಬಾತ್‌ರೂಮ್‌ ಒಳಗೆ ಲಾಕ್ ಆಗಿದ್ದ. ಈ ವೇಳೆ ಬಾಲಕನನ್ನು ರಕ್ಷಿಸುವ ದೃಶ್ಯದ ಚಿತ್ರೀಕರಣವನ್ನು ತಾಯಿಯು ರೆಕಾರ್ಡ್ ಮಾಡಿದ್ದಾರೆ (Viral News). ಸದ್ಯ ಈ ವಿಡಿಯೊ ಗಮನ ಸೆಳೆಯುತ್ತಿದೆ.

ವೈರಲ್‌ ವಿಡಿಯೊದಲ್ಲಿ ಘಟನೆಯನ್ನು ವಿವರವಾಗಿ ಸೆರೆ ಹಿಡಿಯಲಾಗಿದೆ. ಮಹಿಳೆಯೊಬ್ಬಳ ಮಗ ಬಾತ್‌ರೂಮ್‌ನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದ. ಆದರೆ ತೆಗೆಯಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದ. ಆಕೆ ಪದೇ ಪದೆ ಸೂಚನೆ ನೀಡಿದರೂ ಬಾಗಿಲನ್ನು ತೆರೆಯಲು ಸಾಧ್ಯವಾಗಿಲ್ಲ. ʼʼಮಗ ಆಕಸ್ಮಿಕವಾಗಿ ಸ್ನಾನಗೃಹದೊಳಗೆ ಲಾಕ್ ಆಗಿ, ನಿರಂತರವಾಗಿ ಅತ್ತಿದ್ದಾನೆ. ಅವನು ಭಯಭೀತನಾಗಿದ್ದಾನೆ. ನನಗೂ ಸಹ ಏನು ಮಾಡಬೇಕೆಂದು ತಿಳಿಯಲಿಲ್ಲ. ನಂತರ ನಾನು ನೆರೆಹೊರೆಯವರಿಗೆ ಕರೆ ಮಾಡಿದೆʼʼ ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: Viral News: ಮುಟ್ಟಾಗಿದ್ದೀರಾ ಎಂದು ನಂಬಲು ಪ್ಯಾಡ್‌ ಫೋಟೋ ಕಳುಹಿಸಿ; ಛೀ.. ಮಹಿಳಾ ಸಿಬ್ಬಂದಿಗೆ ಇದೆಂತಾ ಕಿರುಕುಳ

ಮುಂದೆ ವಿಡಿಯೊದಲ್ಲಿ ನೆರೆಹೊರೆಯವರು ಏಣಿ ಮತ್ತು ರಾಡ್‌ ಹಿಡಿದು ಬರುತ್ತಿರುವುದು ಸೆರೆಯಾಗಿದೆ. ಸ್ನಾನಗೃಹವು ಟೆರೇಸ್‌ನ ಹತ್ತಿರದಲ್ಲಿರುವುದರಿಂದ ಅವರು ಹತ್ತಿರದ ಗೋಡೆಯನ್ನು ಹತ್ತಿ, ರಾಡ್ ಅನ್ನು ಕಿಟಕಿಯ ಮೂಲಕ ಹಾಕಿ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು.



ಈ ಹಿಂದೆ ಚಲಿಸುವ ರೈಲಿನ ಅಂಚಿನಲ್ಲಿ ನಿಂತು ರೀಲ್ ರೆಕಾರ್ಡ್ ಮಾಡುವ ಯುವತಿಯೊಬ್ಬಳ ವಿಡಿಯೊ ನೆಟ್ಟಿಗರ ಗಮನ ಸೆಳೆದಿತ್ತು. ಮತ್ತೊಂದೆಡೆ, ತನ್ನ ಮಗಳು ಇಂತಹ ಅಸುರಕ್ಷಿತ ಚಟುವಟಿಕೆಯಲ್ಲಿ ತೊಡಗಿರುವುದನ್ನು ನೋಡಿ ಆಕೆಯ ತಾಯಿ ಆಕ್ರೋಶಗೊಂಡು ಹಲವು ಬಾರಿ ಕಪಾಳಮೋಕ್ಷ ಮಾಡಿದ್ದರು.

ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಕೊಲೆ ಮಾಡಿದ್ದ ಪತಿ

ಪತ್ನಿಯ ರೀಲ್ಸ್​ ಹುಚ್ಚಾಟ್ಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆಕೆಯನ್ನು ಭೀಕರವಾಗಿ ಹೊಡೆದು ಕೊಂದಿರುವ ಘಟನೆ ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿತ್ತು. ದೆಹಲಿಯ ನಜಾಫ್‌ಗಢದಲ್ಲಿ 35 ವರ್ಷದ ಇ-ರಿಕ್ಷಾ ಚಾಲಕ ಅಮನ್ ಎಂಬಾತ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಪತ್ನಿ ಜತೆ ಆಗಾಗ ಜಗಳವಾಡುತ್ತಿದ್ದ. ಪತ್ನಿಯನ್ನು ಕೊಲೆ ಮಾಡಿದ ನಂತರ ಆತ ಸ್ಕಾರ್ಫ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಇದನ್ನೂ ಓದಿ: Bangladesh National Anthem: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ: ಬಿಜೆಪಿಯಿಂದ ತರಾಟೆ

ಅಮನ್ ಆಕೆಯ ಪೋಸ್ಟ್‌ಗಳಿಗೆ ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದ, ಈ ವಿಷಯದಲ್ಲಿ ಈ ಹಿಂದೆಯೂ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಅಮನ್ ತನ್ನ ಪತ್ನಿಯನ್ನು ಕುತ್ತಿಗೆ ಬಿಗಿದು ಕೊಂದಿದ್ದಾನೆ. ನಂತರ ಆತ ವಿಷ ಸೇವಿಸಿ, ಸ್ಕಾರ್ಫ್‌ನಿಂದ ನೇಣು ಬಿಗಿದುಕೊಂಡಿದ್ದಾನೆ. ಆದರೆ ಸ್ಕಾರ್ಫ್ ಕಿತ್ತುಕೊಂಡಾಗ, ಆತ ನಾನು ನನ್ನ ಪತ್ನಿಯನ್ನು ಕೊಂದಿದ್ದೇನೆ ಎಂದು ಕೂಗುತ್ತಾ ಹೊರಗೆ ಓಡಿದ್ದಾನೆ. ಇದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು.