ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರೀತಿ ಎಂದರೆ ಇದು: ಪತ್ನಿಗಾಗಿ ಇಡ್ಲಿ ತಯಾರಿಸಿದ ಇಂಗ್ಲೆಂಡ್‌ ಪತಿ; ಇವರಿಬ್ಬರ ಲವ್‌ ನೋಡಿ ನೆಟ್ಟಿಗರು ಹೇಳಿದ್ದೇನು?

ಇಂಗ್ಲೆಂಡ್‌ ಮೂಲದ ಪತಿ ತನ್ನ ಭಾರತೀಯ ಪತ್ನಿಗಾಗಿ ಅಡುಗೆ ಮಾಡಿದ್ದಾನೆ. ಆತ ಯುರೋಪಿಯನ್ ಭಕ್ಷ್ಯಗಳನ್ನು ತಯಾರಿಸುವ ಬದಲು, ದೇಸಿ ಶೈಲಿಯಲ್ಲಿ ಇಡ್ಲಿ, ಚಟ್ನಿ ಮತ್ತು ಮಸಾಲಾ ಟೀ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಭಾರತೀಯ ಪತ್ನಿಗಾಗಿ ಇಡ್ಲಿ ತಯಾರಿಸಿದ ವಿದೇಶಿ ಪತಿ

Profile pavithra May 21, 2025 3:54 PM

ಲಂಡನ್: ಈ ಹಿಂದೆ ಮಹಿಳೆಯೊಬ್ಬಳು 77,000 ರೂ.ಕ್ಕಿಂತ ಹೆಚ್ಚು ಮೌಲ್ಯದ ಕೀಚೈನ್ ಖರೀದಿಸಿದ ಬಗ್ಗೆ ಪತಿ ತಮಾಷೆ ಮಾಡಿದ ವಿಡಿಯೊ ವೈರಲ್ ಆಗಿತ್ತು. ಅದೇ ದಂಪತಿ ಈ ಬಾರಿ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಅವರ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಇಂಗ್ಲೆಂಡ್‌ ಮೂಲದ ಪತಿ ತನ್ನ ಭಾರತೀಯ ಪತ್ನಿಗಾಗಿ ಅಡುಗೆ ಮಾಡಿದ್ದಾನೆ. ಆದರೆ ಇಲ್ಲಿ ಆತ ಯುರೋಪಿಯನ್ ಭಕ್ಷ್ಯಗಳನ್ನು ತಯಾರಿಸುವ ಬದಲು, ದೇಸಿ ಶೈಲಿಯಲ್ಲಿ ಅಡುಗೆ ಮಾಡಿದ್ದಾನೆ. ಈ ವಿಡಿಯೊ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಆತ ಮೃದುವಾದ ಇಡ್ಲಿ, ಚಟ್ನಿ ಮತ್ತು ಒಂದು ಕಪ್ ಮಸಾಲಾ ಚಾಯ್‌ನೊಂದಿಗೆ ದಕ್ಷಿಣ ಭಾರತದ ಉಪಹಾರವನ್ನು ಮಾಡುವುದು ಸೆರೆಯಾಗಿದೆ. ಮೊದಲಿಗೆ ಅವನು ಪ್ಯಾನ್‌ನಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ತಾಜಾ ಕರಿಬೇವಿನ ಎಲೆಗಳನ್ನು ಹಾಕಿ, ನಂತರ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿಗಳು ಮತ್ತು ಟೊಮೆಟೊಗಳನ್ನು ಸೇರಿಸಿದ್ದಾನೆ. ಕೆಲವು ಸೆಕೆಂಡುಗಳ ನಂತರ, ಅವನು ಇಡ್ಲಿ ಹಿಟ್ಟನ್ನು ಎಣ್ಣೆ ಹಚ್ಚಿದ ಅಚ್ಚುಗಳಿಗೆ ಹಾಕಿ ಅದನ್ನು ಸ್ಟೀಮರ್‌ನಲ್ಲಿ ಇರಿಸಿದ್ದಾನೆ. ಇಡ್ಲಿಗಳು ಬೇಯುತ್ತಿರುವಾಗ, ಅವನು ಟೊಮೆಟೊ ಹಾಗೂ ಕಡಲೆಬೀಜ ಬೆರೆಸಿ ರುಚಿಕರವಾದ ಚಟ್ನಿಯನ್ನು ತಯಾರಿಸಿದ್ದಾನೆ.

ವಿಡಿಯೊ ನೋಡಿ...

ನಂತರ ಅವನು ತನ್ನ ಪತ್ನಿಗಾಗಿ ಚಾಯ್ ಕೂಡ ತಯಾರಿಸಿದ್ದಾನೆ. ಬಿಸಿ ನೀರಿಗೆ ಟೀ ಬ್ಯಾಗ್‌ಗಳನ್ನು ಸೇರಿಸಿ ಶುಂಠಿಯನ್ನು ಕುಟ್ಟಾಣಿಯಿಂದ ಜಜ್ಜಿ ಅದಕ್ಕೆ ಹಾಕಿದ್ದಾನೆ. ಕೊನೆಗೆ ಅದಕ್ಕೆ ಹಾಲನ್ನು ಸೇರಿಸಿದ್ದಾನೆ. ಅವನು ಇಡ್ಲಿ ಮತ್ತು ಚಟ್ನಿಯನ್ನು ಒಂದು ತಟ್ಟೆಯಲ್ಲಿ ಹಾಕಿ ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ತನ್ನ ಪತ್ನಿಯ ಬಳಿಗೆ ಹೋಗಿ ನಗುತ್ತಾ ಬಿಸಿ ಚಹಾ ಕಪ್ ಅನ್ನು ಮತ್ತು ತಿಂಡಿಯ ಪ್ಲೇಟ್ ಅನ್ನು ಅವಳಿಗೆ ಕೊಟ್ಟಿದ್ದಾನೆ. ಅವಳು ಅದನ್ನು ತಿಂದು ಬಹಳ ರುಚಿಕರವಾಗಿದೆ ಎಂದು ಹೇಳಿದ್ದಾಳೆ.

ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಒಬ್ಬರು, "ಛೀ. ಅವನು ಪ್ರತಿಯೊಬ್ಬ ಭಾರತೀಯ ಗಂಡನೂ ನಾಚಿಕೆಪಡುವಂತೆ ಮಾಡಿದ್ದಾನೆ" ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೊ 35,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ:Viral Video: ಜಿಪ್‍ಲೈನ್ ಮಾಡುವಾಗ ಕೆಳಗೆ ಉರುಳಿ ಬಿದ್ದ ಪುರೋಹಿತ; ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಈ ಹಿಂದೆ ಇದೇ ದಂಪತಿ ಒಂದು ಕೀಚೈನ್‍ ವಿಚಾರಕ್ಕೆ ವೈರಲ್ ಆಗಿದ್ದರು. ಇದರಲ್ಲಿ ಪತ್ನಿ ತನ್ನ ಪತಿಗೆ ನೀಡಲು ಬೆಕ್ಕಿನ ಆಕಾರದ ಕೀಚೈನ್‍ಗಾಗಿ 77,000 ರೂ.ಗಳನ್ನು (ಸುಮಾರು 700 ಪೌಂಡ್) ಖರ್ಚು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಕೇವಲ ಒಂದು ಕೀಚೈನ್‍ಗಾಗಿ ಅಷ್ಟೊಂದು ಹಣ ಖರ್ಚು ಮಾಡಿದ್ದಕ್ಕೆ ಪತಿ ಶಾಕ್ ಆಗಿದ್ದನು. ಈ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.