ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Untouchability: ಗ್ರಾಮದೇವತೆಯ ಮೆರವಣಿಗೆಯಲ್ಲಿ ಅಸ್ಪೃಶ್ಯತೆ ಆಚರಣೆ: ಗ್ರಾಮದಲ್ಲಿ ಬಿಗುವಿನ ವಾತಾವರಣ

ತಾಲೂಕಿನ ಆನೆಮೊಡುಗು ಕೊತ್ತೂರು ಗ್ರಾಮದಲ್ಲಿಯೇ ಈ ಘಟನೆ ನಡೆದಿದೆ. ಘಟನೆಯ ಮಾಹಿತಿ ಪಡೆದ ಕೂಡಲೇ ತಹಶೀಲ್ದಾರ್ ರಶ್ಮಿ, ಇಒ ಮಂಜುನಾಥ್ ಎಎಸ್ಪಿ ಜಗನ್ನಾಥ ರೈ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು ಶಾಂತಿ ಸಭೆ ಏರ್ಪಡಿಸಿ ಕಲಹ ತಿಳಿಯಾಗುವಂತೆ ಮಾಡಿದ್ದಾರೆ.

ಗ್ರಾಮದೇವತೆಯ ಮೆರವಣಿಗೆಯಲ್ಲಿ ಅಸ್ಪೃಶ್ಯತೆ ಆಚರಣೆ

ಗ್ರಾಮದೇವತೆ ಮೆರವಣಿಗೆ ಸಂದರ್ಭದಲ್ಲಿ ಸವರ್ಣಿಯರು ಮತ್ತು ದಲಿತರ ನಡುವೆ ನಡೆದ ಮಾತಿನ ಚಕಮಕಿ ಘರ್ಷಣೆಯ ಸ್ವರೂಪ ಪಡೆದಿದ್ದು ಜಾತಿನಿಂಧನೆ ಅಸ್ಪೃಷ್ಯತಾಚರಣೆ ನಡೆದಿದೆ ಎಂದು ಆರೋಪಿಸಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. -

Ashok Nayak
Ashok Nayak Jan 19, 2026 11:30 PM

ಚಿಕ್ಕಬಳ್ಳಾಪುರ: ಗ್ರಾಮದೇವತೆ ಮೆರವಣಿಗೆ ಸಂದರ್ಭದಲ್ಲಿ ಸವರ್ಣಿಯರು ಮತ್ತು ದಲಿತರ ನಡುವೆ ನಡೆದ ಮಾತಿನ ಚಕಮಕಿ ಘರ್ಷಣೆಯ ಸ್ವರೂಪ ಪಡೆದಿದ್ದು ಜಾತಿನಿಂದನೆ ಅಸ್ಪೃಶ್ಯತಾ ಚರಣೆ ನಡೆದಿದೆ ಎಂದು ಆರೋಪಿಸಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ತಾಲೂಕಿನ ಆನೆಮೊಡುಗು ಕೊತ್ತೂರು ಗ್ರಾಮದಲ್ಲಿಯೇ ಈ ಘಟನೆ ನಡೆದಿದೆ. ಘಟನೆಯ ಮಾಹಿತಿ ಪಡೆದ ಕೂಡಲೇ ತಹಶೀಲ್ದಾರ್ ರಶ್ಮಿ, ಇಒ ಮಂಜುನಾಥ್ ಎಎಸ್ಪಿ ಜಗನ್ನಾಥರೈ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು ಶಾಂತಿ ಸಭೆ ಏರ್ಪಡಿಸಿ ಕಲಹ ತಿಳಿಯಾಗುವಂತೆ ಮಾಡಿದ್ದಾರೆ.

ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಪಹರೆ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Chikkaballapur News: ಯುವಶಕ್ತಿಯಲ್ಲಿ ಸೇವಾ ಮನೋಭಾವ ಜಾಗೃತವಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ : ಡಾ.ಟಿ.ಶ್ರೀನಿವಾಸಪ್ಪ ಅಭಿಮತ

ಏನಿದು ಘಟನೆ ?

ತಾಲೂಕಿನ ಆನೆಮೊಡಗು ಕೊತ್ತೂರು ಗ್ರಾಮದಲ್ಲಿ 80ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲಾ ಸಮುದಾಯದವರೂ ನೆಲೆಸಿದ್ದಾರೆ. ಇಲ್ಲಿರುವ ಮಾರಮ್ಮ ದೇವರ ಮೆರವಣಿಗೆ ಮಾಡಲು ನಿರ್ಧರಿಸಿ ಎಲ್ಲಾ ಮನೆಗಳಿಂದ ಸಮಾನವಾಗಿ ವಂತಿಗೆ ವಸೂಲಿ ಮಾಡಲಾಗಿತ್ತಂತೆ. ಆದರೆ ಉತ್ಸವ ಮೂರ್ತಿ ಯನ್ನು ಮೆರವಣಿಗೆ ಮಾಡುವಾಗ ದೇವರನ್ನು ನಾವೂ ಕೂಡ ಭುಜದ ಮೇಲೆ ಹೊರುತ್ತೇವೆ ಕೊಡಿ ಎಂದು ಕೇಳಿದ್ದಾರೆ.ಆಗ ಸವರ್ಣಿಯ ಯುವಕರ ಗುಂಪು ನೀವು ಅಸ್ಪೃಶ್ಯರು ದೇವರನ್ನು ಮುಟ್ಟಬೇಡಿ ಎಂದು ತಡೆಯುವ ಮೂಲಕ ದೌರ್ಜನ್ಯ ಎಸಗಿದ್ದಾರೆ.

cbpm13 anemodagu

ಇದನ್ನು ಪ್ರತಿಭಟಿಸಿದ ಕಾರಣ ಪರಸ್ಪರ ಘರ್ಷನೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ, ದೇವರನ್ನು ಬೀದಿಯಲ್ಲೇ ಇಡುವಂತಾಗಿದ್ದು ಪೊಲೀಸರು ಮತ್ತು ಅಧಿಕಾರಿಗಳ ಮಧ್ಯಪ್ರವೇಶದಿಂದ ದೇವರು ಗುಡಿ ಸೇರುವಂತಾಗಿದೆ ಎನ್ನಲಾಗಿದೆ.

ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ತಹಶಿಲ್ದಾರ್ ರಶ್ಮಿ ಗ್ರಾಮಸ್ಥರ ನಡುವೆ ಶಾಂತಿಸಭೆ ಏರ್ಪಡಿಸಿ ಅಸ್ಪೃಶ್ಯತಾಚರಣೆ ಮಾಡದಂತೆ ತಿಳಿವಳಿಕೆ ನೀಡಿದ್ದಾರೆ. ಮುಂದೆ ಇದೇ ಘಟನೆ ಮುಂದುವರೆದರೆ ಕಾನೂನು ಪ್ರಕಾರ ಕ್ರಮ ವಹಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದು ಪೊಲೀಸರು ಬೀಡು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.