ಚಿಮುಲ್ ಚುನಾವಣೆ: ಮೊದಲ ದಿನ 3 ಮಂದಿ ಉಮೇದುವಾರಿಕೆ ಸಲ್ಲಿಕೆ
ಜ.19 ರಿಂದ ಜ.22ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ಸೋಮವಾರ ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಕಾಮಗಾನಹಳ್ಳಿ ಹಾಲು ಉತ್ಪಾಧಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ,ಕೋಚಿಮುಲ್ ಮಾಜಿ ನಿರ್ದೇಶಕಿ ಸುನಂದಮ್ಮ, ಕೈವಾರ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಚಿಂತಾಮಣಿ ತಾಲೂಕು ಕೆಂಪದೇನಹಳ್ಳಿ ಹಾಲು ಉತ್ಪಾದಕರ ಸರಕಾರ ಸಂಘದ ಅಧ್ಯಕ್ಷರಾದ ಕೆ.ಎನ್. ಆವಲಪ್ಪ,ಚಿಂತಾಮಣಿ ತಾಲೂಕು ಪಾಲೇನಹಳ್ಳಿ ಹಾಲು ಉತ್ಪಾ ದಕರ ಸಂಘದ ಅಧ್ಯಕ್ಷ ದೇವರಾಜರೆಡ್ಡಿ ಸೇರಿದಂತೆ ಮೂವರು ಉಮೇದುವಾರಿಕೆ ಸಲ್ಲಿಸಿದ್ದಾರೆ
-
ಚಿಕ್ಕಬಳ್ಳಾಪುರ: ಫೆ.1ರಂದು ನಡೆಯುವ ಚಿಮುಲ್ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನ ಗಳ ಪೈಕಿ ಮೊದಲ ದಿನವಾದ ಸೋಮವಾರ ಮೂರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದ್ದಾರೆ.
ಜ.19 ರಿಂದ ಜ.22ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ಸೋಮವಾರ ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಕಾಮಗಾನಹಳ್ಳಿ ಹಾಲು ಉತ್ಪಾಧಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ,ಕೋಚಿಮುಲ್ ಮಾಜಿ ನಿರ್ದೇಶಕಿ ಸುನಂದಮ್ಮ, ಕೈವಾರ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಚಿಂತಾಮಣಿ ತಾಲೂಕು ಕೆಂಪದೇನಹಳ್ಳಿ ಹಾಲು ಉತ್ಪಾದಕರ ಸರಕಾರ ಸಂಘದ ಅಧ್ಯಕ್ಷರಾದ ಕೆ.ಎನ್. ಆವಲಪ್ಪ,ಚಿಂತಾಮಣಿ ತಾಲೂಕು ಪಾಲೇನಹಳ್ಳಿ ಹಾಲು ಉತ್ಪಾ ದಕರ ಸಂಘದ ಅಧ್ಯಕ್ಷ ದೇವರಾಜರೆಡ್ಡಿ ಸೇರಿದಂತೆ ಮೂವರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Chikkaballapur News: ಯುವಶಕ್ತಿಯಲ್ಲಿ ಸೇವಾ ಮನೋಭಾವ ಜಾಗೃತವಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ : ಡಾ.ಟಿ.ಶ್ರೀನಿವಾಸಪ್ಪ ಅಭಿಮತ
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮುಂಬರುವ 5 ವರ್ಷಗಳ ಆಡಳಿತದ ಅವಧಿಗೆ 13 ಕ್ಷೇತ್ರಗಳ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ರಾಜಕೀಯೇತರ ಸಹಕಾರಿ ಕ್ಷೇತ್ರದ ಒಕ್ಕೂಟದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿದ್ದು ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಕೊನೆ ದಿನವಾದ ಬುಧವಾರ ಕಾಂಗ್ರೆಸ್, ಜೆಡಿಎಸ್, ಬೆಂಬಲಿತ ಪ್ರಭಾವಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.