ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬೀದಿ ನಾಯಿಯನ್ನು ನಿರ್ದಯವಾಗಿ ಚರಂಡಿಗೆ ಎಸೆದ ವ್ಯಕ್ತಿ‌ ; ವಿಡಿಯೊ ವೈರಲ್

ಪಶ್ಚಿಮ ಬಂಗಾಳದ ಸಿಲಿಗುರಿಯ ದುರ್ಗಾ ನಗರದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ರಸ್ತೆ ಬದಿಯ ಚರಂಡಿಗೆ ನಿರ್ದಯವಾಗಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ಪ್ರಾಣಿಪ್ರಿಯರಿಂದ ಆಕ್ರೋಶ ವ್ಯಕ್ತವಾದ ನಂತರ ಆತ ತನ್ನ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದಾನೆ.

ಬೀದಿ ನಾಯಿಯನ್ನು ಚರಂಡಿಗೆ ಎಸೆದ ವ್ಯಕ್ತಿ- ಶಾಕಿಂಗ್‌ ವಿಡಿಯೊ ವೈರಲ್‌

ಸಾಂದರ್ಭಿಕ ಚಿತ್ರ

Profile pavithra Feb 13, 2025 2:07 PM

ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋತಿಗೆ ಆಹಾರದ ಆಸೆ ಹುಟ್ಟಿಸಿ ಚಪ್ಪಲಿಯಲ್ಲಿ ಏಟು ನೀಡಿರುವುದು, ಸಾಕುನಾಯಿಯನ್ನು ಒಂಟಿಯಾಗಿ ಬಿಟ್ಟುಹೋಗಿರುವುದು ಹೀಗೆ ಸಾಕಷ್ಟು ಪ್ರಕರಣಗಳು ನಡೆದಿವೆ. ಈಗ ಇಂತಹದೊಂದು ಕ್ರೌರ್ಯದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ರಸ್ತೆ ಬದಿಯ ಚರಂಡಿಗೆ ನಿರ್ದಯವಾಗಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ನಂತರ ಈ ಬಗ್ಗೆ ಆತ ಕ್ಷಮೆಯಾಚಿಸಿದ್ದಾನೆ.

ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ನಿರ್ದಯವಾಗಿ ಚರಂಡಿಗೆ ಎಸೆಯುವುದು ಸೆರೆಯಾಗಿದೆ. ನಾಯಿಯನ್ನು ಚರಂಡಿಗೆ ಎಸೆದ ನಂತರ, ಅವನು ಯಾವುದೇ ಬೇಸರವಿಲ್ಲದೇ ನಗುತ್ತಾ ಅಲ್ಲಿಂದ ಹೋಗುತ್ತಿರುವುದು ಸೆರೆಯಾಗಿದೆ.

ಮಾಹಿತಿ ಪ್ರಕಾರ, ಸಿಲಿಗುರಿಯ ದುರ್ಗಾ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆತ ಕೇವಲ 'ಮೋಜಿಗಾಗಿ' ನಾಯಿಯನ್ನು ಚರಂಡಿಗೆ ಎಸೆದಿದ್ದಾನೆ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಇದನ್ನು ನೋಡಿದ ಪ್ರಾಣಿ ಕಲ್ಯಾಣ ಸಂಘಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ನಾಯಿಯನ್ನು ಚರಂಡಿಗೆ ಎಸೆದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾಣಿ ಕಾರ್ಯಕರ್ತರ ದೂರಿನ ಆಧಾರದ ಮೇಲೆ ಎಫ್‍ಐಆರ್‌ ದಾಖಲಿಸಿದ ಪೊಲೀಸ್ ತಂಡವು ಪ್ರಕರಣದ ತನಿಖೆ ನಡೆಸಿದೆ ಎಂದು ವರದಿಯಾಗಿದೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಇದು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದೆ. ಮುಂಬೈ ಪೊಲೀಸ್ ಅಧಿಕಾರಿ ಸುಧೀರ್ ಕುಡಾಲ್ಕರ್ ಮತ್ತು ಮುಂಬೈನ ಸ್ಟ್ರೀಟ್ ಡಾಗ್ಸ್ ಸೇರಿದಂತೆ ಅನೇಕ ಪ್ರಾಣಿ ಪ್ರಿಯರು ಈ ಕ್ಲಿಪ್ ಅನ್ನು ಪೋಸ್ಟ್ ಮಾಡಿ ಪ್ರಾಣಿ ಕ್ರೌರ್ಯದಲ್ಲಿ ತೊಡಗಿದ್ದಕ್ಕಾಗಿ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಬೀದಿ ನಾಯಿಯ ಮೇಲೆ ಅತ್ಯಾಚಾರ ಎಸಗಿದ ನೀಚ; ವಿಡಿಯೊ ವೈರಲ್

ಪೆಟಾದ ಕಾನೂನು ಸಲಹೆಗಾರ ಮತ್ತು ಸಹಾಯಕ ನಿರ್ದೇಶಕ ಅಶರ್ ಮೀತ್, ನಾಯಿ ಚರಂಡಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಮತ್ತು ಅಪರಾಧಿಯು ಸಂಬಂಧಿತ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದಾನೆ ಎಂಬುದಾಗಿ ತಿಳಿಸಿದ್ದಾರೆ. ನಾಯಿಯನ್ನು ರಕ್ಷಿಸಲಾಗಿದೆ ಮತ್ತು ಈಗ ಸುರಕ್ಷಿತವಾಗಿದೆಎಂದು ಅವರು ತಿಳಿಸಿದ್ದಾರೆ. ಅಲ್ಲದೇ ವಿಡಿಯೊದಲ್ಲಿ, ಪ್ರಾಣಿಯನ್ನು ಚರಂಡಿಗೆ ಎಸೆದ ವ್ಯಕ್ತಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಮತ್ತು ಪ್ರಾಣಿ ಪ್ರಿಯರು, ಸಿಲಿಗುರಿ ನಿವಾಸಿಗಳು ಮತ್ತು ಇತರರಿಗೆ ಕ್ಷಮೆಯಾಚಿಸಿದ್ದಾನೆ. "ಕ್ಷಮಿಸಿ. ನನ್ನನು ಕ್ಷಮಿಸು. ಭವಿಷ್ಯದಲ್ಲಿ ನಾನು ಇಂತಹ ತಪ್ಪನ್ನು ಮಾಡುವುದಿಲ್ಲ" ಎಂದು ಅವನು ಹೇಳಿದ್ದಾನೆ.