ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಲಿಸುವ ಇ-ರಿಕ್ಷಾ ಮೇಲೆ ರಾಜನಂತೆ ಸವಾರಿ ಮಾಡಿದ ಡೋಗೇಶ್ ಭಾಯ್: ವಿಡಿಯೊ ನೋಡಿ

Viral Video: ಸಾಕು ಪ್ರಾಣಿಗಳ ಮುದ್ದಾದ ದೃಶ್ಯಗಳು ಹೆಚ್ಚಾಗಿ ಜನರ ಗಮನ ಸೆಳೆಯುತ್ತದೆ. ಇದೀಗ ಡೋಗೇಶ್ ಭಾಯ್ ನ ಅಪರೂಪದ ದೃಶ್ಯವೊಂದು ಭಾರೀ ವೈರಲ್ ಆಗಿದೆ.. ದೆಹಲಿಯ ರಸ್ತೆಯಲ್ಲಿ ಹೋಗುತ್ತಿರುವ ರಿಕ್ಷಾದ ಛಾವಣಿಯ ಮೇಲೆ ನಾಯಿಯೊಂದು ಅತ್ಯಂತ ಶಾಂತವಾಗಿ ಕುಳಿತು ಕ್ಯಾರೇ ಎನ್ನದೇ ಪ್ರಯಾಣಿಸುತ್ತಿದೆ. ನಾಯಿಯೂ ಅತ್ಯಂತ ಗತ್ತಿನಿಂದ ಸವಾರಿ ಮಾಡಿದ್ದು ಎಲ್ಲರನ್ನು ಆಶ್ಚರ್ಯ ಮೂಡಿಸುವಂತೆ ಮಾಡಿದೆ

ಚಲಿಸುವ ರಿಕ್ಷಾದ ಮೇಲೆ ಶಾಂತವಾಗಿ ಕುಳಿತ ನಾಯಿ: ವಿಡಿಯೊ ವೈರಲ್!

ಚಲಿಸುವ ರಿಕ್ಷಾದ ಮೇಲೆ ಶಾಂತವಾಗಿ ಕುಳಿತ ನಾಯಿ -

Profile
Pushpa Kumari Mar 2, 2026 6:46 PM

ನವದೆಹಲಿ,ಮಾ.2: ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪ್ರಾಣಿಗಳ ವಿಡಿಯೊ ವೈರಲ್ (Viral Video) ಆಗುತ್ತಿರುತ್ತವೆ. ಸಾಕು ಪ್ರಾಣಿಗಳ ಮುದ್ದಾದ ದೃಶ್ಯಗಳು ಹೆಚ್ಚಾಗಿ ಜನರ ಗಮನ ಸೆಳೆಯುತ್ತದೆ. ಇದೀಗ ಡೋಗೇಶ್ ಭಾಯ್ ನ ಅಪರೂಪದ ದೃಶ್ಯವೊಂದು ಭಾರೀ ವೈರಲ್ ಆಗಿದೆ.. ದೆಹಲಿಯ ರಸ್ತೆಯಲ್ಲಿ ಹೋಗುತ್ತಿರುವ ರಿಕ್ಷಾದ ಛಾವಣಿಯ ಮೇಲೆ ನಾಯಿಯೊಂದು ಅತ್ಯಂತ ಶಾಂತವಾಗಿ ಕುಳಿತು ಕ್ಯಾರೇ ಎನ್ನದೇ ಪ್ರಯಾಣಿಸುತ್ತಿದೆ. ನಾಯಿಯೂ ಅತ್ಯಂತ ಗತ್ತಿನಿಂದ ಸವಾರಿ ಮಾಡಿದ್ದು ಎಲ್ಲರನ್ನು ಆಶ್ಚರ್ಯ ಮೂಡಿಸುವಂತೆ ಮಾಡಿದೆ.

ವಾಹನವು ರಸ್ತೆಯಲ್ಲಿ ಚಲಿಸುವಾಗ ನಾಯಿಯೂ ಛಾವಣಿಯ ಮೇಲೆ ಕುಳಿತಿರುವುದನ್ನು ಕ್ಲಿಪ್ ತೋರಿಸುತ್ತದೆ. ಬೈಕ್‌ನಲ್ಲಿ ಹೋಗುತ್ತಿದ್ದ ದಾರಿಹೋಕನೊಬ್ಬ ಚಾಲಕನನ್ನು ಕರೆದು ನಾಯಿ ಯನ್ನು ಯಾಕೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಇದರಿಂದ ಖುಷಿಪಟ್ಟ ಚಾಲಕ, ಆ ನಾಯಿ ಪ್ರಯಾಣಕ್ಕೆ ಹಣ ಕೊಟ್ಟ ಗ್ರಾಹಕ ಎಂದು ತಮಾಷೆಯಾಗಿ ಪ್ರತಿಕ್ರಿಯಿಸುತ್ತಾನೆ.

ವಿಡಿಯೋ ನೋಡಿ:

ವೈರಲ್ ಆಗಿರುವ ದೃಶ್ಯದಲ್ಲಿ ವೇಗವಾಗಿ ಚಲಿಸುತ್ತಿರುವ ಎಲೆಕ್ಟ್ರಿಕ್ ರಿಕ್ಷಾದ ಮೇಲೆ ನಾಯಿ ಯೊಂದು ಯಾರ ಭಯವಿಲ್ಲದೆ ಭಾರೀ ಗತ್ತಿನಿಂದ ಕುಳಿತಿದೆ. ಆಟೋ ಮುಂದೆ ಚಲಿಸುವಾಗ ನಾಯಿ ಶಾಂತವಾಗಿ ಕುಳಿತಿರುವುದನ್ನು ದೃಶ್ಯಗಳು ತೋರಿಸುತ್ತವೆ. ಅದು ಚಡಪಡಿಸುವುದಿಲ್ಲ ಅಥವಾ ಭಯಭೀತರಾಗಿ ಕಾಣುವುದಿಲ್ಲ. ಆದರೆ ಈ ದೃಶ್ಯ ನೋಡಲು ತಮಾಷೆ ಯಾಗಿದ್ದರೂ, ಅನೇಕರು ಪ್ರಾಣಿ ದಯೆಯ ದೃಷ್ಟಿಯಿಂದ ಕಳವಳ ವ್ಯಕ್ತಪಡಿಸಿದ್ದಾರೆ.

Viral Video: ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ

ಈ ವಿಡಿಯೊಗೆ ಬಜೆಟ್ ಟೈಟ್, ವೈಬ್ಸ್ ಹೈ ಎಂದು ಶೀರ್ಷಿಕೆ ನೀಡಿ ಶೇರ್ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಕೆಲವರು ನಾಯಿಯನ್ನು “ಕ್ಯೂಟಿ” ಎಂದು ಕರೆದರೆ ಮತ್ತೊಬ್ಬರು ಪೈಸಾ ವಸೂಲ್ ಗ್ರಾಹಕ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದು ತಮಾಷೆಯಲ್ಲ. ಇದು ನಾಯಿಗೆ ತುಂಬಾ ಅಪಾಯಕಾರಿ ಹಾಗೂ ಅಪಘಾತಗಳಿಗೆ ಗುರಿಯಾಗಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಪುಣೆಯ ದಾಂಗೆ ಚೌಕ್ ಬಳಿ ಆಟೋ ರಿಕ್ಷಾದ ಮೇಲ್ಛಾವಣಿಯ ಮೇಲೆ ನಾಯಿಯೊಂದು ಸವಾರಿ ಮಾಡಿದ ವಿಡಿಯೊ ಕೂಡ ವೈರಲ್ ಆಗಿತ್ತು.