ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಫೋನ್‍ನಲ್ಲಿ ಮಾತಾಡ್ತಾ ಹೆತ್ತ ಕಂದಮ್ಮನನ್ನೇ ಮರೆತ ಮಹಾನ್‌ ತಾಯಿ! ಆಮೇಲೆ ಆಗಿದ್ದೇ ಬೇರೆ- ವಿಡಿಯೊ ನೋಡಿ

ಫೋನ್‍ನಲ್ಲಿ ಮಾತನಾಡುವುದರಲ್ಲೇ ಬ್ಯುಸಿಯಾದ ತಾಯಿಯೊಬ್ಬಳು ತನ್ನ ಮಗುವನ್ನು ಪಾರ್ಕಿನಲ್ಲಿಯೇ ಬಿಟ್ಟು ಬಂದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊ ಕಂಡು ನೆಟ್ಟಿಗರು ಶಾಕ್‌ ಆಗಿ ಬೇಜವಾಬ್ದಾರಿಯುತ ತಾಯಿ ಎಂದು ಕಿಡಿಕಾರಿದ್ದಾರೆ.

ಮೊಬೈಲ್ ಎಫೆಕ್ಟ್ ; ಮಗುವನ್ನೇ ಮರೆತ ಮಹಾತಾಯಿ!

Profile pavithra Mar 12, 2025 3:25 PM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್‍ ಜೀವನದ ಒಂದು ಅಂಗವಾಗಿ ಬಿಟ್ಟಿದೆ. ಈ ಪೋನ್‌ನಿಂದ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿವೆ. ಇತ್ತೀಚೆಗೆ ಅಂತಹದೊಂದು ಘಟನೆ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಗುವಿನ ಅಳು ಶಬ್ಧ ಕೇಳಿದ್ರೆ ಸಾಕು ತಾಯಿ ಎಲ್ಲಾ ಕೆಲಸ ಬಿಟ್ಟು ಓಡಿ ಬರುತ್ತಾಳೆ ಆದರೆ ಇಲ್ಲೊಬ್ಬಳು ಮಹಾನ್‌ ತಾಯಿ ಫೋನ್‌ನಲ್ಲಿಯೇ ಮಾತನಾಡುತ್ತಾ ಹೆತ್ತ ಕಂದಮ್ಮನನ್ನು ಪಾರ್ಕಿನಲ್ಲಿ ಬಿಟ್ಟು ಬಂದಿದ್ದಾಳೆ. ಈ ವಿಡಿಯೊ ನೋಡಿ ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ. ಆಕೆ ಬೇಜವಾಬ್ದಾರಿಯುತ ತಾಯಿ ಎಂದರೆ ಇನ್ನೊಬ್ಬರು ಮೊಬೈಲ್ ಎಫೆಕ್ಟ್ ಇದು ಎಂದು ಕಿಡಿಕಾರಿದ್ದಾರೆ. 'ಘರ್ ಕೆ ಕಾಲೇಶ್' ಎಂಬ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಈ ವಿಡಿಯೊದಲ್ಲಿ ಮಹಿಳೆಯೊಬ್ಬಳು ಫೋನ್‍ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುವುದು ಸೆರೆಹಿಡಿಯಲಾಗಿದೆ. ನಂತರ ಒಬ್ಬ ವ್ಯಕ್ತಿ ಮಗುವನ್ನು ಎತ್ತಿಕೊಂಡು ಆಕೆಯನ್ನು ಕರೆಯುತ್ತಾ ಅವಳ ಹಿಂದೆ ಬಂದಿದ್ದಾನೆ. ಆ ವ್ಯಕ್ತಿ ಅವಳನ್ನು "ಮೇಡಂ, ಮೇಡಂ" ಎಂದು ಜೋರಾಗಿ ಕರೆಯುತ್ತಾ ಅವಳ ಹತ್ತಿರ ಬಂದಿದ್ದಾನೆ. ಮಹಿಳೆ ಹಿಂತಿರುಗಿ ನೋಡಿದಾಗ ಆ ವ್ಯಕ್ತಿಯ ಕೈಯಲ್ಲಿ ಮಗುವನ್ನು ಕಂಡು ತಾನು ಮಗುವನ್ನು ಬಿಟ್ಟು ಬಂದಿರುವುದು ಅರಿವಾಗಿದೆ. ತಕ್ಷಣ ಓಡಿ ಹೋಗಿ ಆ ವ್ಯಕ್ತಿಯ ಕೈಯಲ್ಲಿದ್ದ ಮಗುವನ್ನು ಎತ್ತಿಕೊಂಡಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿ, ನೆಟ್ಟಿಗರು ಶಾಕ್‌ ಆಗಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ತಾಯಿಯಾದವಳು ತನ್ನ ಮಗುವನ್ನು ಪಾರ್ಕ್‍ನಲ್ಲಿ ಬಿಟ್ಟು ಒಬ್ಬಂಟಿಯಾಗಿ ಫೋನ್‍ನಲ್ಲಿ ಮಾತನಾಡುತ್ತಾ ಬರಲು ಹೇಗೆ ಸಾಧ್ಯವಾಯಿತು ಎಂದು ಕೆಲವರು ಆಶ್ಚರ್ಯಪಟ್ಟರೆ, ಇತರರು ಈ ಘಟನೆಯು ನಿಜವಾಗಿ ನಡೆದಿದ್ದಲ್ಲ ನಕಲಿ ಎಂದು ಹೇಳಿದ್ದಾರೆ. ಒಬ್ಬರು ಆಕೆ ಬೇಜವಾಬ್ದಾರಿಯುತ ತಾಯಿ ಎಂದರೆ ಇನ್ನೊಬ್ಬರು ಮೊಬೈಲ್ ಎಫೆಕ್ಟ್ ಇದು ಎಂದಿದ್ದಾರೆ. ಅನೇಕರು ಆಶ್ಚರ್ಯಕರ ಹಾಗೂ ನಗುವಿನ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆ ದುಬೈನಲ್ಲಿ ಕೂಡ ನಡೆದಿತ್ತು. ತಾಯಿ ತನ್ನ ಮೊಬೈಲ್ ಫೋನ್‍ನಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತ ತನ್ನ 18 ತಿಂಗಳ ಮಗಳನ್ನು ಮರೆತು ಕಾರಿನಲ್ಲಿ ಲಾಕ್ ಮಾಡಿದ್ದಾಳೆ. ಆ ನಿರ್ಲಕ್ಷ್ಯಕ್ಕಾಗಿ ದುಬೈ ಪೊಲೀಸರು ತಾಯಿಯ ವಿರುದ್ಧ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಿದ್ದಾರೆ.ವರದಿಗಳ ಪ್ರಕಾರ, ಮಹಿಳೆ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹತ್ತಿರದ ಬಿಲ್ಡಿಂಗ್‌ವೊಂದಕ್ಕೆ ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ, ಪಾರ್ಕಿಂಗ್ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮಗು ಅಳುವುದನ್ನು ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಮಗುವನ್ನು ಕಾರಿನಿಂದ ಹೊರತೆಗೆದಿದ್ದಾರೆ.