Viral Video: ರೈಲಿನಲ್ಲಿ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಮೇ 16ರಂದು ಮುಂಬೈಯ ಕಂಜೂಮಾರ್ಗ್ ಮತ್ತು ಕಲ್ಯಾಣ್ ನಿಲ್ದಾಣಗಳ ನಡುವೆ ಚಲಿಸುವ ಲೋಕಲ್ ರೈಲಿನಲ್ಲಿ ಒಬ್ಬ ವ್ಯಕ್ತಿ ಪ್ರಯಾಣಿಕಳೊಬ್ಬಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಮುಂಬೈ: ರೈಲಿನಲ್ಲಿ ಜನಸಂಚಾರ ಹೆಚ್ಚಾಗಿ ಇರುವುದರಿಂದ ನೂಕುನುಗ್ಗಲಿನಿಂದಾಗಿ ಅಲ್ಲಿ ಆಗಾಗ ಜಗಳ, ಹೊಡೆದಾಟ ನಡೆಯುತ್ತಿರುತ್ತದೆ. ಇದೀಗ ಮುಂಬೈಯ ಲೋಕಲ್ ರೈಲಿನಲ್ಲಿ ಒಬ್ಬ ವ್ಯಕ್ತಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರು ಪ್ರಯಾಣಿಕರ ನಡುವಿನ ತೀವ್ರ ವಾಗ್ವಾದದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿರುವುದು ಸೆರೆಯಾಗಿದೆ. ಪುರುಷನು ತನ್ನ ಸೀಟಿನಿಂದ ಎದ್ದುನಿಂತು, ಮಹಿಳೆ ತನ್ನ ತಾಯಿಯನ್ನು ನಿಂದಿಸಿದ್ದಾಳೆಂದು ಆರೋಪಿಸಿ, ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆಗ ಮತ್ತೊಬ್ಬ ಪ್ರಯಾಣಿಕನು ಮಧ್ಯಪ್ರವೇಶಿಸಿ, ಆತ ಮಹಿಳೆಯ ಮೇಲೆ ಹಲ್ಲೆ ಮಾಡುವುದನ್ನು ತಡೆದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
A disturbing video showing a woman being assaulted inside a Mumbai local train @fpjindia @DGPMaharashtra @Central_Railway @drmmumbaicr @RailMinIndia @AshwiniVaishnaw pic.twitter.com/DAGt3rGnua
— Kamal Mishra (@Yourskamalk) May 20, 2025
ಕೋಚ್‌ನೊಳಗಿನ ಅವ್ಯವಸ್ಥೆ ಮತ್ತು ಪ್ರಯಾಣಿಕರಲ್ಲಿ ಆತಂಕವನ್ನು ಸೃಷ್ಟಿಸಿದ ಈ ದೃಶ್ಯಾವಳಿಯನ್ನು ಸಹಪ್ರಯಾಣಿಕರೊಬ್ಬರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.
ವರದಿ ಪ್ರಕಾರ, ಮೇ 16ರಂದು ಮುಂಬೈನ ಕಂಜೂರ್ಮಾರ್ಗ್ ಮತ್ತು ಕಲ್ಯಾಣ್ ನಿಲ್ದಾಣಗಳ ನಡುವೆ ಚಲಿಸುವ ರೈಲಿನಲ್ಲಿ ಈ ಘಟನೆ ನಡೆದಿದೆ. ವಿಶೇಷ ಚೇತನ ಪ್ರಯಾಣಿಕರಿಗಾಗಿ ಮೀಸಲಾದ ಬೋಗಿಯನ್ನು ಆ ವ್ಯಕ್ತಿ ಹತ್ತಿದಾಗ ಮಹಿಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಗಲಾಟೆಗೆ ಕಾರಣವಾಯಿತು ಎಂದು ವರದಿಯಾಗಿದೆ. ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಜಂಟಿ ತಂಡವು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ:Viral Video: ಮದ್ಯದ ಟ್ರಕ್ ಪಲ್ಟಿ; ಗಾಯಗೊಂಡು ಚಾಲಕ ನರಳುತ್ತಿದ್ದರೂ ನೆರವಿಗೆ ಧಾವಿಸದೆ ಬಿಯರ್ ಬಾಟಲಿಗಾಗಿ ಮುಗಿಬಿದ್ದ ಜನ
ಇತ್ತೀಚೆಗಷ್ಟೇ ಮುಂಬೈಯ ಲೇಡೀಸ್ ಸ್ಪೆಷಲ್ ಲೋಕಲ್ ರೈಲು 40 ನಿಮಿಷ ತಡವಾಗಿ ಬಂದ ಕಾರಣ ಜನದಟ್ಟಣೆ ಹೆಚ್ಚಾಗಿದ್ದರಿಂದ ಯುವತಿಯೊಬ್ಬಳು ಫುಟ್‌ಬೋರ್ಡ್‍ನ ಅಂಚಿನಲ್ಲಿ ನಿಂತು ನೇತಾಡಿಕೊಂಡು ಪ್ರಯಾಣಿಸಿದ್ದಳು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಅಪಾಯಕಾರಿ ಪರಿಸ್ಥಿತಿಯು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವುದು ಅಸುರಕ್ಷಿತ ಎಂದು ರೈಲ್ವೆ ಅಧಿಕಾರಿಗಳು ಆಗಾಗ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ರೈಲುಗಳು ಬರುವುದು ತಡವಾದಾಗ ಹೀಗೆ ನೇತಾಡಿಕೊಂಡು ಹೋಗದೆ ಬೇರೆ ಮಾರ್ಗವಿಲ್ಲ ಎಂದು ಪ್ರಯಾಣಿಕರು ಹೇಳಿದ್ದರು. ಈ ವಿಡಿಯೊಗೆ ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿಗಳು, ಇದರ ಕುರಿತು ತುರ್ತು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದಾರೆ.