ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮನೆಯಲ್ಲಿ ಕಳೆದ ಹೋದ ಪರ್ಸ್‌ ಹುಡುಕಲು 2 ದಿನ ಬೇಕಾಯ್ತು; ಏನಿದು ಆಪ್ಟಿಕಲ್ ಭ್ರಮೆ?

ನೆಟ್ಟಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅವರ ಸಂಬಂಧಿಕರೊಬ್ಬರು ಕಾಣೆಯಾದ ಪರ್ಸ್‌ ಅನ್ನು ಹುಡುಕುವುದರಲ್ಲೇ ಎರಡು ದಿನಗಳನ್ನು ಕಳೆದಿದ್ದು, ಇದಕ್ಕೆ ಕಾರಣ ಅವರಿಗಾದ ವಿಚಿತ್ರವಾದ ಆಪ್ಟಿಕಲ್ ಭ್ರಮೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಮನೆಯಲ್ಲಿ ಕಳೆದುಹೋದ ಪರ್ಸ್ 2 ಬಳಿಕ ಕೊನೆಗೆ ಸಿಕ್ಕಿದ್ದು ಹೇಗೆ?

Profile pavithra Jul 7, 2025 8:41 PM

ಕೆಲವರು ಪರ್ಸ್‌, ಕೀ ಅಥವಾ ಮೊಬೈಲ್ ಫೋನ್‌ನಂತಹ ಪ್ರತಿದಿನ ಬಳಸುವಂತಹ ಅಗತ್ಯ ವಸ್ತುಗಳನ್ನು ಎಲ್ಲೆಲ್ಲೊ ಇಟ್ಟು ಮರೆತು ಬಿಡುತ್ತಾರೆ. ನಂತರ ಅದಕ್ಕಾಗಿ ಇಡೀ ಮನೆಯ ಮೂಲೆ ಮೂಲೆ ಹುಡುಕಾಡುತ್ತಾರೆ. ಇದೀಗ ಅಂತಹದೊಂದು ಘಟನೆಯನ್ನು ನೆಟ್ಟಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಸಂಬಂಧಿಯೊಬ್ಬರು ಕಾಣೆಯಾದ ಪರ್ಸ್‌ ಹುಡುಕುವುದರಲ್ಲೇ 2 ದಿನಗಳನ್ನು ಕಳೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿ ವೈರಲ್ (Viral News) ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಅವರ ಸಂಬಂಧಿ ತಮ್ಮ ಪರ್ಸ್‌ ಕಳೆದುಕೊಂಡಿದ್ದು, ಅದನ್ನು ಹುಡುಕಲು 2 ದಿನ ಕಳೆದಿದ್ದಾರೆ. ಅಚ್ಚರಿ ಎಂದರೆ ಪರ್ಸ್ ಅವರ ಕಣ್ಣಮುಂದೆ ಇದ್ದರೂ ಅದನ್ನು ಗುರುತಿಸಲಾಗಲಿಲ್ಲ. ಇದಕ್ಕೆ ಕಾರಣ ಅವರಿಗಾದ ವಿಚಿತ್ರ ಆಪ್ಟಿಕಲ್ ಭ್ರಮೆ ಎಂದು ಹಂಚಿಕೊಂಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ವೈರಲ್ ಆದ ಪೋಸ್ಟ್‌ನಲ್ಲಿ ಫೋಟೊವೊಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಕಪ್ಪು ಟೈಲ್ಸ್‌ನ ಮೇಲೆ ಪರ್ಸ್‌ವೊಂದು ಬಿದ್ದಿತ್ತು. ಅದು 48 ಗಂಟೆಗಳ ಕಾಲ ಗಮನಕ್ಕೆ ಬಾರದೆ ಅಲ್ಲಿಯೇ ಇದ್ದಿತ್ತು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ತಕ್ಷಣ, ಅದು ಎಲ್ಲರ ಗಮನಸೆಳೆದು ವೈರಲ್ ಆಗಿದೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಒಬ್ಬರು, "ಆ ಕಪ್ಪು ಚೌಕದ ಮೇಲೆ ಸರಿಯಾದ ಆಕಾರದಲ್ಲಿ ಬಿದ್ದಿದೆ ಅದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನನಗೆ ಅಲ್ಲಿ ಪರ್ಸ್‌ ಇರುವುದನ್ನು ಗುರುತಿಸಲಾಗಲಿಲ್ಲ" ಎಂದು ಇನ್ನೊಬ್ಬರು ಹೇಳಿದ್ದಾರೆ. "ಅದನ್ನು ಹುಡುಕಲು ನನಗೆ ಒಂದು ನಿಮಿಷ ಹಿಡಿಯಿತು. ಆದರೆ ಅದು ಹೇಗೆ ಬಿದ್ದಿತು ಎಂಬುದೇ ಯಕ್ಷಪ್ರಶ್ನೆ" ಎಂದು ಮಗದೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ ವೈರಲ್‌ ಆಗಿದೆ.

ಈ ಸುದ್ದಿಯನ್ನೂ ಓದಿ:Viral Video: ನದಿ ದಡದಲ್ಲಿ ಕುಳಿತು ಎಂಜಾಯ್‌ ಮಾಡ್ತಿದ್ದವನ ಮೇಲೆ ಹಾವು ಡೆಡ್ಲಿ ಅಟ್ಯಾಕ್‌!

ಇದೇ ರೀತಿಯಲ್ಲಿ ನಡೆದ ಘಟನೆವೊಂದರಲ್ಲಿ, ಈ ಹಿಂದೆ ಅಡಗಿಕೊಂಡ ಗೂಬೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಮರದ ಕಾಂಡದ ಮುಂದೆ ಕುಳಿತಿರುವ ಗೂಬೆಯನ್ನು ಸೆರೆಹಿಡಿಯಲಾಗಿತ್ತು. ಅದು ಮೊದಲ ನೋಟದಲ್ಲಿ ಗುರುತಿಸಲು ಅಸಾಧ್ಯವಾಗುವಷ್ಟು ಸಂಪೂರ್ಣವಾಗಿ ಮರದ ಜತೆ ಬೆರೆತುಹೋಗಿತ್ತು.