ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿವೃತ್ತ ಸೇನಾ ಅಧಿಕಾರಿಯನ್ನು ಕಾರ್‌ನ ಬಾನೆಟ್ ಮೇಲೆ 1 ಕಿ.ಮೀ. ಎಳೆದೊಯ್ದ ಕಿಡಿಗೇಡಿಗಳು: ಭಯಾನಕ ವಿಡಿಯೊ ವೈರಲ್

Viral Video: ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ತಡರಾತ್ರಿ ಹಿಂಸಾಚಾರದ ಘಟನೆಯೊಂದು ನಡೆದಿದೆ. ಕಾರುಗಳ ನಡುವೆ ನಡೆದ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ ದೂರದವರೆಗೆ ಇಬ್ಬರು ಕಿಡಿಗೇಡಿಗಳು ಎಳೆದೊಯ್ದಿದ್ದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಸೇನಾ ಅಧಿಕಾರಿಯನ್ನು ಎಳೆದೊಯ್ದ ಕಿಡಿಗೇಡಿಗಳು

ನಿವೃತ್ತ ಸೇನಾ ಅಧಿಕಾರಿಯನ್ನು ಎಳೆದೊಯ್ದ ಕಿಡಿಗೇಡಿಗಳು -

Profile
Pushpa Kumari Feb 2, 2026 5:37 PM

ಭೋಪಾಲ್‌, ಫೆ. 2: ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರದ ಜಗಳಗಳು ವಿಕೋಪಕ್ಕೆ ಹೋಗುವುದು ಇದೆ. ಅದೇ ರೀತಿ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ತಡರಾತ್ರಿ ಹಿಂಸಾಚಾರದ ಘಟನೆಯೊಂದು ನಡೆದಿದೆ. ಕಾರುಗಳ ನಡುವೆ ನಡೆದ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ ದೂರದವರೆಗೆ ಇಬ್ಬರು ಕಿಡಿಗೇಡಿಗಳು ಎಳೆದೊಯ್ದಿದ್ದು ದೈಹಿಕವಾಗಿ ಹಲ್ಲೆ ಕೂಡ ನಡೆಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ

ಭಿಂದ್ ರಸ್ತೆಯ ಆದಿತ್ಯ ಹೋಟೆಲ್ ಬಳಿಯ ಮಹಾರಾಜಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಫೆಬ್ರವರಿ 1ರ ರಾತ್ರಿ 11 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ಸಂಭವಿಸಿದೆ. ಆದಿತ್ಯಪುರಂನ ಗಣೇಶ್ ಕಾಲೋನಿಯಲ್ಲಿ ವಾಸಿಸುತ್ತಿರುವ ನಿವೃತ್ತ ಸೈನಿಕ ಕಲ್ಯಾಣ್ ಕಿಶೋರ್ ಕಾಂತ್ ಶರ್ಮಾ ತಮ್ಮ ಭಾವ ಅವಧೇಶ್ ಶರ್ಮಾ ಅವರೊಂದಿಗೆ ಊಟ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಆದಿತ್ಯ ಹೋಟೆಲ್ ಬಳಿ ಶರ್ಮಾ ಅವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿದೆ.

ವಿಡಿಯೊ ನೋಡಿ:



ಕಾರು ತಗುಲಿದ ತಕ್ಷಣ ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಯುವಕರು ಇಳಿದು ಬಂದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ನಿವೃತ್ತ ಸೈನಿಕ ಮತ್ತು ಅವರ ಸೋದರ ಭಾವ ಆಕ್ಷೇಪಿಸಿದಾಗ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತು. ಆರೋಪಿಗಳು ಸಾರ್ವಜನಿಕರ ಮುಂದೆ ಇಬ್ಬರ ಮೇಲೂ ಹಲ್ಲೆ ನಡೆಸಲು ಮುಂದಾದರು.

ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ವೈರಲ್

ಸ್ಥಳೀಯರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ, ದಾಳಿ ನಡೆಸಿದ ಕಿಡಿಗೇಡಿಗಳು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶರ್ಮಾ ಕಾರಿನ ಮುಂದೆ ನಿಂತಿದ್ದಾಗ ಮಾನವೀಯತೆ ಮರೆತ ಆರೋಪಿಗಳು ಅವರ ಮೇಲೆಯೇ ಕಾರು ಚಲಾಯಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಲು ಶರ್ಮಾ ಕಾರಿನ ಬಾನೆಟ್ ಹಿಡಿದು ಕೊಂಡರು. ಚಾಲಕ ಕಾರನ್ನು ನಿಲ್ಲಿಸದೆ ಬಾನೆಟ್ ಮೇಲೆಯೇ ಇರಿಸಿಕೊಂಡು ಸುಮಾರು 1ರಿಂದ 1.5 ಕಿಲೋ ಮೀಟರ್ ದೂರ ಕಾರ್‌ ಚಲಾಯಿಸಿದ್ದಾನೆ.

ಸ್ವಲ್ಪ ದೂರ ವಾಹನ ಚಲಾಯಿಸಿದ ನಂತರ, ಆರೋಪಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಇದರ ಪರಿಣಾಮವಾಗಿ ಶರ್ಮಾ ರಸ್ತೆಗೆ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಆರೋಪಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ದೂರು ಮತ್ತು ವೈರಲ್ ವಿಡಿಯೊವನ್ನು ಆಧರಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಎರಡನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.