ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈಕೆಯ ಧೈರ್ಯಕ್ಕೊಂದು ಸಲಾಂ! ಬುಸುಗುಡುತ್ತಿದ್ದ ಕಾಳಿಂಗ ಸರ್ಪವನ್ನು ಒಂದೇ ಏಟಿಗೆ ಹಿಡಿದ ಮಹಿಳಾ ಅಧಿಕಾರಿ-ವಿಡಿಯೊ ವೈರಲ್

ತಿರುವನಂತಪುರದ ಪೆಪ್ಪರ ಪ್ರದೇಶದ ಅಂಚುಮರುತುಮೂಟ್ ಬಳಿಯ ಹೊಳೆಯಲ್ಲಿ ಸ್ಥಳೀಯರು ಸ್ನಾನ ಮಾಡುತ್ತಿದ್ದಾಗ ಕಿಂಗ್ ಕೋಬ್ರಾವನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪರುತಿಪಲ್ಲಿ ವಲಯದ ಅರಣ್ಯ ಬೀಟ್ ಅಧಿಕಾರಿ ಜಿ.ಎಸ್. ರೋಶನಿ ಅವಳು 18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಬರಿಗೈನಲ್ಲಿ ಹಿಡಿದು ರಕ್ಷಿಸಿದ್ದಾಳೆ. ಅವಳ ಈ ಸಾಹಸ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರಿಂದ ಮೆಚ್ಚುಗೆ ಗಳಿಸಿದೆ.

ಕಾಳಿಂಗ ಸರ್ಪವನ್ನು ಬರಿಗೈಯಲ್ಲಿ ಹಿಡಿದ ಮಹಿಳೆ; ವಿಡಿಯೊ ನೋಡಿ

Profile pavithra Jul 7, 2025 4:48 PM

ತಿರುವನಂತಪುರಂ: ಪರುತಿಪಲ್ಲಿ ವಲಯದ ಅರಣ್ಯ ಬೀಟ್ ಅಧಿಕಾರಿ ಜಿ.ಎಸ್. ರೋಶನಿ ಎಂಬಾಕೆ ಕೇರಳದ ವಸತಿ ಪ್ರದೇಶದಿಂದ 18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು(Cobra) ಬರಿಗೈನಲ್ಲಿ ಹಿಡಿದು ರಕ್ಷಿಸಿದ್ದಾಳೆ. ಅವಳ ಈ ಸಾಹಸ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,ನೆಟ್ಟಿಗರು ಆಕೆಯ ಧೈರ್ಯವನ್ನು ಮೆಚ್ಚಿದ್ದಾರೆ. ವೈರಲ್(Viral Video) ಆದ ವಿಡಿಯೊದಲ್ಲಿ, ಅರಣ್ಯ ಅಧಿಕಾರಿ ಹಾವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ.

ವಿಡಿಯೊದಲ್ಲಿ, ಅರಣ್ಯ ಅಧಿಕಾರಿ ರೋಶನಿ ತನ್ನ ಕೈಯಲ್ಲಿ ಉದ್ದವಾದ ಕೋಲು ಮತ್ತು ಹಾವನ್ನು ಹಿಡಿಯುವ ಚೀಲವನ್ನು ಹಿಡಿದುಕೊಂಡು ನಿಧಾನವಾಗಿ ಹಾವನ್ನು ಹಿಡಿಯುತ್ತಿರುವುದು ಕಂಡುಬಂದಿದೆ. ನಿರಂತರ ಪ್ರಯತ್ನದ ನಂತರ ಅವಳು ಚೀಲದಲ್ಲಿ ಹಾವನ್ನು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ

ವಿಡಿಯೊ ಇಲ್ಲಿದೆ ನೋಡಿ...



ಜಿ.ಎಸ್. ರೋಶನಿ ಯಾರು?

ಜಿ.ಎಸ್. ರೋಶನಿ ಅರಣ್ಯ ಬೀಟ್ ಅಧಿಕಾರಿಯಾಗಿದ್ದು, ತಮ್ಮ ಎಂಟು ವರ್ಷಗಳ ವೃತ್ತಿಜೀವನದಲ್ಲಿ 800 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿರುವುದಾಗಿ ಹೇಳಿಕೊಂಡಿದ್ದಾಳೆ. ಮತ್ತು ಅವಳು ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳನ್ನು ಹಿಡಿದಿದ್ದಾಳಂತೆ. ಈ ದೈತ್ಯ ಕಿಂಗ್ ಕೋಬ್ರಾವನ್ನು ಹಿಡಿದ ನಂತರ, ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಇದು ಬಹಳ ಅಪರೂಪ ಎಂದು ಅವಳು ಉಲ್ಲೇಖಿಸಿದ್ದಾಳೆ. ಹಾಗೂ ಇಂತಹ ದೈತ್ಯ ಹಾವನ್ನು ಹಿಡಿದಿದ್ದು ಇದೇ ಮೊದಲು ಎಂದು ತಿಳಿಸಿದ್ದಾಳೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಧೈರ್ಯಶಾಲಿ ಕೃತ್ಯವನ್ನು ಹೊಗಳಿ ನೆಟ್ಟಿಗರು ಕಾಮೆಂಟ್‌ ವಿಭಾಗದಲ್ಲಿ ಬರೆದಿದ್ದಾರೆ. ಒಬ್ಬ ನೆಟ್ಟಿಗರು, "ಅವಳು ತುಂಬಾ ಧೈರ್ಯಶಾಲಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಸೆಲ್ಯೂಟ್ ಹೈ ಮೇಡಂ ಜಿ ಕೋ!" ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಡಾನ್ಸ್‌ ಮಾಡೋ ಜೋಶ್‌ನಲ್ಲಿ ಗುಂಡು ಹಾರಿಸಿದ ವ್ಯಕ್ತಿ; ಇಬ್ಬರು ಡಾನ್ಸರ್ಸ್‌ಗೆ ಗಾಯ

ಮರಿ ಆನೆ ಮತ್ತು ಅದರ ತಾಯಿಯನ್ನು ಮತ್ತೆ ಒಂದುಗೂಡಿಸಿದ ಅರಣ್ಯ ಅಧಿಕಾರಿ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಅಧಿಕಾರಿಗಳು ಮರಿ ಆನೆಯೊಂದನ್ನು ತನ್ನ ತಾಯಿಯೊಂದಿಗೆ ಮತ್ತೆ ಸೇರಿಸಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ತನ್ನ ಹಿಂಡಿನಿಂದ ಬೇರ್ಪಟ್ಟ ಮುಗ್ಧ ಮರಿ ಆನೆ ಪತ್ತೆಹಚ್ಚಿದ ಅರಣ್ಯ ಅಧಿಕಾರಿಗಳು ಅದನ್ನು ಅದರ ತಾಯಿಯ ಬಳಿ ಕರೆತರುವಾಗ ತಾಯಿ ಆನೆ ಅರಣ್ಯ ಅಧಿಕಾರಿಗಳ ಕಡೆಗೆ ಓಡಿಬರುವುದು ಸೆರೆಯಾಗಿದೆ. ನಂತರ ಅಗತ್ಯ ಅರಣ್ಯ ತಂತ್ರಗಳನ್ನು ಬಳಸಿಕೊಂಡು ಅದನ್ನು ತನ್ನ ತಾಯಿಯೊಂದಿಗೆ ಮತ್ತೆ ಸೇರಿಸಲಾಯಿತು.