ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೈಕಲ್‌ಗೆ ಜೀವಂತ ಡಾಲ್ಫಿನ್ ಕಟ್ಟಿ ರೀಲ್ಸ್ ಮಾಡಿ ವಿಕೃತಿ ಮೆರೆದ ಪಾಪಿ: ಹುಚ್ಚಾಟದ ವಿಡಿಯೊ ವೈರಲ್‌

Viral News: ಇಲ್ಲೊಬ್ಬ ವ್ಯಕ್ತಿ ವೈರಲ್ ಆಗುವ ಉದ್ದೇಶದಿಂದ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಜೀವಂತವಾಗಿ ಸೈಕಲ್‌ಗೆ ಕಟ್ಟಿ ರೀಲ್ಸ್‌ ಮಾಡಿದ್ದಾನೆ. ನಂತರ ಅದು ಮೃತಪಟ್ಟ ಬಳಿಕ ಮತ್ತೊಂದು ವಿಡಿಯೊ ಮಾಡಿದ್ದಾನೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೈಕಲ್‌ಗೆ ಜೀವಂತ ಡಾಲ್ಫಿನ್ ಕಟ್ಟಿ ರೀಲ್ಸ್ ಮಾಡಿದ ಪಾಪಿ

ಬಿಹಾರದಲ್ಲಿ ಜೀವಂತ ಡಾಲ್ಫಿನ್ ಜತೆ ರೀಲ್ಸ್ ಮಾಡಿದ ವ್ಯಕ್ತಿ -

Profile
Pushpa Kumari Aug 26, 2026 9:32 PM

ಬಿಹಾರ, ಆ. 26: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ವೀವ್ಸ್ ಗಳಿಸಬೇಕೆಂದು ಹುಚ್ಚಾಟ ಮೆರೆಯುವವರು ಅನೇಕರು ಇದ್ದಾರೆ‌. ಅಪಾಯಕಾರಿ ಪ್ರದೇಶದಲ್ಲಿ ರೀಲ್ಸ್ ಮಾಡುವುದು, ಸಾಕು ಪ್ರಾಣಿಗಳಿಗೆ ಹಿಂಸೆ ನೀಡುವುದು ಹೀಗೆ. ಇಲ್ಲೊಬ್ಬ ವ್ಯಕ್ತಿ ವೈರಲ್ ಆಗುವ ಉದ್ದೇಶದಿಂದ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಜೀವಂತವಾಗಿ ಸೈಕಲ್‌ಗೆ ಕಟ್ಟಿದ್ದಾನೆ. ನಂತರ ಅದು ಮೃತ ಪಟ್ಟ ಬಳಿಕ ಅದರೊಂದಿಗೆ ರೀಲ್ಸ್ (Viral News) ಮಾಡಿದ್ದಾನೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಸೈಕಲ್‌ಗೆ ಕಟ್ಟುವಾಗ ಡಾಲ್ಫಿನ್ ಜೀವಂತವಾಗಿರುವುದು ಕಂಡು ಬಂದಿದೆ. ನಂತರ ಅದು ಹಿಂಸೆ ತಾಳಲಾರದೆ ಮೃತ ಪಟ್ಟಿದೆ. ಬಳಿಕ ಆ ವ್ಯಕ್ತಿ ಅದರೊಂದಿಗೆ ರೀಲ್ಸ್‌ ಚಿತ್ರೀಕರಿಸಿದ್ದಾನೆ. ಲೈಕ್ಸ್ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳಲು ಅಳಿವಿನಂಚಿನಲ್ಲಿರುವ ಅಪರೂಪದ ಗಂಗಾ ನದಿಯ ಡಾಲ್ಫಿನ್ ಅನ್ನು ಜೀವಂತವಾಗಿ ಸಾಯಿಸಿರುವುದಕ್ಕೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ವಿಡಿಯೊ ನೋಡಿ:



ಈ ರೀತಿ ಹುಚ್ಚಾಟ ಮೆರೆದ ವ್ಯಕ್ತಿಯನ್ನು ನೆತ್‌ಲಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಡಾಲ್ಫಿನ್‌ನಿಂದ ಎಣ್ಣೆ ತೆಗೆಯುವ ಉದ್ದೇಶದಿಂದ ಅದನ್ನು ಸೆರೆ ಹಿಡಿದಿದ್ದಾನೆ. ಆ ವ್ಯಕ್ತಿ ನದಿಯಿಂದ ಡಾಲ್ಫಿನ್ ಹಿಡಿದು, ಅದನ್ನು ಜೀವಂತವಾಗಿದ್ದಾಗಲೇ ಸೈಕಲ್ ಹಿಂದೆ ಕಟ್ಟಿ ಒಯ್ದಿದ್ದಾನೆ. ನಂತರ ಅದು ಮೃತಪಟ್ಟ ಮೇಲೆ ಅದರೊಂದಿಗೆ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ಈ ಪೋಸ್ಟ್ ಶೇರ್ ಮಾಡಿದ ನೆಟ್ಟಿಗರು ಕಿಡಿಕಾರಿದ್ದಾರೆ. ಅಕ್ಷರಶಃ ಅಳಿವಿನಂಚಿನಲ್ಲಿರುವ ಗಂಗಾ ನದಿ ಡಾಲ್ಫಿನ್‌ಗಳನ್ನು ಕೊಂದು ಕಿರುಕುಳ ನೀಡುತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ರೀಲ್ಸ್ ಮಾಡಲು ಹಾಗೂ ಪ್ರಾಣಿಯ ಎಣ್ಣೆ ತೆಗೆಯಲು ಇಂತಹ ಕೆಲಸ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ; ಮೊಘಲ್ ಸೈನಿಕರೂ ಇಷ್ಟೊಂದು ಸಂಖ್ಯೆಯಲ್ಲಿ ದಾಳಿ ಮಾಡಿರಲಿಲ್ಲ ಎಂದ ನೆಟ್ಟಿಗರು

ಇಂತಹ ಕೃತ್ಯದ ವಿರುದ್ಧ ಬಿಹಾರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ವನ್ಯಜೀವಿ ಸಂಸ್ಥೆಗಳು, ಬಿಹಾರ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಇದೀಗ ಅಧಿಕಾರಿಗಳು ತನಿಖೆ ನಡೆಸಿ ಮುಖ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಭಾರತದಲ್ಲಿ ಡಾಲ್ಫಿನ್ ಕೊಲ್ಲುವುದು 3ರಿಂದ 7 ವರ್ಷಗಳವರೆಗೆ ಕಡ್ಡಾಯ ಜೈಲು ಶಿಕ್ಷೆ ಅನುಭವಿಸುವ ಮತ್ತು ಭಾರಿ ದಂಡದ ಅಪರಾಧ ಕೃತ್ಯ. ಈ ವ್ಯಕ್ತಿಯನ್ನು ಜೈಲಿಗೆ ಹಾಕಿ ಕಠಿಣ ಶಿಕ್ಷೆ ನೀಡಿ ಎಂದು ಬರೆದಿದ್ದಾರೆ.