ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Reels Craze: ಮತ್ತೊಂದು ರೀಲ್ಸ್‌ ಕ್ರೇಜ್‌; ಎಲ್‍ಪಿಜಿ ಸಿಲಿಂಡರ್ ಲೀಕ್ ಮಾಡಿ ವಿಡಿಯೊ ಮಾಡಿದ ಜೋಡಿ

Reels Craze: ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ರಂಜನಾ ಜಾಟ್ ಎಂಬ ಮಹಿಳೆಯೊಬ್ಬಳು ತನ್ನ ಸಂಬಂಧಿಕ ಅನಿಲ್ ಜಾಟ್ ಎಂಬವನ ಜತೆ ಸೇರಿಕೊಂಡು ಫ್ಲ್ಯಾಟ್‍ನಲ್ಲಿ ಮುಂಜಾನೆ ಸುಮಾರು 2 ಗಂಟೆಗೆ ಎಲ್‍ಪಿಜಿ ಸಿಲಿಂಡರ್ ಲೀಕ್ ಮಾಡಿ ರೀಲ್ಸ್ ತಯಾರಿಸಿದ್ದಾಳೆ. ಇದರಿಂದ ಫ್ಲ್ಯಾಟ್ ಒಳಗೆ ಗ್ಯಾಸ್ ತುಂಬಿಕೊಂಡು ಭಯಾನಕ ಸ್ಪೋಟ ಸಂಭವಿಸಿದೆ.

ರೀಲ್ಸ್‌ ಮಾಡಲು ಹೋಗಿ ಮೈ ಕೈ ಸುಟ್ಟುಕೊಂಡ ಜೋಡಿ

ಸಾಂದರ್ಭಿಕ ಚಿತ್ರ.

Profile pavithra Mar 10, 2025 4:52 PM

ಭೋಪಾಲ್: ರೀಲ್ಸ್‌ ಕ್ರೇಜ್‌ ಈಗ ಎಷ್ಟರಮಟ್ಟಿಗಿದೆಯೆಂದರೆ ತಮ್ಮ‌ ಜೀವಕ್ಕೆ ಕುತ್ತಾದರೂ ಪರ್ವಾಗಿಲ್ಲ ಲೈಕ್ಸ್‌, ಕಾಮೆಂಟ್‌ ಬರಬೇಕು ಅನ್ನುವ ಹಾಗೆ ವರ್ತಿಸುತ್ತಾರೆ. ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬಳು ತನ್ನ ಸಂಬಂಧಿಕರೊಬ್ಬನೊಂದಿಗೆ ಸೇರಿಕೊಂಡು ಎಲ್‍ಪಿಜಿ ಸಿಲಿಂಡರ್‌ ಲೀಕ್‌ ಮಾಡಿ ವೈರಲ್ ರೀಲ್ಸ್‌ ಮಾಡಲು ಹೋಗಿ ಮೈಕೈ ಸುಟ್ಟುಕೊಂಡಿದ್ದಾಳೆ. ಇದರಿಂದ ಸಿಲಿಂಡರ್‌ ಸ್ಫೋಟಗೊಂಡು ಅಲ್ಲಿನ ಏಳು ಅಂತಸ್ತಿನ ಕಟ್ಟಡದ ಅನೇಕ ಫ್ಲ್ಯಾಟ್‍ಗಳು ಹಾನಿಗೊಳಗಾಗಿವೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ನಗರದ ಭಿಂಡ್ ರಸ್ತೆಯಲ್ಲಿರುವ ಲೆಗಸಿ ಪ್ಲಾಜಾ ಕಟ್ಟಡದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ.

ರಂಜನಾ ಜಾಟ್ ಎಂಬ ಮಹಿಳೆ ತನ್ನ 38 ವರ್ಷದ ಸಂಬಂಧಿ ಅನಿಲ್ ಜಾಟ್ ಜತೆ ಸೇರಿಕೊಂಡು ಫ್ಲ್ಯಾಟ್‍ನಲ್ಲಿ ರೀಲ್ಸ್‌ ಮಾಡುತ್ತಿದ್ದಾಗ ಮುಂಜಾನೆ 2:15ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ವಿಡಿಯೊವನ್ನು ರೆಕಾರ್ಡ್ ಮಾಡುವಾಗ, ರಂಜನಾ ಜಾಟ್ ಎಲ್‍ಪಿಜಿ ಸಿಲಿಂಡರ್‌ ಅನ್ನು ಲೀಕ್‌ ಮಾಡಿದ್ದಾಳೆ.



ಈ ಘಟನೆಗೆ ಸಂಬಂಧಪಟ್ಟ ವಿಡಿಯೊಗಳು ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ವರದಿಗಳ ಪ್ರಕಾರ, ರಂಜನಾ ಪಿನ್ ಬಳಸಿ ಉದ್ದೇಶಪೂರ್ವಕವಾಗಿ ಎಲ್‍ಪಿಜಿ ಸಿಲಿಂಡರ್‌ ಅನ್ನು ಲೀಕ್‌ ಮಾಡಿದ್ದಾಳೆ. ಅನಿಲ್ ಈ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾನೆ.

ಇವರಿಬ್ಬರು ಸುಮಾರು 17 ನಿಮಿಷಗಳ ಕಾಲ ಈ ಕೆಲಸದಲ್ಲಿ ತೊಡಗಿ ರೀಲ್ಸ್ ಶೂಟ್ ಮಾಡಿದ್ದಾರೆ. ಇದರಿಂದ ಅಪಾರ್ಟ್‌ಮೆಂಟ್‌ ಒಳಗೆ ಗ್ಯಾಸ್ ತುಂಬಿಕೊಂಡಿದೆ. ವಿಡಿಯೊ ಸರಿಯಾಗಿ ಕಾಣಿಸದ ಕಾರಣ ಅವರು ಸಿಎಫ್ಎಲ್ ಲೈಟ್ ಅನ್ನು ಆನ್ ಮಾಡಿದಾಗ ಬೆಂಕಿ ಕಾಣಿಸಿಕೊಂಡು ಸ್ಫೋಟಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಕಟ್ಟಡ ಭಾರೀ ಬೆಂಕಿಗೆ ಆಹುತಿಯಾಗಿದ್ದು, ಕನಿಷ್ಠ ಎಂಟು ಫ್ಲ್ಯಾಟ್‍ಗಳಿಗೆ ಹಾನಿಯಾಗಿದೆ. ಈ ಸ್ಫೋಟದಲ್ಲಿ ಅವರಿಬ್ಬರಿಗೂ ತೀವ್ರವಾದ ಸುಟ್ಟ ಗಾಯಗಳಾಗಿವೆಯಂತೆ. ಪೊಲೀಸ್ ಅಧಿಕಾರಿಗಳು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 287 ರ ಅಡಿಯಲ್ಲಿ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ಗಾಗಿ ಗ್ಯಾಸ್ ಸ್ಟೌವ್ ಮೇಲೆ ಪರ್ಫ್ಯೂಮ್‌ ಸ್ಪ್ರೇ ಮಾಡಿದ ಯುವಕರು -ಶಾಕಿಂಗ್‌ ವಿಡಿಯೊ ವೈರಲ್

ಇತ್ತೀಚೆಗೆ ಇಂತಹದ್ದೇ ಒಂದು ಪ್ರಕರಣ ನಡೆದಿತ್ತು. ಯುವಕರಿಬ್ಬರು ಗ್ಯಾಸ್ ಸ್ಟೌವ್ ಮೇಲೆ ಡಿಯೋಡ್ರೆಂಟ್‌ ಸ್ಪ್ರೇ ಮಾಡುವ ಮೂಲಕ ಅಪಾಯಕಾರಿಯಾಗಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಯುವಕರಿಬ್ಬರು ಉರಿಯುತ್ತಿರುವ ಗ್ಯಾಸ್ ಸ್ಟೌವ್ ಡಿಯೋಡ್ರೆಂಟ್‌ ಸಿಂಪಡಿಸಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಇದರಿಂದ ಬೆಂಕಿಯ ಜ್ವಾಲೆ ಕಂಡುಬಂದು ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೊ ನೋಡಿದ ಹಲವು ನೆಟ್ಟಿಗರು ಇವರ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.