#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಬಿಯರ್‌ ಕ್ಯಾನ್‌ನಲ್ಲಿ ಮಹಾತ್ಮಾ ಗಾಂಧಿ ಫೋಟೊ; ಭುಗಿಲೆದ್ದ ಆಕ್ರೋಶ

ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಶದ ಗಡಿ ಮೀರಿ ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ರಷ್ಯಾದಲ್ಲಿ ಅವರ ಫೋಟೊವನ್ನು ಬಿಯರ್‌ ಕ್ಯಾನ್‌ನಲ್ಲಿ ಮುದ್ರಿಸಲಾಗಿದ್ದು, ಈ ಸುದ್ದಿ ವೈರಲ್‌ ಆಗಿದೆ. ಇದರ ಜತೆಗೆ ಗಾಂಧೀಜಿ ಅವರ ಸಹಿಯೂ ಕಂಡುಬಂದಿದೆ.

ಬಿಯರ್‌ ಕ್ಯಾನ್‌ನಲ್ಲಿ ಮಹಾತ್ಮಾ ಗಾಂಧಿ ಫೋಟೊ

Profile Ramesh B Feb 13, 2025 6:41 PM

ಹೊಸದಿಲ್ಲಿ: ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ (Mahatma Gandhi) ಅವರು ದೇಶದ ಗಡಿ ಮೀರಿ ಜಾಗತಿಕ ನಾಯಕರಾಗಿ ಗುರುತಿಸಿಕೊಂಡವರು. ಅಹಿಂಸಾತ್ಮಕ ಹೋರಾಟ, ಸತ್ಯಾಗ್ರಹಕ್ಕೆ ಹೊಸ ಆಯಾಮ ತಂದುಕೊಟ್ಟಿದ್ದು ಅವರು. ರಕ್ತಸಿಕ್ತ ಹೋರಾಟದ ಹಾದಿಯಿಂದ ಸಂಪೂರ್ಣ ವಿಮುಖರಾಗಿ ಅವರು ಶಾಂತಿಯ ಮಂತ್ರ ಜಪಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಹಿಂಸೆಯ ಮೂಲಕವೇ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ಅವರು ಬದುಕಿನುದ್ದಕ್ಕೂ ಮದ್ಯಪಾನ ವಿರೋಧಿಯಾಗಿದ್ದರು. ಕುಡಿತ ಸಮಾಜವನ್ನು ಹಾಳುಗೆಡವುತ್ತದೆ ಎಂದು ಪ್ರತಿಪಾದಿಸುತ್ತಲೇ ಬಂದಿದ್ದ ಅವರನ್ನು ಇಡೀ ವಿಶ್ವೇ ಮೆಚ್ಚಿಕೊಂಡಿದೆ. ಆದರೆ ಇದೀಗ ರಷ್ಯಾದಲ್ಲಿ ಅವರ ಫೋಟೊವನ್ನು ಬಿಯರ್‌ ಕ್ಯಾನ್‌ನಲ್ಲಿ ಮುದ್ರಿಸಲಾಗಿದ್ದು, ಈ ಸುದ್ದಿ ವೈರಲ್‌ ಆಗಿದೆ (Viral News). ಕಂಪನಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಏನಿದು ಘಟನೆ?

ರಷ್ಯಾದ ಬಿಯರ್‌ ತಯಾರಿಕಾ ಕಂಪನಿ ರೆವಾರ್ಟ್ಸ್‌ನ ಹಾಝಿ ಐಪಿಎ (Rewort's Hazy IPA) ಬಿಯರ್‌ ಕ್ಯಾನ್‌ ಮೇಲೆ ಮಹಾತ್ಮಾ ಗಾಂಧೀಜಿ ಅವರ ಫೋಟೊ ಮತ್ತು ಅವರ ಸಹಿ ಮುದ್ರಿಸಿರುವುದು ಕಂಡು ಬಂದಿದೆ. ಇದನ್ನು ತೋರಿಸುವ ವಿಡಿಯೊ, ಫೋಟೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ. ಮದ್ಯಪಾನದಿಂದ ದೂರವಿರಬೇಕು ಎನ್ನುವ ಸಂದೇಶವನ್ನು ಪ್ರತಿಪಾದಿಸಿದ್ದ ಗಾಂಧೀಜಿ ಅವರ ಫೋಟೊವನ್ನು ಬಿಯರ್‌ ಕ್ಯಾನ್‌ನಲ್ಲಿ ಮುದ್ರಿಸಿದ್ದು ಅಕ್ಷಮ್ಯ ಎಂದು ಹಲವರು ಕಿಡಿಕಾರಿದ್ದಾರೆ.



ಈ ವಿಡಿಯೊ, ಫೋಟೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಶೀಘ್ರದಲ್ಲಿಯೇ ಗಾಂಧೀಜಿ ಫೋಟೊ ಇರುವ ಬಿಯರ್‌ ಕ್ಯಾನ್‌ ಬ್ಯಾನ್‌ ಆಗಲಿದೆ ಎನ್ನಲಾಗಿದೆ. ಈ ಬಿಯರ್‌ ಬ್ರ್ಯಾಂಡ್‌ ವಿವಾದ ಎಬ್ಬಿಸುತ್ತಿರುವುದು ಇದು ಮೊದಲ ಸಲವೇನಲ್ಲ. 2018ರಲ್ಲಿ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್‌ ವೇಳೆ ರಷ್ಯಾದ ನಿಜ್ನಿ ನವ್ಗೊರೊಡ್‌ನ ಬಾರ್‌ನಲ್ಲಿ ಫುಟ್‌ಬಾಲ್ ಪ್ರಿಯರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಪಾನೀಯವನ್ನು ಹೀರುವ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದರು.

ಗಾಂಧೀಜಿ ಮಾತ್ರವಲ್ಲ ಈ ಬಿಯರ್‌ ಬ್ರ್ಯಾಂಡ್‌ ಈ ಹಿಂದೆ ತನ್ನ ಕ್ಯಾನ್‌ಗಳಲ್ಲಿ ಇತರ ಮುಖ್ಯ ನಾಯಕರ ಫೋಟೊವನ್ನು ಮುದ್ರಿಸಿ ಎಡವಟ್ಟು ಮಾಡಿಕೊಂಡಿತ್ತು. ಮದರ್‌ ಥೆರೆಸಾ, ನೆಲ್ಸನ್‌ ಮಂಡೇಲಾ ಮತ್ತು ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಭಾವಚಿತ್ರವನ್ನು ಅಳಡಿಸಿಕೊಂಡಿತ್ತು.

ಮಹಾತ್ಮಾ ಗಾಂಧೀಜಿ ಅವರ ಫೋಟೊವನ್ನು ಮುದ್ರಿಸುವ ಮೂಲಕ ದಶಕಗಳ ಹಿಂದೆ ಅಮೆರಿಕ ಮೂಲದ ಮದ್ಯ ಕಂಪೆನಿಯೊಂದು ವಿವಾದ ಮೈಮೇಲೆ ಎಳೆದುಕೊಂಡಿತ್ತು. ಬಳಿಕ ಕ್ಷಮೆ ಕೋರಿತ್ತು. ಇನ್ನು 2019ರಲ್ಲಿ ಜೆಕ್‌ ಮದ್ಯದಂಗಡಿಯೊಂದು ಗಾಂಧಿ ಹೆಸರಿನ ಉತ್ಪನ್ನ ಬಿಡುಗಡೆ ಮಾಡಿತ್ತು.

ಈ ಸುದ್ದಿಯನ್ನೂ ಓದಿ: Viral Video: ಮದುವೆಗೆ ಕರೆಯದೇ ಬಂದ ಡೇಂಜರಸ್‌ ಗೆಸ್ಟ್‌; ವಧು-ವರರು ಫುಲ್‌ ಶಾಕ್‌! ದಿಕ್ಕಾಪಾಲಾಗಿ ಓಡಿದ ಅತಿಥಿಗಳು

ಕಿಡಿಕಾರಿದ ನೆಟ್ಟಿಗರು

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ. ನೆಟ್ಟಿಗರು ಕಂಪನಿ ವಿರುದ್ಧ ಕಿಡಿಕಾರಿದ್ದಾರೆ. ತಕ್ಷಣ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಭಾರತೀಯರು ಮತ್ತು ಅಲ್ಲಿನ ಭಾರತೀಯ ಮೂಲದವರು ಈ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.