#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಮದುವೆಗೆ ಕರೆಯದೇ ಬಂದ ಡೇಂಜರಸ್‌ ಗೆಸ್ಟ್‌; ವಧು-ವರರು ಫುಲ್‌ ಶಾಕ್‌! ದಿಕ್ಕಾಪಾಲಾಗಿ ಓಡಿದ ಅತಿಥಿಗಳು

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಮದುವೆಗೆ ಚಿರತೆಯೊಂದು ಎಂಟ್ರಿ ಕೊಟ್ಟಿದೆ. ಚಿರತೆಯನ್ನು ನೋಡಿ ಮದುವೆಯ ಸಂಭ್ರಮದಲ್ಲಿದ್ದ ಜನರು ನೋಡಿ ಭಯ ಬಿದ್ದು ಓಡಿ ಹೋಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ಮದ್ವೆ ಮನೆಗೆ ಚಿರತೆ ಎಂಟ್ರಿ-ವಧು-ವರರನ್ನು ಬಿಟ್ಟು ಓಡಿದ ಗೆಸ್ಟ್‌ಗಳು!

ಮದುವೆಯಲ್ಲಿ ಕಾಣಿಸಿಕೊಂಡ ಚಿರತೆ!

Profile Vishakha Bhat Feb 13, 2025 4:29 PM

ಲಖನೌ: ಮದುವೆಗೆ ಅತಿಥಿಗಳನ್ನು ಆಹ್ವಾನಿಸುವುದು ಸಾಮಾನ್ಯ ಆದರೆ ಇಲ್ಲೊಂದು ಮದುವೆಯಲ್ಲಿ ಆಹ್ವಾನ ನೀಡದೆಯೇ ಅತಿಥಿಯೊಂದು ಆಗಮಿಸಿ ಭಾರಿ ಭೀತಿ ಮೂಡಿಸಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಅಕ್ಷಯ್ ಶ್ರೀವಾಸ್ತವ ಮತ್ತು ಜ್ಯೋತಿ ಕುಮಾರಿ ಅವರ ಮದುವೆಗೆ ಚಿರತೆಯೊಂದು ಎಂಟ್ರಿ ಕೊಟ್ಟಿದೆ. ಚಿರತೆಯನ್ನು ನೋಡಿ ಮದುವೆಯ ಸಂಭ್ರಮದಲ್ಲಿದ್ದ ಜನರು ಚಿರತೆ ನೋಡಿ ಭಯ ಬಿದ್ದು ಓಡಿದ್ದಾರೆ. ಬುಧವಾರ ರಾತ್ರಿ ಮದುವೆ ನಡೆಯುತ್ತಿತ್ತು. ರಾತ್ರಿ 11 ಗಂಟೆಯ ವೇಳೆಗೆ ಚಿರತೆ ಮನೆಗೆ ನುಗ್ಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ (Viral News) ಆಗಿದೆ.

ಚಿರತೆ ಔತಣಕೂಟದ ಸಭಾಂಗಣಕ್ಕೆ ಪ್ರವೇಶಿಸಿದಾಗ, ಅತಿಥಿಗಳಲ್ಲಿ ಭಯಭೀತರಾಗಿ, ಪ್ರಾಣ ಉಳಿಸಿಕೊಳ್ಳಲು ಓಡಲು ಪ್ರಾರಂಭಿಸಿದ್ದಾರೆ. ಅತಿಥಿಯೊಬ್ಬ ಮಹಡಿ ಮೇಲಿನಿಂದ ಹಾರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಮಹಡಿ ಮೇಲಿಂದ ಹಾರಿ ಗಾಯಗೊಂಡಿದ್ದಾನೆ. ಚಿರತೆ ಭಯದಿಂದ ವಧು ವರರಿಬ್ಬರು ಕಾರ್‌ನಲ್ಲಿ ಲಾಕ್‌ ಮಾಡಿಕೊಂಡು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ನಂತರ ಘಟನೆಯ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Plane Crash : ವಿಮಾನ ಪತನಕ್ಕೂ ಮೊದಲಿನ ವಿಡಿಯೋ ವೈರಲ್‌! ಅಷ್ಟಕ್ಕೂ ಆಗಿದ್ದೇನು ಅಲ್ಲಿ ?

ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸತತ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಚಿರತೆ ಮೊದಲ ಮಹಡಿಯಲ್ಲಿ ಒಂದು ಕೋಣೆಯಲ್ಲಿ ಅಡಗಿಕೊಂಡಿರುವುದು ಕಂಡುಬಂದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಚಿರತೆಯನ್ನು ಹಿಡಿಯಲಾಗಿದೆ. ಪೊಲೀಸರ ಪ್ರಕಾರ, ಚಿರತೆಯನ್ನು ಹಿಡಿಯುವಾಗ ಅರಣ್ಯ ಇಲಾಖೆ ಅಧಿಕಾರಿ ಮುಕದ್ದರ್ ಅಲಿ ಅವರ ಕೈಗೆ ಗಾಯಗಳಾಗಿವೆ. ವಿಡಿಯೋದಲ್ಲಿ ಅರಣ್ಯ ಅಧಿಕಾರಿಯ ಎಡಗೈ ರಕ್ತದಿಂದ ತುಂಬಿರುವುದನ್ನು ನೋಡಬಹುದು. ಈ ಎಲ್ಲಾ ಘಟನೆಯ ನಂತರ ಮರುದಿನ ಬೆಳಿಗ್ಗೆ ವಿವಾಹ ಆಚರಣೆಗಳು ಪುನರಾರಂಭವಾಗಿದೆ.