ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವರಿಗೆ ಕ್ಷಮೆಯಾಚಿಸಿ ಹುಂಡಿ ಕಳ್ಳತನ ಮಾಡಿದ ಖದೀಮರು: ವಿಡಿಯೊ ವೈರಲ್

Viral Video: ದೇವರ ಮುಂದೆ ಕ್ಷಮೆ ಕೇಳಿನಂತರ ದೇವಸ್ಥಾನದ ಹುಂಡಿ ಒಡೆದು ಹಣ ದೋಚಿರುವ ಘಟನೆಯೊಂದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ಕ್ಷಣಗಳ ನಂತರ, ಖದೀಮರು ಕಾಣಿಕೆ ಪೆಟ್ಟಿಗೆಯನ್ನು ಒಡೆದು ಹಣವನ್ನು ಖಾಲಿ ಮಾಡಿ ಪರಾರಿಯಾಗಿದ್ದಾರೆ.

ದೇವರ ಬಳಿ ಕ್ಷಮೆ ಕೇಳಿ ಹುಂಡಿ ಕದ್ದ ಕಳ್ಳರು: ಸಿಸಿಟಿವಿಯಲ್ಲಿ ಕೃತ್ಯ ಸೆರೆ!

ದೇವರ ಬಳಿ ಕ್ಷಮೆ ಕೇಳಿ ಹುಂಡಿ ಕದ್ದ ಕಳ್ಳರು -

Profile
Pushpa Kumari Jul 30, 2026 2:45 PM

ನಾಗಪುರ,ಜು.30: ದೇವರ ಮುಂದೆ ಕ್ಷಮೆ ಕೇಳಿನಂತರ ದೇವಸ್ಥಾನದ ಹುಂಡಿ ಒಡೆದು ಹಣ ದೋಚಿರುವ ಘಟನೆಯೊಂದು ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ಕ್ಷಣಗಳ ನಂತರ, ಖದೀಮರು ಕಾಣಿಕೆ ಪೆಟ್ಟಿಗೆಯನ್ನು ಒಡೆದು ಹಣವನ್ನು ಖಾಲಿ ಮಾಡಿ ಪರಾರಿ ಯಾಗಿದ್ದಾರೆ. ಈ ಕಳ್ಳತನದ ಕೃತ್ಯ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು (Viral News) ಇಬ್ಬರು ಕಳ್ಳರ ಎಲ್ಲ ಹೈಡ್ರಾಮಾಗಳು ಭಾರೀ ವೈರಲ್ ಆಗಿದೆ.

ವೈರಲ್ ಆದ ದೃಶ್ಯಾವಳಿಯಲ್ಲಿ ಇಬ್ಬರು ವ್ಯಕ್ತಿಗಳು ಆವರಣದಲ್ಲಿ ನಿಂತಿರುವುದನ್ನು ತೋರಿಸಲಾಗಿದೆ. ಅವರಲ್ಲಿ ಒಬ್ಬಾತ ದೇವರ ಮುಂದೆ ನಿಂತು ಕ್ಷಮೆ ಕೇಳುತ್ತಿದ್ದರೆ ಇನ್ನೊಬ್ಬ ಕಾಣಿಕೆ ಪೆಟ್ಟಿಗೆಯ ಬೀಗವನ್ನು ತೆರೆಯಲು ಪ್ರಯತ್ನಿಸುತ್ತಾನೆ. ಸನ್ನೆ ಮಾಡಿದ ನಂತರ, ಮೊದಲ ವ್ಯಕ್ತಿ ಸುತ್ತಮುತ್ತಲಿನ ಪ್ರದೇಶಗಳನ್ನು ಗಮನಿಸುತ್ತಿರುವಂತೆ ಕಾಣುತ್ತದೆ.

ವಿಡಿಯೋ ನೋಡಿ:



ನಾಗಪುರದ ಶೀತಲಾ ದೇವಿ ದೇವಲಯದಲ್ಲಿ ಜುಲೈ 28ರಂದು ಮಧ್ಯಾಹ್ನ ಸಮಯಕ್ಕೆ ಈ ಘಟನೆ ನಡೆದಿದೆ. ಹಲವಾರು ಗಂಟೆಗಳ ನಂತರ ದೇವಾಲಯದ ಅಧಿಕಾರಿಗಳು ಬಂದು ಬೀಗಗಳು ಮುರಿದಿರುವುದನನ್ನು ಗಮನಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ದೇವಾಲಯದ ಅರ್ಚಕ ಜಿತೇಂದ್ರ ಪಾಂಡೆ ಅವರು ​ಸಿಸಿಟಿವಿ ತಪಾಸಣೆ ನಡೆಸಿದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ದೇವಸ್ಥಾನದೊಳಗೆ ನುಗ್ಗಿರುವುದು ಕಂಡುಬಂದಿದೆ.

Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು; ಬೆಚ್ಚಿಬಿದ್ದ ಪೋಷಕರು!

ಬಳಿಕ ಪೊಲೀಸ್ ಠಾಣೆಯ ಅಧಿಕಾರಿಗಳು ಶೀತ್ಲಾ ಮಾತಾ ದೇವಾಲಯಕ್ಕೆ ಬಂದು ದೃಶ್ಯಾವಳಿ ಗಳನ್ನು ಪರಿಶೀಲಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಒಬ್ಬ ಕಳ್ಳ ದೇವಾಲಯದ ಮುಂದೆ ನಿಂತು ಕ್ಷಮೆಯಾಚಿಸುವಂತೆ ಕಿವಿ ಹಿಡಿದುಕೊಂಡಿದ್ದಾನೆ. ಅದೇ ಸಮಯದಲ್ಲಿ ಅವನ ಸಹಚರ ಹುಂಡಿಯ ಬೀಗ ಮುರಿದಿದ್ದು ಮತ್ತೊಬ್ಬ ಕಳ್ಳ ಸುತ್ತಮುತ್ತ ಯಾರಾದರೂ ಬರುತ್ತಿದ್ದಾರೆಯೇ ಎಂದು ನಿಂತು ಕಾವಲು ಕಾಯುತ್ತಾನೆ.

ಅದರಲ್ಲಿದ್ದ ನಗದನ್ನೆಲ್ಲಾ ಚೀಲಕ್ಕೆ ತುಂಬಿಸಿಕೊಂಡು ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ‌. ಈ ದೇವಾಲಯದಲ್ಲಿ ಇದು ಮೂರನೇ ಕಳ್ಳತನವಾಗಿದ್ದು, ಹಿಂದಿನ ಘಟನೆಗಳಲ್ಲಿ ದೇವತೆಗಳ ಬೆಲೆಬಾಳುವ ವಸ್ತುಗಳು ಮತ್ತು ಕಾಣಿಕೆ ಪೆಟ್ಟಿಗೆಯನ್ನು ಸಹ ಕಳವು ಮಾಡಲಾಗಿದೆ ಎನ್ನಲಾಗಿದೆ. ​ಘಟನೆಗೆ ಸಂಬಂಧಿಸಿದಂತೆ ನಾಗಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಗಾಗಿ ತನಿಖೆ ಮಾಡುತ್ತಿದ್ದಾರೆ.