ದುಬೈ ಬೀಚ್‌ನಲ್ಲಿ ಕಿರುಕುಳ: ವಿದೇಶಿ ಮಹಿಳೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ ಬಾಂಗ್ಲಾ ಪ್ರಜೆ
Viral Video: ದುಬೈನ ಕಡಲತೀರ ವೊಂದರಲ್ಲಿ ವಿದೇಶಿ ಮಹಿಳಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ನೀರಿನಲ್ಲಿದ್ದ ವಿದೇಶಿ ಮಹಿಳೆಯರತ್ತ ತೆರಳಿ ಉದ್ದೇಶ ಪೂರ್ವಕವಾಗಿ ಮೈಗೆ ತಾಗಿ ಅನುಚಿತ ವರ್ತನೆ ತೋರಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಡಿಗರು ಆಕ್ರೋಶ ಹೊರಹಾಕಿದ್ದಾರೆ.
ದುಬೈ ನಲ್ಲಿ ಮಹಿಳಾ ಪ್ರವಾಸಿಗೆ ಕಿರುಕುಳ -
ದುಬೈ,ಸೆ.21: ಇಂದು ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರು ಕಿರುಕುಳವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ದುಬೈನ ಕಡಲತೀರ ವೊಂದರಲ್ಲಿ ವಿದೇಶಿ ಮಹಿಳಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ನೀರಿನಲ್ಲಿದ್ದ ವಿದೇಶಿ ಮಹಿಳೆಯರತ್ತ ತೆರಳಿ ಉದ್ದೇಶ ಪೂರ್ವಕವಾಗಿ ಮೈ ತಾಗಿಸಿ ಅನುಚಿತ ವರ್ತನೆ ತೋರಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈತನನ್ನು ದುಬೈನಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗ ಎಮ್ರಾನ್ ಹೊಸಿಯೆನ್ ಎಂದು ಗುರುತಿಸಲಾಗಿದೆ. ಕ್ಲಿಪ್ ವೈರಲ್ ಆದ ನಂತರ, ಸೋಷಿಯಲ್ ಮೀಡಿಯಾ ಬಳಕೆದಾರರು ಈತನ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ಕೆಲವು ವೀಕ್ಷಕರು ಇದು ಮಹಿಳೆಯರಿಗೆ ತೋರುವ ಅಗೌರವ ಎಂದು ಕಿಡಿಕಾರಿದ್ದಾರೆ.
ವಿಡಿಯೋ ನೋಡಿ:
ದುಬೈನ ಕಡಲತೀರವೊಂದರಲ್ಲಿ ವಿದೇಶಿ ಮಹಿಳೆಯರು ಅವರ ಪಾಡಿಗೆ ಖುಷಿಯ ಕ್ಷಣ ಕಳೆಯುತ್ತಿದ್ದರು. ಆಗ ಮಹಿಳಾ ಪ್ರವಾಸಿಯೊಬ್ಬರಿಗೆ ಬಾಂಗ್ಲಾದೇಶ ಮೂಲದ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಮೈ ತಾಗಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಆತ ವಿದೇಶಿ ಮಹಿಳೆಯತ್ತ ತೆರಳಿ ಆಕೆಗೆ ದೈಹಿಕವಾಗಿ ಸ್ಪರ್ಶಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
ಇಂತಹ ಕಾಮುಕರಿಗೆ ಯಾವ ರೀತಿಯ ಪಾಠ ಕಲಿಸಬೇಕೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಾರ್ವಜನಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಅಪರಿಚಿತರೊಂದಿಗೆ ಗೌರವಿಸುವುದು ಬಿಟ್ಟು ಕಿರುಕುಳ ನೀಡುತ್ತಿದ್ದಾರೆ.ಈತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ ಕೇಳಿಬಂದಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಎಮ್ರಾನ್ ಹುಸೇನ್ ಆಗಲಿ ಅಥವಾ ಸ್ಥಳೀಯ ಪೊಲೀಸರಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.