Viral Video: ಡೋರ್ ಕ್ಲೋಸ್ ಆಗುತ್ತಿದ್ದಂತೆ ಚಲಿಸುತ್ತಿದ್ದ ಟ್ರೈನ್ ಏರಿದ ಮಹಿಳೆ; ಕೊನೆಗೆ ಆಗಿದ್ದೇನು?
ಚೀನಾದ ಮಹಿಳೆಯೊಬ್ಬರು ರೈಲ್ವೆ ನಿಯಮ ಉಲ್ಲಂಘನೆ ಮಾಡಿ ತನ್ನ ಸ್ನೇಹಿತರಿಗಾಗಿ ಹರಸಾಹಸಪಟ್ಟು ರೈಲನ್ನು ನಿಲ್ಲಿಸಿದ್ದ ವಿಚಿತ್ರ ಘಟನೆಯೊಂದು ಶೆನ್ಜೆನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ತನ್ನ ಸ್ನೇಹಿತರು ಇನ್ನು ಬಂದಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯು ಟ್ರೈನ್ ಡೋರ್ ಅನ್ನು ಕ್ಲೋಸ್ ಮಾಡಲು ಬಿಡದೆ ರೈಲ್ವೇ ಸಿಬಂದಿ ಜತೆ ವಾಗ್ವಾದಕ್ಕೆ ಇಳಿದಿದ್ದಾಳೆ. ಈ ಘಟನೆಯ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

Chinese Woman Fights With Railway Staff

ಬೀಜಿಂಗ್: ರೈಲ್ವೇ ಸ್ಟೇಷನ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ರೈಲು ಪ್ರಯಾಣದಲ್ಲಿ ಅದೆಷ್ಟೇ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳಿದ್ದರೂ ಪ್ರಯಾಣಿಕರು ದಾವಂತದಲ್ಲಿ ನಿಯಮವನ್ನು ಮುರಿಯುತ್ತಲೇ ಇರುತ್ತಾರೆ. ಅದೇ ರೀತಿ ಚೀನಾದ ಮಹಿಳೆ ಯೊಬ್ಬರು ರೈಲ್ವೆ ನಿಯಮ ಉಲ್ಲಂಘನೆ ಮಾಡಿ ತನ್ನ ಸ್ನೇಹಿತರಿಗಾಗಿ ಹರಸಾಹಸಪಟ್ಟು ರೈಲನ್ನು ನಿಲ್ಲಿಸಿದ ವಿಚಿತ್ರ ಘಟನೆಯೊಂದು ಶೆನ್ಜೆನ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ತನ್ನ ಸ್ನೇಹಿತರು ಇನ್ನು ಬಂದಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯು ಟ್ರೈನ್ ಡೋರ್ ಅನ್ನು ಕ್ಲೋಸ್ ಮಾಡಲು ಬಿಡದೆ ರೈಲ್ವೇ ಸಿಬಂದಿ ಜತೆ ವಾಗ್ವಾದಕ್ಕೆ ಇಳಿದಿರುವ ಘಟನೆಯ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ (Viral Video) ಆಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲ್ವೇ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಈ ನಿಯಮ ಉಲ್ಲಂಘನೆ ಕುರಿತು ನೆಟ್ಟಿಗರು ಮಹಿಳೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಲಿಸುತ್ತಿದ್ದ ಟ್ರೈನ್‌ನ ಡೋರ್ ಇನ್ನೇನು ಕ್ಲೊಸ್ ಆಗಬೇಕು ಎನ್ನುವಷ್ಟರಲ್ಲಿ ಮಹಿಳೆಯೊಬ್ಬಳು ಸಣ್ಣ ಗ್ಯಾಪ್‌ನಲ್ಲಿ ರೈಲಿನ ಒಳಗೆ ಪ್ರವೇಶಿಸಿದ್ದಾಳೆ. ಬಳಿಕ ತನ್ನ ಸ್ನೇಹಿತರಿಗಾಗಿ ರೈಲು ಡೋರ್ ಮುಚ್ಚದಂತೆ ಬಾಗಿಲ ಬಳಿಯೆ ನಿಂತು ಬಿಟ್ಟಿದ್ದಾಳೆ. ಅಂತೆಯೆ ಇಲ್ಲಿ ರೈಲು ಕ್ಷಣಾರ್ಧದಲ್ಲಿ ಹೊರಡಲು ಸಿದ್ಧವಾಗಿದೆ. ಆದರೆ ಮಹಿಳೆ ಬಾಗಿಲು ಮುಚ್ಚಲು ತಡೆಯಾಗಿದ್ದಾಳೆ. ಅಷ್ಟೇ ಅಲ್ಲದೆ ರೈಲ್ವೇ ಅಧಿಕಾರಿಗಳ ಜತೆಯೇ ವಾಗ್ವಾದಕ್ಕೆ ಇಳಿದಿದ್ದಾಳೆ. ನೀವು ರೈಲಿನಿಂದ ಕೆಳಗಿಳಿಯಿರಿ ಇಲ್ಲವೆ ಡೋರ್ ಕ್ಲೋಸ್ ಆಗಲು ಬಿಡಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮಹಿಳೆ ಅಧಿಕಾರಿಗಳ ಸೂಚನೆ ಉಲ್ಲಂಘಿಸಿದ್ದ ದೃಶ್ಯವನ್ನು ವೈರಲ್ ವಿಡಿಯೊದಲ್ಲಿ ನೋಡಬಹುದು.
Passenger of HSR in China tried to stop the train from departing so that her family members who arrived late could board it. pic.twitter.com/Nrj08y7gi0
— @ (@anthraxxx781) April 19, 2025
ಅಧಿಕಾರಿಗಳು ಆಕೆಯನ್ನು ಕೆಳಗಿಳಿಸಲು ಪ್ರಯತ್ನಿಸಿದರು ಕೂಡ ಮಹಿಳೆ ಮಾತ್ರ ಅದ್ಯಾವುದ್ದಕ್ಕೂ ತಲೆ ಕೆಡಿಸಿಕೊಳ್ಳದೆ ದೂರದಲ್ಲಿರುವ ತನ್ನ ಸಹ ಪ್ರಯಾಣಿಕರಿಗೆ ಬೇಗ ಬರುವಂತೆ ಕೂಗಿ ಹೇಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕೊನೆಗೂ ಸ್ನೇಹಿತರು ರೈಲು ಹತ್ತುವಲ್ಲಿ ಯಶಸ್ವಿಯಾಗಿದ್ದು ರೈಲು ಸಮಯಕ್ಕೆ ಸರಿಯಾಗಿ ಹೊರಟಿದೆ. ಮಹಿಳೆಯ ಇಂತಹ ನಡವಳಿಕೆಯ ವಿರುದ್ಧ ಇದೀಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: Viral Video: ಎಂಥಾ ಕಾಲ ಬಂತಪ್ಪ! ಫೋನ್ ಕಸಿದುಕೊಂಡ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ!
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು ಸಿಬಂದಿ ತಕ್ಷಣವೇ ಆ ಮಹಿಳೆಯನ್ನು ಹೊರಹಾಕಬೇಕಿತ್ತು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆ ತನ್ನ ಸ್ನೇಹಿತರಿಗಾಗಿ ಇಷ್ಟು ದೊಡ್ಡ ರಿಸ್ಕ್ ತೆಗೆದು ಕೊಂಡಿದ್ದು ನಿಜಕ್ಕೂ ಆಶ್ಚರ್ಯ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದ್ದ ಚೀನಾ ಮಹಿಳೆಯನ್ನು ಕ್ಸಿಯಾಮೆನ್‌ನಲ್ಲಿ ಪತ್ತೆಹಚ್ಚಿ ರೈಲು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂತಹ ನಡವಳಿಕೆಯಿಂದ ರೈಲು ಪ್ರಯಾಣದಲ್ಲಿ ವಿಳಂಬವಾದರೆ ದಂಡ ಮತ್ತು ಪ್ರಯಾಣ ನಿಷೇಧ ಸೇರಿದಂತೆ ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾದ ರೈಲ್ವೆ ಅಧಿಕಾರಿಗಳು ಮಹಿಳೆಗೆ ಸೂಚನೆ ನೀಡಿದ್ದಾರೆ.