'ಕ್ಯಾಂಪ್ ಬರ್ಗರ್’ನಲ್ಲಿ ಜಿರಳೆ ಪತ್ತೆ: ಸಿಬ್ಬಂದಿಯ ದುರಹಂಕಾರ ವರ್ತನೆಗೆ ನೆಟ್ಟಿಗರು ಕಿಡಿ!
Viral Video: ಪುಣೆಯ ಕ್ಯಾಂಪ್ ಬರ್ಗರ್ ಔಟ್ ಲೆಟ್ ನಲ್ಲಿ ಗ್ರಾಹಕರೊಬ್ಬರಿಗೆ ನೀಡಿದ ಬರ್ಗರ್ ನಲ್ಲಿ ಜಿರಳೆ ಪತ್ತೆಯಾಗಿದೆ. ಇದು ಆಹಾರ ನೈರ್ಮಲ್ಯದ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿದೆ. ಆಹಾರ ನೈರ್ಮಲ್ಯ ಮಾನದಂಡಗಳ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ..
'ಬರ್ಗರ್’ನಲ್ಲಿ ಜಿರಳೆ ಪತ್ತೆ -
ಪುಣೆ, ಮೇ 12: ಇತ್ತೀಚೆಗೆ ಆಹಾರ ಅಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತ ಅನೇಕ ಘಟನೆಗಳು ನಡೆದಿವೆ. ಕಲಬೆರಕೆ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಿ ಗ್ರಾಹಕರಿಗೆ ವಂಚನೆ ಮಾಡು ವುದು, ನೈರ್ಮಲ್ಯ ಕಾಪಾಡದೇ ಇರುವುದು ಇತ್ಯಾದಿ. ಈ ನಡುವೆ ಆಹಾರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸುವ ಘಟನೆಯೊಂದು ನಡೆದಿದೆ. ಪುಣೆಯ (Pune Video) ಕ್ಯಾಂಪ್ ಬರ್ಗರ್ ಔಟ್ ಲೆಟ್ ನಲ್ಲಿ ಗ್ರಾಹಕರೊಬ್ಬರಿಗೆ ನೀಡಿದ ಬರ್ಗರ್ ನಲ್ಲಿ ಜಿರಳೆ ಪತ್ತೆಯಾಗಿದೆ. ಇದು ಆಹಾರ ನೈರ್ಮಲ್ಯದ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿದೆ.
ಪುಣೆಯ ಜನಪ್ರಿಯ 'ಕ್ಯಾಂಪ್ ಬರ್ಗರ್' ಔಟ್‌ಲೆಟ್ ನಲ್ಲಿ ಈ ಘಟನೆ ನಡೆದಿದ್ದು ಆಹಾರ ನೈರ್ಮಲ್ಯ ಮಾನದಂಡಗಳ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿ ದ್ದಾರೆ. ಗ್ರಾಹಕರೊಬ್ಬರು ಬರ್ಗರ್ ತಿನ್ನಲೆಂದು ಇಲ್ಲಿಗೆ ಆಗಮಿಸಿದ್ದರು. ಆದರೆ ತಿನ್ನುವ ಸಮಯದಲ್ಲಿ ಬರ್ಗರ್ ನ ಒಳಗಡೆ ಜೀರಳೆ ಪತ್ತೆಯಾಗಿದೆ. ಇದು ಎರಡನೇ ಭಾರೀ ಕಂಡು ಬಂದ ಪ್ರಕರಣವಾಗಿದ್ದು ಈ ಹಿಂದೆಯೂ ಬರ್ಗರ್ ನಲ್ಲಿ ಜೀರಳೆ ಪತ್ತೆಯಾಗಿತ್ತು.
ವಿಡಿಯೋ ನೋಡಿ:
Cockroach Found Again in Pune’s Camp Burger? Customers Raise Serious Hygiene Concerns
— Pune Mirror (@ThePuneMirror) May 10, 2026
A fresh controversy has erupted around Pune’s popular ‘Camp Burger’ outlet after a customer found a full cockroach inside a burger, just a day after another customer claimed to have found a… pic.twitter.com/WLtieMU8DA
ಜೀರಳೆ ಬಗ್ಗೆ ಗ್ರಾಹಕನು ಪ್ರಶ್ನೆ ಮಾಡಿದ್ದಾನೆ. ಆಗ ಸಿಬ್ಬಂದಿಯೂ ಇದು ಪ್ರತಿದಿನವೂ ನಡೆಯುತ್ತದೆ ಎಂದು ಅಹಂಕಾರದಿಂದ ಮಾತನಾಡಿಸಿದ್ದಾನೆ. ದುರಹಂಕಾರ ಮತ್ತು ನಿರ್ಲಕ್ಷ್ಯ ಮಾಡಿ ಪ್ರತಿಕ್ರಿಯೆ ನೀಡಿದ್ದಾನೆ. ಈ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಿಬ್ಬಂದಿಯ ವರ್ತನೆಗೆ ಕಿಡಿಕಾರಿದ್ದಾರೆ. ಬಳಕೆದಾರರು ಪುಣೆಯ ಔಟ್ಲೆಟ್ ಅನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ. ಪುಣೆಯ ದೊಡ್ಡ ಹೆಸರಿನ ರೆಸ್ಟೋರೆಂಟ್‌ಗಳಲ್ಲಿ ಆಹಾರವು ನಿಜವಾಗಿಯೂ ಎಷ್ಟು ಸುರಕ್ಷಿತವಾಗಿದೆ ಎಂದು ಹಲವರು ಪ್ರಶ್ನಿಸಿದರು.
Viral Video: ಮಿನರಲ್ ವಾಟರ್ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ರೈಲಿನಲ್ಲಿ ಮಾರಾಟ; ವಿಡಿಯೊ ಕಂಡು ನೆಟ್ಟಿಗರು ಗರಂ
ಬಳಕೆದಾರರೊಬ್ಬರು ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ?” ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರ “ಇದು ಕೇವಲ ಅಜಾಗರೂಕತೆ ಯಲ್ಲ, ಇದು ಗ್ರಾಹಕರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದಿದ್ದಾರೆ. ಅನೇಕರು ಪುಣೆಯ ಎಫ್‌ಡಿಎ (FDA) ಅಧಿಕಾರಿಗಳು ತಕ್ಷಣವೇ ಈ ಹೋಟೆಲ್ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಕ್ಯಾಂಪ್ ಬರ್ಗರ್ ಗೆ ವಿದ್ಯಾರ್ಥಿಗಳು, ಮತ್ತು ಕಚೇರಿಗೆ ಹೋಗುವವರನ್ನು ಪ್ರತಿದಿನ ಆಕರ್ಷಿಸುವ ಪ್ರಸಿದ್ಧ ಸ್ಥಳವಾಗಿದೆ. ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಆಹಾರ ನಿಜವಾಗಿಯೂ ಎಷ್ಟು ಸುರಕ್ಷಿತ ವಾಗಿದೆ ಎಂದು ಈ ಪ್ರಕರಣವು ದೊಡ್ಡ ಚರ್ಚೆಯನ್ನು ಪ್ರಾರಂಭಿಸಿದೆ. ಆದರೆ ಇಲ್ಲಿಯವರೆಗೆ, ರೆಸ್ಟೋರೆಂಟ್‌ನ ಆಡಳಿತ ಮಂಡಳಿಯು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.