ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೀಲ್ ಮಾಡಿದ ಥಮ್ಸ್ ಅಪ್ ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ; ವಿಡಿಯೋ ನೋಡಿ

Viral Video; ಇದೀಗ ಸೀಲ್ ಮಾಡಿದ ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ ನಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಇದು ಅನೇಕ ಬಳಕೆದಾರರನ್ನು ಆಘಾತ ಮತ್ತು ಕಳವಳಕ್ಕೆ ಒಳಪಡಿಸಿದೆ. ಆದರೆ ಘಟನೆಯ ನಿಖರವಾದ ಸ್ಥಳ ಇನ್ನು ತಿಳಿದು ಬಂದಿಲ್ಲ. ಬಳಕೆದಾರರು ಕಂಪನಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಥಮ್ಸ್ ಅಪ್ ಬಾಟಲಿಯೊಳಗೆ ಸತ್ತ ಹಲ್ಲಿ ಪತ್ತೆ: ನೆಟ್ಟಿಗರ ಆಕ್ರೋಶ

ಥಮ್ಸ್ ಅಪ್ ಬಾಟಲಿಯೊಳಗೆ ಸತ್ತ ಹಲ್ಲಿ ಪತ್ತೆ -

Profile
Pushpa Kumari May 12, 2026 3:07 PM

ನವದೆಹಲಿ, ಮೇ 12: ಇತ್ತೀಚೆಗೆ ಗ್ರಾಹಕರಿಗೆ ಮಾರಾಟ ಮಾಡುವ ಆಹಾರದಲ್ಲಿ ಕಳಪೆ ಪದಾರ್ಥಗಳನ್ನು ಬಳಕೆ ಮಾಡುತ್ತಿರುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಇದೀಗ ಸೀಲ್ ಮಾಡಿದ ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ ನಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ.ಇದು ಅನೇಕ ಬಳಕೆದಾರರನ್ನು ಆಘಾತ ಮತ್ತು ಕಳವಳಕ್ಕೆ ಒಳಪಡಿಸಿದೆ. ಆದರೆ ಘಟನೆಯ ನಿಖರವಾದ ಸ್ಥಳ ಇನ್ನು ತಿಳಿದು ಬಂದಿಲ್ಲ. ಬಳಕೆದಾರರು ಕಂಪನಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಇತ್ತೀಚೆಗೆ ಕಿಂಗ್‌ಫಿಶರ್ ಬಿಯರ್‌ನ ಸೀಲ್ ಮಾಡಿದ ಬಾಟಲಿಯೊಳಗೆ ಜೀವಂತ ಮೀನಿನ ಮರಿಯೊಂದು ಪತ್ತೆಯಾಗಿತ್ತು. ಹೈದರಾಬಾದ್‌ನ ಮಲ್ಲಾಪುರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿತ್ತು‌. ಈ ವಿಚಾರವಾಗಿ ಗ್ರಾಹಕ ಮತ್ತು ಅಂಗಡಿ ಸಿಬ್ಬಂದಿ ನಡುವೆ ಜಗಳ ನಡೆದಿದ್ದು ಈ ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಥಮ್ಸ್ ಅಪ್ ಬಾಟಲಿಯೊಳಗೆ ಸತ್ತ ಹಲ್ಲಿಯೊಂದು ಕಂಡು ಬಂದಿದೆ.

ವಿಡಿಯೋ ನೋಡಿ:



ವ್ಯಕ್ತಿಯೊಬ್ಬರು ಥಮ್ಸ್ ಅಪ್ ಬಾಟಲಿ ಖರೀದಿ ಮಾಡಿದ್ದಾಗ ಬಾಟಲಿಯೊಳಗೆ ಏನೋ ವಸ್ತು ಇರುವುದು ಪತ್ತೆ ಮಾಡಿದ್ದಾರೆ. ಕೂಡಲೇ ಅವರು ಬಾಟಲಿಯನ್ನು ತೆರೆದು ಪಾನೀಯವನ್ನು ಪಾತ್ರೆಗೆ ಸುರಿದಾಗ,ಅದರಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ.‌ ಗ್ರಾಹಕರು ಕಂಪನಿ ಅಥವಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಯಾವುದೇ ಅಧಿಕೃತ ದೂರು ಸಲ್ಲಿಸಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ.

Viral Video: ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಇನ್​ಫ್ಲುಯೆನ್ಸರ್‌

ತಯಾರಕರಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ವೈರಲ್ ಆದ ಮತ್ತೊಂದು ಪ್ರಕರಣದಲ್ಲಿ, ಭಾರತೀಯ ರೈಲ್ವೆಯಲ್ಲಿ ಮೊಟ್ಟೆಯ ಬಿರಿಯಾನಿಯಲ್ಲಿ ಜೀವಂತ ಹುಳುಗಳು ಕಂಡುಬಂದಿದ್ದು ಆಕ್ರೋಶವನ್ನು ಹುಟ್ಟುಹಾಕಿತ್ತು. ಎಸಿ ಕೋಚ್‌ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಆರ್ಡರ್ ಮಾಡಿದ್ದ ಎಗ್ ಬಿರಿಯಾನಿಯಲ್ಲಿ ಹುಳುಗಳು ಇರುವುದನ್ನು ಕಂಡು ಬೆಚ್ಚಿ ಬಿದ್ದಿದ್ದರು.ಈ ಎರಡು ಘಟನೆಗಳು ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.